Advertisement

ರಾಷ್ಟ್ರಮಟ್ಟದ ಪ್ರಶಸ್ತಿಗೆ ಕೆಸಿಸಿ ಬ್ಯಾಂಕ್‌ ಭಾಜನ

09:42 AM May 10, 2022 | Team Udayavani |

ಧಾರವಾಡ: ಮುಂಬೈನ ನ್ಯಾಶನಲ್‌ ಫೆಡರೇಶನ್‌ ಆಫ್‌ ಸ್ಟೇಟ್‌ ಕೋ-ಆಪರೇಟಿವ್‌ ಬ್ಯಾಂಕ್‌ ರಾಷ್ಟ್ರಮಟ್ಟದ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕ್‌ ಗಳ ಕಾರ್ಯ ನಿರ್ವಹಣೆ ಬಗ್ಗೆ ಅಧ್ಯಯನ ಕೈಗೊಂಡು ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ಕರ್ನಾಟಕ ಸೆಂಟ್ರಲ್‌ ಕೋ-ಆಪರೇಟಿವ್‌ ಬ್ಯಾಂಕ್‌(ಕೆಸಿಸಿ) ಭಾಜನವಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಉತ್ತಮ ಪ್ರಜಾಸತ್ತಾತ್ಮಕ ಆಡಳಿತ, ಸಂಪನ್ಮೂಲ ಕ್ರೊಢೀಕರಣ, ಸಾಲ ನೀಡಿಕೆ ಮತ್ತು ವಸೂಲಾತಿ, ಆರ್ಥಿಕ ಸೇರ್ಪಡೆ, ಲಾಭಗಳಿಕೆ, ಸಾಂಸ್ಥಿಕ ಆಡಳಿತ ಮತ್ತು ನಿರ್ವಹಣೆ, ಗಣಕೀಕರಣ ಹಾಗೂ ನಾಯಕತ್ವ ಸೇರಿದಂತೆ ಹತ್ತು ಹಲವು ಮಾನದಂಡಗಳಲ್ಲಿ ಸಾಧನೆ ಮಾಡಿದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಬ್ಯಾಂಕ್‌ ಈ ಪ್ರಶಸ್ತಿಗೆ ಮುಡಿಗೇರಿಸಿಕೊಂಡಿದೆ ಎಂದರು.

ಕೆಸಿಸಿ ಬ್ಯಾಂಕ್‌ 1916 ನ.23ರಂದು ಆರಂಭಗೊಂಡು 10 ದಶಕಗಳ ಕಾಲ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದು, 2018ನೇ ಸಾಲಿನಲ್ಲಿ ಶತಮಾನೋತ್ಸವ ಕೂಡ ಆಚರಿಸಿದೆ. ಅವಿಭಜಿತ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಕಾರ್ಯವ್ಯಾಪ್ತಿ ಒಳಗೊಂಡಿದ್ದು, ಒಟ್ಟು 56,510 ಹಾಗೂ 1559 ಇತರೆ ಸಹಕಾರಿ ಸಂಘಗಳ ಸದಸ್ಯತ್ವ ಹೊಂದಿದ್ದಾರೆ. 514 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ 2022ನೇ ವರ್ಷದ ಮಾರ್ಚ್‌ ಅಂತ್ಯಕ್ಕೆ 1,07,940 ರೈತ ಸದಸ್ಯರಿಗೆ 49001.17 ಲಕ್ಷ ಬೆಳೆಸಾಲ ಮತ್ತು ಶೇ.3 ಬಡ್ಡಿದರದಲ್ಲಿ 807 ಸದಸ್ಯರಿಗೆ 4148.17 ಲಕ್ಷ ಮಾಧ್ಯಮಿಕ ಕೃಷಿ ಸಾಲ ಬಿಡುಗಡೆ ಮಾಡಿದೆ. ಒಟ್ಟು 50680.85 ಲಕ್ಷ ಕೃಷಿ ಸಾಲ ಮತ್ತು 8539.57 ಲಕ್ಷ ಮಾಧ್ಯಮಿಕ ಸಾಲ ಸೇರಿ ಒಟ್ಟು 59220.42 ಲಕ್ಷ ಹೊರಬಾಕಿ ಸಾಲವಿದೆ ಎಂದು ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಶ್ರೇಯೋಭಿವೃದ್ದಿಗೆ ಪ್ರತಿ ಸಂಘಕ್ಕೆ 25 ಸಾವಿರ ರೂ.ಗಳವರೆಗೆ ಬ್ಯಾಂಕಿನ ಲಾಭಾಂಶದಲ್ಲಿ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್‌. ವೈ.ಪಾಟೀಲ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಶಿವಾನಂದ ಹೂಗಾರ, ನಿರ್ದೇಶಕರು, ಅಧಿಕಾರಿಗಳು ಇದ್ದರು.

ಬ್ಯಾಂಕ್‌ ಕಾರ್ಯವ್ಯಾಪ್ತಿಯಲ್ಲಿ ಇದೀಗ 44 ಶಾಖೆಗಳಿದ್ದು, ಹೊಸದಾಗಿ 22 ಶಾಖೆಗಳನ್ನು ಆರಂಭಿಸಲು ಯೋಚಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 11, ಗದಗ ಜಿಲ್ಲೆಯಲ್ಲಿ 5 ಹಾಗೂ ಹಾವೇರಿ ಜಿಲ್ಲೆಯಲ್ಲಿ 6 ಶಾಖೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಇದಲ್ಲದೇ ಶಿಗ್ಗಾಂವಿ ಎಪಿಎಂಸಿಯಲ್ಲಿ ಖುಲ್ಲಾ ಜಾಗೆ ಖರೀದಿಸಿದ್ದು, ಶೀಘ್ರದಲ್ಲಿ ಬ್ಯಾಂಕಿನ ಸ್ವಂತ ಕಟ್ಟಡ ನಿಮಾಣ ಮಾಡಲಾಗುವುದು. 2022ನೇ ಸಾಲಿನಲ್ಲಿ ಮೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪ್ರತಿ ಸಂಘಕ್ಕೆ ಬ್ಯಾಂಕಿನ ಲಾಭಾಂಶದಲ್ಲಿ ಶೇ.2 ಡಿವಿಡೆಂಡ್‌ ಹಂಚಲು ತೀರ್ಮಾನಿಸಲಾಗಿದೆ. –ಮಲ್ಲಿಕಾರ್ಜುನ ಹೊರಕೇರಿ, ಕೆಸಿಸಿ ಬ್ಯಾಂಕ್‌ ಅಧ್ಯಕ್ಷ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next