Advertisement

ಪೀಟರ್‌ಸನ್‌, ಹೀತರ್‌ ನೈಟ್‌ ಐಸಿಸಿ ತಿಂಗಳ ಕ್ರಿಕೆಟಿಗರು

10:47 PM Feb 14, 2022 | Team Udayavani |

ದುಬಾೖ: ದಕ್ಷಿಣ ಆಫ್ರಿಕಾದ ಪ್ರತಿಭಾನ್ವಿತ ಬ್ಯಾಟರ್‌ ಕೀಗನ್‌ ಪೀಟರ್‌ಸನ್‌ ಮತ್ತು ಇಂಗ್ಲೆಂಡಿನ ವನಿತಾ ತಂಡದ ನಾಯಕಿ ಹೀತರ್‌ ನೈಟ್‌ ಜನವರಿ ತಿಂಗಳ ಐಸಿಸಿ ಆಟಗಾರರ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ಭಾರತದೆದುರು ಮಿಂಚು
ಪುರುಷ ಆಟಗಾರರ ಪ್ರಶಸ್ತಿ ರೇಸ್‌ನಲ್ಲಿ ಕೀಗನ್‌ ಪೀಟರ್‌ಸನ್‌ ತಮ್ಮದೇ ದೇಶದ‌ ಡಿವಾಲ್ಡ್‌ ಬ್ರೇವಿಸ್‌, ಬಾಂಗ್ಲಾದೇಶದ ವೇಗಿ ಇಬಾದತ್‌ ಹೊಸೇನ್‌ ಅವರನ್ನು ಹಿಂದಿಕ್ಕಿದರು. ಭಾರತದೆದುರಿನ 2-1 ಟೆಸ್ಟ್‌ ಸರಣಿ ಗೆಲುವಿನಲ್ಲಿ ಪೀಟರ್‌ಸನ್‌ ಪ್ರಮುಖ ಪಾತ್ರ ವಹಿಸಿದ್ದರು. ಸರಣಿಯಲ್ಲಿ ಇವರ ಗಳಿಕೆ 276 ರನ್‌.

ಇದನ್ನೂ ಓದಿ:ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್‌ 14ನೇ ಜಯಭೇರಿ

ಅಮೋಘ ಶತಕ ಸಾಧನೆ
ಹೀತರ್‌ ನೈಟ್‌ ಏಕೈಕ ಆ್ಯಶಸ್‌ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ತೋರ್ಪಡಿಸಿದ್ದರು. ಮೊದಲ ಸರದಿಯಲ್ಲಿ ಅಜೇಯ 168 ರನ್‌ ಬಾರಿಸಿದ ಹಿರಿಮೆ ಇವರದಾಗಿತ್ತು. ಇದು ಟೆಸ್ಟ್‌ ಇತಿಹಾಸದಲ್ಲಿ ನಾಯಕಿಯಿಂದ ದಾಖಲಾದ 2ನೇ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next