Advertisement

ಬೆಂಗಳೂರು: ಭಯೋತ್ಪಾದನೆ ಅಥವಾ ದೇಶವಿರೋಧಿ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಚಟುವಟಿಕೆಗಳ ಬಗ್ಗೆ ಜಾಗೃತೆ ವಹಿಸಬೇಕು. ಜತೆಗೆ ದೇಶವಿರೋಧಿ ಚಟುವಟಿಕೆಗಳಿಗೆ ಜೈಲುಗಳು ಕೇಂದ್ರ ಸ್ಥಾನವಾಗದಂತೆ ಮುಂಜಾಗ್ರತ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯದ ಕೇಂದ್ರ ಕಾರಾಗೃಹಗಳಿಗೆ ಪತ್ರ ಬರೆದಿದೆ.

Advertisement

ಇತ್ತೀಚೆಗೆ ದೇಶದ ರಕ್ಷಣೆ ಕುರಿತು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳವಿರುದ್ಧ ಕೆಲ ಉದ್ದೇಶಿತ ಸಂಘಟನೆಗಳು ಭಾರೀ ಷಡ್ಯಂತ್ರ ರೂಪಿಸುತ್ತಿವೆ. ಹೀಗಾಗಿಭಯೋತ್ಪಾದನೆ ಅಥವಾ ದೇಶವಿರೋಧಿಚಟುವಟಿಕೆ ಮತ್ತು ನಕ್ಸಲ್‌ ಕಾರ್ಯದಲ್ಲಿತೊಡಗಿ ಈ ಹಿಂದೆ ಜೈಲು ಸೇರಿದ್ದ ಕೈದಿಗಳನ್ನುಗುರಿಯಾಗಿಸಿಕೊಂಡು ಸಂಘಟನೆಗಳುವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿವೆ ಎಂಬಮಾಹಿತಿ ಮೇರೆಗೆ ಈ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್‌ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳ ಪೈಕಿ ಇಬ್ಬರು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ. ಇದರೊಂದಿಗೆ ಬೆಂಗಳೂರು ಸೇರಿ ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ದತೆ ನಡೆಸಿದ ಆರೋಪದಲ್ಲೂ ಕೆಲ ಉಗ್ರ ಸಂಘಟನೆ ಸದಸ್ಯರು ಜೈಲಿನಲ್ಲಿದ್ದಾರೆ. ಹೀಗಾಗಿ ಅವರ ಕಾರ್ಯಚಟುವಟಿಕೆಗಳು ಏನು? ಅವರಭೇಟಿಗೆ ಯಾರು ಬರುತ್ತಾರೆ?ಯಾರೊಂದಿಗೆ ಫೋನ್‌ನಲ್ಲಿ(ಜೈಲಿನಲ್ಲಿರುವ ಸಾರ್ವಜನಿಕಫೋನ್‌) ಮಾತನಾಡುತ್ತಾರೆ? ಎಂಬ ಕುರಿತು ಆಗಾಗ್ಗೆ ಮಾಹಿತಿ ಸಂಗ್ರಹಿಸುತ್ತಿರಬೇಕು. ಪ್ರಮುಖವಾಗಿ ಗುಜರಾತ್‌ ಸ್ಫೋಟ ಪ್ರಕರಣದಆರೋಪಿಗಳು ಹಾಗೂ ರಾಜ್ಯದ ಆರೋಪಿಗಳು ಪರಸ್ಪರ ಭೇಟಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.

ಪರಿವರ್ತನೆಗೆ ಆದ್ಯತೆ ನೀಡಿ: ಇದೇ ವೇಳೆ ಜೈಲುಗಳು ಮತ್ತು ಕೈದಿಗಳ ಪರಿವರ್ತನೆಗೆ ಆದ್ಯತೆ ನೀಡಬೇಕು. ಸೂಕ್ತ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜೈಲಿನ ಆಡಳಿತವಿಭಾಗ ಪರಿಣಾಮಕಾರಿಯಾಗಿ ಹೊಸ ಯೋಜನೆಗಳ ಮೂಲಕ ಕೈದಿಗಳ ಒತ್ತಡ ಮಾನಸಿಕ ಸ್ಥಿತಿಮಿತತೆ ನಿಯಂತ್ರಿಸಲು ಮನೋಶಾಸ್ತ್ರಜ್ಞರನ್ನು ನೇಮಿಸಬೇಕು. ಆಗಾಗ್ಗೆ ಕೈದಿಗಳ ದೈಹಿಕ ಮತ್ತು ಮಾನಸಿಕ ತಪಾಸಣೆ ನಡೆಸಬೇಕು. ಇದರೊಂದಿಗೆ ಜೈಲಿನ ಅಧಿಕಾರಿ-ಸಿಬ್ಬಂದಿಗೆ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಕಾರ್ಯಾಗಾರ ಏರ್ಪಡಿಸಿ ತರ ಬೇತಿ ನೀಡಬೇಕು. ಒಂದು ಅಥವಾ ಎರಡು ವರ್ಷಕ್ಕೊಮ್ಮೆ ಜೈಲಿನ ಎಲ್ಲ ಹಂತದ ಅಧಿಕಾರಿ-ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು.

ಕೈದಿಗಳು ನಕರಾತ್ಮಕ ಚಿಂತನೆಗಳಿಗೆ ಪ್ರಭಾವಿತರಾಗದಂತೆ ಅವರಿಗೆ ವ್ಯಾಸಂಗ ಮಾಡಲು ಗ್ರಂಥಾಲಯದಲ್ಲಿರುವ ಸಾಹಿತ್ಯ ಹಾಗೂ ಪುಸ್ತಕಗಳ ಕುರಿತು ಪರಿಶೀಲಿಸಬೇಕು. ಜೈಲಿನ ಕಾರ್ಖಾನೆಗಳಲ್ಲಿ ಸೂಕ್ತ ತರಬೇತಿ ನೀಡಿ, ಬಿಡುಗಡೆ ಬಳಿಕ ಹೊಸ ಜೀವನಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು. ವೈದ್ಯಕೀಯ ಸೌವಲತ್ತುಗಳ ಹೆಚ್ಚಳ ಮಾಡಬೇಕು. ಮೊದಲ ಬಾರಿಗೆ ಅಪರಾಧ ಎಸಗಿ ಅಪರಾಧಿ ಮತ್ತು ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಅಪರಾಧಿಯನ್ನು ಪ್ರತ್ಯೇಕ ಬ್ಯಾರೆಕ್‌ನಲ್ಲಿ ಇಡಬೇಕು. ಅದರಿಂದ ಮೊದಲ ಬಾರಿಗೆ ಅಪರಾಧ ಎಸಗುವ ಕೈದಿಗಳಿಗೆ ಪ್ರಭಾವ ಬೀರುವುದಿಲ್ಲ ಸೇರಿ ಸುಮಾರು 30ಕ್ಕೂ ಹೆಚ್ಚು ಅಂಶಗಳನ್ನು ಪತ್ರದಲ್ಲಿ ಉಲ್ಲೇಖೀಸಿದೆ. ಜತೆಗೆ ಈ ಕುರಿತು ತೆಗೆ ದುಕೊಂಡಿರುವ ಕ್ರಮಗಳ ಕುರಿತು ನಿಗದಿತ ಸಮಯದಲ್ಲಿ ಉತ್ತರ ನೀಡಬೇಕು ಎಂದು ಸೂಚಿಸಿದೆ.

Advertisement

ಎನ್‌ಜಿಒಗಳ ಹಿನ್ನೆಲೆ ಸಂಗ್ರಹಿಸಿ :  ರಾಜ್ಯದ ಪ್ರತಿ ಜೈಲುಗಳಲ್ಲಿ ಕೈದಿಗಳ ಮನಪರಿವರ್ತನೆಗಾಗಿ ಖಾಸಗಿಎನ್‌ಜಿಒಗಳ ಮೂಲಕ ತರಬೇತಿ ಹಾಗೂಧಾರ್ಮಿಕ ವಿಚಾರಗಳ ಕುರಿತು ತರಬೇತಿನೀಡಲಾಗುತ್ತದೆ. ಆದರೂ ಎನ್‌ಜಿಒಗಳಸಮಗ್ರ ಕಾರ್ಯಚಟುವಟಿಕೆ ಮತ್ತುಹಿನ್ನೆಲೆ ಬಗ್ಗೆ ಆಗಾಗ್ಗೆ ಪರಿಶೀಲನೆನಡೆಸುತ್ತಿರಬೇಕು ಎಂದು ಕೇಂದ್ರ ಗೃಹಸಚಿವಾಲಯದ ಕಾರಾಗೃಹಗಳಿಗೆಬರೆದಿರುವ ಪತ್ರದಲ್ಲಿ ಉಲ್ಲೇಖೀಸಿದೆ ಎಂದು ಮೂಲಗಳು ತಿಳಿಸಿವೆ.

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next