Advertisement

ಯಚಡಿ ದೇವಸ್ಥಾನ ಕೆರೆಗೆ ‘ಜೀವ ಜಲ’ದ ಕಾಯಕಲ್ಪ

05:56 PM Mar 10, 2023 | Team Udayavani |

ಶಿರಸಿ: ಜಿಲ್ಲೆಯ ಅನೇಕ ಕೆರೆಗಳನ್ನು ಅಭಿವೃದ್ದಿಗೊಳಿಸಿ ಆಧುನಿಕ ಭಗೀರಥ ಎನಿಸಿಕೊಂಡ ಶಿರಸಿಯ ಜೀವ ಜಲ ಕಾರ್ಯಪಡೆ ಈ ವರ್ಷದ ಕೆರೆಯ ಕಾಯಕಲ್ಪಕ್ಕೆ ಈಗಾಗಲೇ ಚಾಲನೆ ನೀಡಿದೆ. ಜೈನ ಮಠದ ಕೆರೆಯ ಅಭಿವೃದ್ದಿ ಜೊತೆಗೆ ಯಚಡಿಯ ಪುಷ್ಕರಣಿಯ ಅಭಿವೃದ್ದಿಯಲ್ಲೂ ಬಹುಪಾಲಿನ ಕೊಡುಗೆ ನೀಡಿದೆ.

Advertisement

ತಾಲೂಕಿನ ಯಡಚಡಿಯ ಪುರಾತನ ಗ್ರಾಮ ದೇವರಾದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಎದುರಿಗೆ ಇರುವ ಪುಷ್ಕರಣಿಯ ಅಭಿವೃದ್ದಿಗೆ ಕಂಕಣ ತೊಟ್ಟು ತನ್ನ ಪಾಲಿನ ಕೆಲಸ‌ ಪೂರ್ಣಗೊಳಿಸಿದೆ.

ಕೈ ಜೋಡಿಸದಿದ್ದರೆ ಕಷ್ಟವಿತ್ತು
ಯಚಡಿಯ ಗ್ರಾಮ ದೇವಸ್ಥಾನ ಅಭಿವೃದ್ದಿಗೆ ಕೆಲಸ‌ ಮಾಡುತ್ತಿರುವ ಅಭಿವೃದ್ದಿ ಟ್ರಸ್ಟ್ ಹಾಗೂ ಆಡಳಿತ ಮಂಡಳಿಯು ಕೆರೆಯ ಅಭಿವೃದ್ದಿ ಮಾಡಿಸಲು ಯೋಜಿಸಿತು. ಒಂದು‌ ಪಾರ್ಶ್ವದಲ್ಲಿ ಮಣ್ಣು ಜರಿದು ಅರ್ಧ ಕೆರೆ ಆಗಿತ್ತು. ಇದರ ಹೂಳೆತ್ತಿದರೆ ಜೀವ ಜಲ ಬಳಸಬಹುದು ಎಂಬುದು ಅವರ ಕನಸಾಗಿತ್ತು. ಆದರೆ, ಕಾರ್ಯಪಡೆ ಇವರ ಕನಸಿಗೆ‌ ಕೈ ಜೋಡಿಸದೇ ಹೋದರೆ ನನಸಾಗುವದು ಕಷ್ಟವಿತ್ತು.

ಈ ಕನಸನ್ನು ಜೀವ ಜಲ‌ ಕಾರ್ಯಪಡೆ ಅಧ್ಯಕ್ಷ, ಜಲ ಯೋಗಿ ಶ್ರೀನಿವಾಸ ಹೆಬ್ಬಾರ ಅವರಲ್ಲಿ ಪದಾಧಿಕಾರಿಗಳು, ಗ್ರಾಮಸ್ಥರು ಮನವಿ‌ ಮಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿ‌ದ ಹೆಬ್ಬಾರ್ ಅವರು ‘ದೇವರ ಕೆರೆ’ಗೆ ಕಾಯಕಲ್ಪದ ಜೊತೆಯಾದರು.

ನೆರವಿನ ಹಸ್ತ:
ಹುಣಸೆಕೊಪ್ಪ‌ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಚಡಿ ಕೆರೆ ಅಭಿವೃದ್ದಿಗೆ ರಾಷ್ಟ್ರೀಯ ‌ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯೋಜಿಸಿ ಹೆಜ್ಜೆ ಇಟ್ಟರೂ ಮುಂದಿನ ಮಳೆಗಾಲದ ಒಳಗೆ ಸುತ್ತಲು ಪಿಚಿಂಗ್ ಕಟ್ಟ ಬೇಕಿತ್ತು. ಹೂಳೆತ್ತುವ ಕೆಲಸ ವಿಳಂಬವಾದರೆ ಮುಂದೆ ಪಿಚ್ಚಿಂಗ ಕಟ್ಟಲು ಸಮಸ್ಯೆ ಆದೀತೆಂದು ಕಾರ್ಯಪಡೆ‌ ನೆರವನ್ನು ಗ್ರಾಮಸ್ಥರು ಕೇಳಿದರು.

Advertisement

ಕಳೆದ ೮ ದಿನಗಳಿಂದ‌ ನಿರಂತರ ಕಾರ್ಯಪಡೆಯು ಹದಿನೈದಕ್ಕೂ ಅಧಿಕ ಗ್ರಾಮಸ್ಥರ ಸಹಭಾಗಿತ್ವದಿಂದ ಒಂದು ಹಂತದ ಕೆರೆ ಅಭಿವೃದ್ದಿ ಪೂರ್ಣಗೊಳಿಸಿದೆ.
ನಾಲ್ಕು ಗುಂಟೆ ೧೨ ಅಣೆ‌ ಕೆರೆ ,ಇದಾಗಿದ್ದು, ಕೆರೆಯೊಳಗಿನ ಐನೂರಕ್ಕೂ ಅಧಿಕ ಟ್ರಾಕ್ಟರ್ ‌ಮಣ್ಣು ಹೊರ ಹಾಕಲಾಗಿದೆ. ನಿರಂತರ ಬೆಳಿಗ್ಗೆ ೮ರಿಂದ ಸಂಜೆ ೬-೭ ಗಂಟೆ ತನಕ ಕೆಲಸ ಮಾಡಿ‌ ಇದನ್ನು ಪೂರ್ಣಗೊಳಿಸಲಾಗಿದೆ ಎನ್ನುತ್ತಾರೆ ಕಾರ್ಯಪಡೆಯ ಪರವಾಗಿ‌ ಶ್ರೀಧರ ಭಟ್ಟ ಕೊಳಗಿಬೀಸ್.

ಕೆರೆಯಿಂದ ಈಗಲೂ‌ ಮೂರಿಂಚು ನೀರು ಹರಿಯುತ್ತಿದೆ. ಹೆಬ್ಬಾರರ ನೆರವಿನಿಂದ‌ ಈಗ ಕೆರೆ ಒಂದು ಆಕಾರಕ್ಕೆ ಬಂದಿದೆ. ಉದ್ಯೋಗ ಖಾತ್ರಿಯಲ್ಲಿ ಪಿಚ್ಚಿಂಗ್ ಕೂಡ ಮಾಡಬೇಕಾಗಿದೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ರತ್ನಾಕರ ನಾಯ್ಕ ಹಾಗೂ ದೇವಸ್ಥಾನ ಆಡಳಿತ‌ ಮಂಡಳಿ ಕಾರ್ಯದರ್ಶಿ ಗಣೇಶ ಹೆಗಡೆ ಕಲ್ಮನೆ.

ಉದ್ಯೋಗ ಖಾತ್ರಿ ಯೋಜನೆಯ ಜೊತೆ ಜೀವ ಜಲ ಕಾರ್ಯಪಡೆ ಸಹಕಾರ‌ ಮರೆಯಲು ಸಾಧ್ಯವಿಲ್ಲ. ಹೆಬ್ಬಾರರ ಕೊಡುಗೆ ಇಲ್ಲವಾದರೆ ಕೆರೆ ಅಭಿವೃದ್ದಿ ಕನಸಾಗೇ ಇರುತ್ತಿತ್ತು. ಇನ್ನು ಎನ್ ಆರ್ ಇಜಿಯಲ್ಲಿ ‌ಪಿಚ್ಚಿಂಗ್ ಮಾಡಿಸಬೇಕಿದೆ.
-ಗಣೇಶ ಹೆಗಡೆ‌‌ ಕಲ್ಮನೆ, ಆಡಳಿತ‌ ಮಂಡಳಿ ಕಾರ್ಯದರ್ಶಿ

ಮನೆಗೆ ಬಂದವರಿಗೆ ಊಟ ಹಾಕಲು ಯೋಚಿಸುವ ಜನರ ‌ನಡುವೆ ಹೆಬ್ಬಾರ್ ಅವರಂಥವರ‌ನ್ನು ಆ ಭಗವಂತನೇ ಸೃಷ್ಟಿಸುತ್ತಾನೆ‌. ಉಳ್ಳವರು ನೆಲ‌ ಜಲಕ್ಕೆ‌ ನೆರವಾಗುವದು ಅಚ್ಚರಿ.
-ಮಹಾಬಲೇಶ್ವರ ನಾಯ್ಕ, ಯಚಡಿ

ಜೀವ ಜಲಕ್ಕೆ ಆಶ್ರಯ ತಾಣವೇ ಕೆರೆಗಳು. ಅವುಗಳ ಉಳಿವಿಗೆ ನಮ್ಮದು ಒಂದು ಸೇವೆ. ಜಲ ರಕ್ಷಣೆಯಲ್ಲಿ ಜೊತೆಯಾದರೆ ನೆಮ್ಮದಿ ಸಿಗುತ್ತದೆ.

ಶ್ರೀನಿವಾಸ ಹೆಬ್ಬಾರ್, ಅಧ್ಯಕ್ಷರು ಜೀವ ಜಲ ಕಾರ್ಯಪಡೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next