Advertisement

“ಸ್ವತ್ಛತೆ ದಿನಕ್ಕೆ ಸೀಮಿತವಾಗಿರದೆ ನಿರಂತರವಾಗಿರಲಿ’

03:14 PM Mar 16, 2017 | |

ಉಪ್ಪಿನಂಗಡಿ : ಸ್ವತ್ಛ ಭಾರತ ನರೇಂದ್ರ ಮೋದಿಯವರ ಪರಿಕಲ್ಪನೆಯಾಗಿದ್ದು, ನಮಗೆ ಜೀವಜಲವುಣಿಸುವ ದಕ್ಷಿಣ ಕಾಶಿಯ ಗಂಗೆಯೆನಿಸಿದ ನೇತ್ರಾವತಿ, ಕುಮಾರಧಾರದ ನದಿಗಳನ್ನು ಮಲೀನವಾಗದಂತೆ ಕಾಪಾಡುವ ಜವಾಬ್ದಾರಿ ಪ್ರತಿಯೋರ್ವರದ್ದಾಗಿದೆ. ಸ್ವತ್ಛತೆಯೆಂಬುದು ಒಂದು ದಿನಕ್ಕೆ ಸೀಮಿತವಾಗಿರದೇ ನಿರಂತರವಾಗಿ ನಡೆಯಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದರು.

Advertisement

ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ಸನ್ನಿಧಿ ಬಳಿಯ ನೇತ್ರಾವತಿ-ಕುಮಾರಧಾರ ನದಿಗಳ ಸಂಗಮ ತೀರದಲ್ಲಿ ಬಿಜೆಪಿ ಉಪ್ಪಿನಂಗಡಿ ಗ್ರಾಮ ಸಮಿತಿಯ ವತಿಯಿಂದ ಮಂಗಳವಾರ ನಡೆದ ಸ್ವತ್ಛತಾ ಶ್ರಮದಾನದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಪ್ರತಿ ಮನೆಯ ಪರಿಸರ, ಗ್ರಾಮ, ನಗರಗಳಲ್ಲಿ ಸ್ವತ್ಛತಾ ಕಾರ್ಯ ನಡೆದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗಿ ಸ್ವತ್ಛ ಭಾರತದ ಕನಸು ನನಸಾಗಲು ಸಾಧ್ಯ. ಇದಕ್ಕಾಗಿ ಪ್ರತಿಯೋರ್ವರು ಮುಂದಡಿಯಿಡಬೇಕು ಎಂದರು.

ಸುಮಾರು 50ಕ್ಕೂ ಅಧಿಕ ಮಂದಿ ಸಂಜೆ 4ರಿಂದ 6ರವರೆಗೆ ನದಿಗಳ ಸಂಗಮ ಸ್ಥಳದಲ್ಲಿ ಸುತ್ತಮುತ್ತ ಸ್ವತ್ಛತಾ ಕಾರ್ಯ ನಡೆಸಿದರು. ದೇವಾಲಯದಲ್ಲಿ ಇತ್ತೀಚೆಗಷ್ಟೇ ಮಖೆ ಜಾತ್ರೆ ಮುಗಿದಿದ್ದು, ಇದರಿಂದಾಗಿ ನದಿ ತೀರದಲ್ಲಿ ಪ್ಲಾಸ್ಟಿಕ್‌ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳು ಬಿದ್ದಿದ್ದು, ಇವನ್ನೆಲ್ಲಾ ಹೆಕ್ಕಿ ರಾಶಿ ಹಾಕಿ ಸುಡಲಾಯಿತು.

ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಹಾಗೂ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಪ್ರಕಾಶ್‌ ರೈ ಶುಭ ಹಾರೈಸಿದರು. 

Advertisement

ಶ್ರಮದಾನದಲ್ಲಿ ಬಿಜೆಪಿ ಪುತ್ತೂರು ತಾಲೂಕು ಯುವಮೋರ್ಚಾ ಅಧ್ಯಕ್ಷ ಸುನೀಲ್‌ ಕುಮಾರ್‌ ದಡ್ಡು,  ಪುತ್ತೂರು ಮಂಡಲದ  ಉಪಾಧ್ಯಕ್ಷೆ  ಉಷಾ ಮುಳಿಯ, ತಾಲೂಕು ಮಹಿಳಾ ಮೋರ್ಚಾದ ಶಶಿಕಿರಣ ಭಟ್‌ ಬೊಳ್ಳಾವು, ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್‌ ಅತ್ರಮಜಲು, ಜಿಲ್ಲಾ ಪಂಚಾಯತ್‌ ಸದಸ್ಯೆ ಶಯನಾ ಜಯಾನಂದ್‌, ತಾಲೂಕು ಪಂಚಾಯತ್‌ ಸದಸ್ಯ ಮುಕುಂದ ಗೌಡ ಬಜತ್ತೂರು, ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ಶೌಖತ್‌ ಅಲಿ, ಮಾಜಿ ಸದಸ್ಯ ಉಮೇಶ್‌ ಶೆಣೈ ನಂದಾವರ, ಪ್ರಮುಖರಾದ ಚಂದ್ರಶೇಖರ ಮಡಿವಾಳ, ಜಗದೀಶ್‌ ಶೆಟ್ಟಿ, ರಾಧಾಕೃಷ್ಣ ಭಟ್‌ ಬೊಳ್ಳಾವು, ಪ್ರಸಾದ್‌ ಭಂಡಾರಿ, ಉದ್ಯಮಿ ಗಣೇಶ್‌ ಭಟ್‌, ಹರಿರಾಮಚಂದ್ರ, ಸದಾನಂದ ಅಡೆಕ್ಕಲ್‌, ಸೋಮೇಶ್‌, ನ್ಯಾಯವಾದಿ ಸಂದೇಶ್‌ ನಟ್ಟಿಬೈಲ್‌, ಸದಾನಂದ ಕಾರ್‌ಕ್ಲಬ್‌, ಯತೀಶ್‌ ಶೆಟ್ಟಿ ಸುವ್ಯ, ರಾಜೇಶ್‌ ನೆಕ್ಕರೆ, ಆದರ್ಶ ಕಜೆಕ್ಕಾರ್‌, ಮಹೇಶ್‌ ನಾಯಕ್‌, ಸುಂದರಿ, ಕವಿತಾ, ಭಾರತಿ, ಕಂಗ್ವೆ ವಿಶ್ವನಾಥ ಶೆಟ್ಟಿ, ರಮೇಶ್‌ ಭಂಡಾರಿ, ಬಾಬು ತಾಳೆಹಿತ್ಲು, ಗಂಗಾಧರ ಟೈಲರ್‌, ಜಯಂತ ಪೊರೋಳಿ, ಚಂದ್ರಾವತಿ ಮತ್ತಿತರರು ಭಾಗವಹಿಸಿದರು.

ಪಾಲ್ಗೊಂಡವರಿಗೆ ಪಾನೀಯ, ಉಪಾಹಾರ ಶ್ರಮದಾನದಲ್ಲಿ  ತೊಡಗಿಸಿಕೊಂಡವರಿಗೆ ಉದ್ಯಮಿ ಗಣೇಶ್‌ ಭಟ್‌ ಪಾನೀಯ ವ್ಯವಸ್ಥೆಯನ್ನು ಕಲ್ಪಿಸಿದರೆ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವತಿಯಿಂದ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next