Advertisement

ಮನೆಯನ್ನು ತಂಪಾಗಿರಿಸಿ

09:56 PM Nov 01, 2019 | mahesh |

ವಾತಾವರಣದಲ್ಲಿ ಇತ್ತೀಚೆಗೆ ಏರುಪೇರುಗಳು ಸಾಮಾನ್ಯವಾಗಿವೆ. ಮಳೆಗಾಲ ಮುಗಿಯುತ್ತಿದ್ದಂತೆ ಸೆಕೆಯೂ ಜೋರಾಗ ತೊಡಗಿದೆ. ಪರಿಸರಕ್ಕೆ ಮನುಷ್ಯರು ಮಾಡುವ ಹಾನಿಯ ಪರಿಣಾಮವಾಗಿ ವಾತಾವರಣದಲ್ಲಿ ವಿಪರೀತ ಬದಲಾವಣೆಗಳುಂಟಾಗುತ್ತವೆ. ಸೆಕೆಯ ಸಮಯದಲ್ಲಿ ಮನೆಯ ಒಳಗೆ ನಿಲ್ಲಲಾಗದಷ್ಟು ಬಿಸಿ. ಅದಕ್ಕೆ ಹೆಚ್ಚಿನವರೂ ಫ್ಯಾನ್‌, ಎ.ಸಿಗಳ ಮೊರೆ ಹೋಗುತ್ತಾರೆ. ಇದು ಕೇವಲ ಯಾಂತ್ರಿಕವಾದ ಒಂದು ಕ್ರಿಯೆ. ಅದು ಚಲಿಸುವವರೆಗೆ ಮನೆಯ ಒಳಗಡೆ ತಂಪಿನ ಅನುಭವವಾಗುತ್ತದೆ. ಇದಕ್ಕಿಂತ ಮನೆಯನ್ನು ನೈಸರ್ಗಿಕವಾಗಿ ತಂಪು ಮಾಡುವ ಅಥವಾ ಹೆಚ್ಚು ಸಮಯವಾಗಿಡಲು ಹಾಗೂ ಸೆಕೆ ಕಮ್ಮಿ ಮಾಡಲು ಕೆಲವು ಸಿಂಪಲ್‌ ಉಪಾಯಗಳನ್ನು ಬಳಸಬಹುದು,.

Advertisement

ಕಾಟನ್‌ ವಸ್ತ್ರಗಳ ಬಳಕೆ ಮಾಡಿ
ಹತ್ತಿ ಅಥವಾ ಕಾಟನ್‌ ವಸ್ತ್ರಗಳನ್ನು ಮನೆಯಲ್ಲಿ ಅಧಿಕವಾಗಿ ಬಳಸಿ. ಉಡುಪು, ಕರ್ಟನ್‌, ಬೆಡ್‌ಶೀಟ್‌, ದಿಂಬು ಹೊದಿಕೆ ಮೊದಲಾದ ಎಲ್ಲ ವಸ್ತುಗಳ ಹತ್ತಿಯದ್ದಾಗಿದ್ದರೆ ಹೊರಗಿನ ಸೆಕೆ ಅನುಭವಕ್ಕೆ ಕಮ್ಮಿ ಬರುತ್ತದೆ. ಹಾಗೂ ಸೆಕೆಯಿಂದ ಬರುವ ರೋಗಗಲು ಕಡಿಮೆಯಾಗುತ್ತದೆ.

ಕರಿದ ತಿಂಡಿಗಳ ಸೇವನೆ ಬೇಡ
ಎಣ್ಣೆ ಅಂಶವಿರುವ ಪದಾರ್ಥ ಅಥವಾ ಕರಿದ ತಿಂಡಿಗಳ ಸೇವನೆ ಸೆಕೆಯ ಸಮಯದಲ್ಲಿ ಒಳಿತಲ್ಲ. ಇದನ್ನು ಸೇವಿಸುವುದರಿಂದ ಸೆಕೆಯ ಅನುಭವ ಅಧಿಕವಾಗುತ್ತದೆ. ಹಣ್ಣು ಹಂಪಲು ಹಾಗೂ ನೀರಿನಾಂಶ ಅಧಿಕವಿರುವ ಆಹಾರಗಳನ್ನು ಅಧಿಕವಾಗಿ ಸೇವಿಸಿ.

ಲೈಟ್‌ಗಳ ಬಳಕೆ ಕಡಿಮೆ
ಸೆಕೆಯ ಸಮಯದಲ್ಲಿ ಮನೆಯಲ್ಲಿ ಆದಷ್ಟು ಲೈಟ್‌, ಬಲ್ಬ್ಗಳ ಬಳಕೆಯನ್ನು ಕಡಿಮೆ ಮಾಡಬೇಕು. ಇದರಿಂದ ಮನೆಯ ವಾತಾವರಣ ಹೆಚ್ಚು ತಂಪಾಗಿರುತ್ತದೆ. ಬಲ್ಬ್ ಗಳ ಕಿರಣವನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.

ಫ್ಯಾನ್‌ ಗಾಳಿಯನ್ನು ತಂಪಾಗಿಸಿ
ಐಸ್‌ಪೀಸ್‌ಗಳನ್ನು ಸಣ್ಣ ಐಸ್‌ ಬಾಕ್ಸ್‌ ನಲ್ಲಿ ಹಾಕಿ ಟೇಬಲ್‌ ಫ್ಯಾನ್‌ನ ಪಕ್ಕ ಇಡಿ. ಇದರಿಂದ ಗಾಳಿ ತಂಪಾಗುತ್ತದೆ.

Advertisement

ಒದ್ದೆ ಬಟ್ಟೆ
ಮನೆಯ ಕಿಟಿಕಿಗಳಿಗೆ ಒದ್ದೆ ಬಟ್ಟೆಯನ್ನು ನೇತು ಹಾಕಬೇಕು. ಇದರಿಂದ ಹೊರಗಿನ ಬಿಸಿ ಮನೆಯ ಒಳಗೆ ಪ್ರವೇಶಿಸುವುದು ಕಡಿಮೆಯಾಗುತ್ತದೆ. ಹೀಗೆ ಕೆಲವು ಸಣ್ಣಪುಟ್ಟ ಉಪಾಯಗಳನ್ನು ಬಳಸಿ ಸೆಕೆಯ ವಾತಾವರಣದಲ್ಲಿ ಮನೆಯನ್ನು ತಂಪಾಗಿರಿಸಬಹುದು.

- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next