ಬೆಂಗಳೂರು: ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ರಾಜ್ಯ ಸರಕಾರ ಸ್ವತಂತ್ರ ಸಂಸ್ಥೆಯಿಂ ದ ಹೊಸದಾಗಿ ಪರೀಕ್ಷೆ ನಡೆಸಬಹುದು ಎಂಬ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಗೆ ನೀಡಿ ರಾಜ್ಯ ಗೃಹ ಇಲಾಖೆ ಆದೇಶ ನೀಡಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಸಂಬಂಧ ಕೆಇಎ ಮರು ಪರೀಕ್ಷೆ ನಡೆಸಲಿದೆ. ಕೆಇಎಗೆ ಸಿಇಟಿ, ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ಪಿಡಿಒ, ಸಿವಿಲ್ ನ್ಯಾಯಾಧೀಶರು, ನಿಗಮ ಮಂಡಳಿ ನೇಮಕಾತಿ ಮುಂತಾದ ಪರೀಕ್ಷೆ ನಡೆಸಿದ ಅನುಭವವಿದೆ.
ಬೆಳಗಾವಿ ಅಧಿವೇಶನಕ್ಕೆ ಅಧಿಸೂಚನೆ ಪ್ರಕಟ
ಡಿಸೆಂಬರ್ 4ರಿಂದ 15ರ ವರೆಗೆ ನಡೆಯುವ ಬೆಳಗಾವಿ ಅಧಿವೇಶನಕ್ಕೆ ವಿಧಾನಸಭೆ ಸಚಿವಾಲಯದಿಂದ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಡಿಸೆಂಬರ್ 4ರಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ಪ್ರಾರಂಭವಾಗಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಿಸಿದ್ದಾರೆ.