Advertisement
ಮಂಗಳೂರು ಭಾಗದಲ್ಲಿ ರುದ್ರಭೂಮಿಗಳ ಅಭಿವೃದ್ಧಿಯ ಹರಿಕಾರರೆಂದೇ ಗುರುತಿಸಲಾದ ಮೂಲ್ಕಿಯ ಸಮಾಜ ಸೇವಕ ಎಂ. ಆರ್.ಎಚ್. ಪೂಂಜ ಅವರ ಸಾರಥ್ಯದಲ್ಲಿ ಮೂಲ್ಕಿಯಲ್ಲೂ ಸುಸಜ್ಜಿತ ಶ್ಮಶಾನ ನಿರ್ಮಿಸಲಾಗಿತ್ತು. ಅವರು ಹಲವು ಸಂಘ-ಸಂಸ್ಥೆಗಳು, ವ್ಯಕ್ತಿಗಳ ನೆರವು ಪಡೆದು ಶ್ಮಶಾನಗಳನ್ನು ಅಭಿವೃದ್ಧಿಪಡಿಸಿದ್ದರು. ಮಂಗಳೂರಿನಲ್ಲಿ ಅವರು ಪುನರುಜ್ಜೀವನಗೊಳಿಸಿದ್ದ ರುದ್ರಭೂಮಿಗಳ ನಿರ್ವಹಣೆಯ ಹೊಣೆಯನ್ನು ಮಹಾನಗರ ಪಾಲಿಕೆ ವಹಿಸಿಕೊಂಡಿದ್ದರೆ, ಮೂಲ್ಕಿಯ ರುದ್ರಭೂಮಿಯ ಜವಾಬ್ದಾರಿಯನ್ನು ಎಂ.ಆರ್.ಎಚ್. ಪೂಂಜರ ಪುತ್ರ ಎಂ.ಎಚ್. ಅರವಿಂದ ಪೂಂಜ ನೇತೃತ್ವದ ಸಮಿತಿ ವಹಿಸಿಕೊಂಡಿದೆ.
ಅರವಿಂದ ಪೂಂಜ ಅವರ ನೇತೃತ್ವದಲ್ಲಿ ರುದ್ರಭೂಮಿ ಅಭಿವೃದ್ಧಿಗೆ ಚಿಂತನೆ ನಡೆದಿದೆ. ಇಲ್ಲಿ ಒಂದು ಹೆಣ ಸುಡುವುದಕ್ಕೆ ಅಲ್ಪ ಪ್ರಮಾಣದ ಮೊತ್ತವನ್ನಷ್ಟೇ ಸ್ವೀಕರಿಸಲಾಗುತ್ತದೆ, ಜತೆಗೆ ಹೆಚ್ಚು ಶವಗಳು ಬರುವುದಿಲ್ಲ. ಹೀಗಾಗಿ ಆದಾಯಕ್ಕಿಂತ ನಿರ್ವಹಣೆ ವೆಚ್ಚವೇ ಹೆಚ್ಚು. ಹೀಗಾಗಿ ಸ್ಥಳೀಯಾಡಳಿತ, ಸಾರ್ವಜನಿಕರು, ಸಹಕಾರ ಸಂಘಗಳ ನೆರವು ಸಿಕ್ಕಿದರೆ ಅಭಿವೃದ್ಧಿಗೆ ಸಹಾಯವಾಗಲಿದೆ ಎಂಬುದು ಸಮಿತಿಯ ಅಭಿಪ್ರಾಯ.
Related Articles
Advertisement
ಕಳ್ಳರ ಕರಾಮತ್ತು ಜೋರಾಗಿದೆ. ಹೀಗಾಗಿ ರಕ್ಷಣೆ ಕೆಲಸವೂ ನಡೆಯಬೇಕಾಗಿದೆ.
ಏನೇನು ಅಭಿವೃದ್ಧಿ ಕಾರ್ಯ?ಈ ಬಾರಿ ರುದ್ರಭೂಮಿಯನ್ನು ಸುಸ್ಥಿತಿಗೆ ತರುವ ಜತೆಗೆ ಆಕರ್ಷಣೆ ಹೆಚ್ಚಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಸಂಬಂಧಪಟ್ಟು ಸುಮಾರು 1.5 ಎಕ್ರೆ ಜಾಗವಿದೆ. ಅಲ್ಲಿ ಗಿಡ ಗಳನ್ನು ನೆಡಲಾಗಿದೆ. ಈ ಜಾಗದಲ್ಲಿ ಉದ್ಯಾನವನ ನಿರ್ಮಿಸುವ ಚಿಂತನೆ ಇದೆ. ಇಲ್ಲಿ ವಾಕಿಂಗ್ ಟ್ರ್ಯಾಕ್ ಮಾಡಿದರೆ ಜನರ ಓಡಾಟಕ್ಕೂ ಅನುಕೂಲವಾಗ ಬಹುದು ಎಂಬ ಸಲಹೆ ಇದೆ. ರುದ್ರಭೂಮಿಯಲ್ಲಿ ಹಿಂದೆ ಶಿವನ ಮೂರ್ತಿ ನಿರ್ಮಿಸಲಾಗಿತ್ತು. ಅದು ಜೀರ್ಣಗೊಂಡಿದ್ದರಿಂದ ಹೊಸ ಮೂರ್ತಿ ಸ್ಥಾಪನೆಯ ಚಿಂತನೆ ಇದೆ. -ಸರ್ವೋತ್ತಮ ಅಂಚನ್ ಮೂಲ್ಕಿ