ಹೈದರಾಬಾದ್: 2024ರ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದ್ದು, ತದನಂತರ ಆದಾಯ ತೆರಿಗೆ ಇಲಾಖೆ ದಾಳಿಗಳೇ ನಡೆಯುವುದಿಲ್ಲ. ಹೀಗೆಂದು ಹೇಳಿದ್ದು ತೆಲಂಗಾಣ ಕಾರ್ಮಿಕ ಸಚಿವ ಮಲ್ಲ ರೆಡ್ಡಿ.
ಸಿದ್ದಿಪೇಟ್ನಲ್ಲಿ ಭಾನುವಾರ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, “2024ರಲ್ಲಿ ಕೆಸಿಆರ್ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ. ಆಗ, ದೇಶಾದ್ಯಂತ ಆದಾಯ ತೆರಿಗೆ ಅಧಿಕಾರಿಗಳು ವಿಶ್ರಾಂತಿ ಪಡೆಯಬಹುದು. ಯಾವುದೇ ಐಟಿ ದಾಳಿಗಳು ನಡೆಯುವುದಿಲ್ಲ. ಎಲ್ಲರಿಗೂ ಅವರಿಗೆಷ್ಟು ಸಾಧ್ಯವೋ ಅಷ್ಟು ಆದಾಯ ಗಳಿಸಬಹುದು. ಕೆಸಿಆರ್ ಅವರು ಎಂಥ ಆಡಳಿತ ಜಾರಿಗೆ ತರುತ್ತಾರೆಂದರೆ, ಜನರು ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸುತ್ತಾರೆ’ ಎಂದಿದ್ದಾರೆ. ಇತ್ತೀಚೆಗಷ್ಟೇ ಐಟಿ ಇಲಾಖೆಯು ಮಲ್ಲರೆಡ್ಡಿ ಅವರ ಮನೆ ಮೇಲೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು.