Advertisement

ಕಾಲಮಿತಿ ಮೀರಿದರೆ ಕಪ್ಪು ಪಟ್ಟಿಗೆ

12:46 PM Jun 21, 2022 | Team Udayavani |

ನವಲಗುಂದ: ನೂರಾರು ಕೋಟಿ ರೂ.ಅನುದಾನ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದ್ದು, ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕಾಮಗಾರಿ ಮುಗಿಸಬೇಕು. ಇಲ್ಲವಾದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಕೈಮಗ್ಗ ಮತ್ತು ಜವಳಿ ಕಬ್ಬು ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಾಕೀತು ಮಾಡಿದರು.

Advertisement

ತಾಪಂ ಸಭಾಭವನದಲ್ಲಿ ಸೋಮವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಗ್ರಾಮ ಸಡಕ್‌ ರಸ್ತೆ ಹಾಗೂ ಮುಖ್ಯ ಗ್ರಾಮೀಣ ರಸ್ತೆಗಾಗಿ 45 ಕೋಟಿಕ್ಕಿಂತಲೂ ಹೆಚ್ಚು ಕಾಮಗಾರಿಗಳ ಪ್ರಗತಿಯಲ್ಲಿದ್ದು, ಇದರ ಜತೆಗೆ ರೈತರಿಗೆ ಅವಶ್ಯವಾಗಿ ಬೇಕಿರುವ ಬೀಜ, ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಕುಡಿಯುವ ನೀರಿನ ಮಹತ್ವಾಕಾಂಕ್ಷೆ ಯೋಜನೆ ಜಲಜೀವನ ಮಷಿನ್‌ ಕಾಮಗಾರಿ 72 ಗ್ರಾಮಗಳಲ್ಲಿ ಶೇ.80 ಮುಗಿದಿರುತ್ತದೆ. 400 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರಕ್ಕೆ ರೈತರ ಮನೆ ಬಾಗಿಲಿಗೆ ಕುಡಿಯುವ ನೀರು ತಲುಪಿಸಲಾಗುವುದು. ತುಪ್ಪರಿಹಳ್ಳ ಶಾಶ್ವತ ಪರಿಹಾರಕ್ಕಾಗಿ 321 ಕೋಟಿ ರೂ.ಗಳಲ್ಲಿ 150 ಕೋಟಿಗೆ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಹೇಳಿದರು.

ತುಪ್ಪರಿಹಳ್ಳದಿಂದ 1 ಟಿಎಂಸಿ ನೀರು ಬಳಕೆ ಮಾಡಿ ಕೃಷಿ ಹಾಗೂ ಇತರೆ ಕೆಲಸಗಳಿಗೂ ಬಳಸಲು ಅನುಮೋದನೆ ಪಡೆಯಲಾಗಿದೆ. ಪಟ್ಟಣದ ವಾಲ್ಮೀಕಿ ಭವನಕ್ಕೆ 1 ಕೋಟಿ ರೂ. ಸೇರಿದಂತೆ ವಿವಿಧ ಸಮುದಾಯ ಭವನಗಳಿಗೆ ಹಣ ಮಂಜೂರು ಮಾಡಲಾಗಿದೆ ಎಂದರು.

ಅಣ್ಣಿಗೇರಿ ಪಟ್ಟಣಕ್ಕೆ 24?7 ಕುಡಿಯುವ ನೀರಿನ ಯೋಜನೆಗೆ 54 ಕೋಟಿ ರೂ.ಅನುದಾನ ಮಂಜೂರಾಗಿದೆ. ಗ್ರಾಮ ಸಡಕ್‌ ಯೋಜನೆಯಲ್ಲಿ ಹೊಲಗಳ ರೈತರ ರಸ್ತೆಗಳಿಗೆ 50 ಕೋಟಿ ರೂ. ಗಳನ್ನುವ್ಯಯಿಸಲಾಗಿದೆ ಎಂದರು.

ಈ ಮುಂಚೆ 265 ಶಾಲೆಗಳ ಹೊಸ ಕಟ್ಟಡಗಳ ಕಾಮಗಾರಿ ಶೇ.80 ಮುಗಿದಿರುತ್ತವೆ. ಶಲವಡಿ, ಹೆಬ್ಟಾಳ, ಅಣ್ಣಿಗೇರಿ, ನವಲಗುಂದ ಸೇರಿ ಉಳಿದ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಹಣ ವ್ಯಯಿಸಲಾಗಿದೆ ನವಲಗುಂದ ತಾಲೂಕಿನಲ್ಲಿ 4, ಅಣ್ಣಿಗೇರಿ ತಾಲೂಕಿನಲ್ಲಿ 8 ರುದ್ರಭೂಮಿಗಳಿಗೆ ಜಾಗೆ ಖರೀದಿಸಲಾಗಿದೆ. ಇನ್ನು 4 ರುದ್ರಭೂಮಿಗಳಿಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Advertisement

ಈಗಾಗಲೇ ವಿದ್ಯುತ್‌ 110 ಕೆ.ವಿ ಸ್ಟೇಷನ್‌ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೊಳ್ಳಲಿದೆ ಎಂದರು.

ಕೆ.ಡಿ.ಬಿ ಸಭೆಯಲ್ಲಿ ಇಒ ಎಸ್‌.ಎಮ್‌.ಕಾಂಬಳೆ, ತಹಶೀಲ್ದಾರ್‌ ಅನೀಲ ಬಡಿಗೇರ, ಅಣ್ಣಿಗೇರಿ ತಹಶೀಲ್ದಾರ್‌ ಮಂಜುನಾಥ ಅಮಾಶಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್‌. ಮಾಯಾಚಾರ್ಯ, ಶಿವಯೋಗಿ ಬೆಳಹಾರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next