Advertisement

ಭಕ್ತರಿಂದಲೇ ದಕ್ಷಿಣ ಗಂಗೆ ಕಾವೇರಿ ಅಪವಿತ್ರ!

10:16 AM Feb 14, 2020 | sudhir |

ಮಂಡ್ಯ: ದಕ್ಷಿಣ ಗಂಗೆ ಕಾವೇರಿಗೆ ಸೇರುವ ತ್ಯಾಜ್ಯ ಹೆಚ್ಚುತ್ತಲೇ ಇದೆ. ನದಿಯ ಪಾವಿತ್ರ್ಯ, ನೈರ್ಮಲ್ಯ ಸಂಪೂರ್ಣ ಕೆಟ್ಟಿದೆ. ಪಿಂಡ ಪ್ರದಾನ, ಅಸ್ಥಿ ವಿಸರ್ಜನೆ ಸೇರಿದಂತೆ ನದಿಗೆ ಅರ್ಪಿಸುವ ವಿವಿಧ ಕೊಳಕು, ಕೈಗಾರಿಕೆಗಳು ಹೊರಬಿಡುವ ರಾಸಾಯನಿಕಗಳ ಜತೆಗೆ ಮಾನವ ತ್ಯಾಜ್ಯವೂ ನದಿಯ ಒಡಲನ್ನು ಸೇರುತ್ತಿದೆ.

Advertisement

ಆದರೂ ಜನ ಪ್ರತಿನಿಧಿ ಗಳು ಮತ್ತು ಜಿಲ್ಲಾಡಳಿ ತಕ್ಕೆ ಆ ಬಗ್ಗೆ ಗಮನ ಇಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ನಿರ್ಜೀವ ಸ್ಥಿತಿಯಲ್ಲಿದೆ. ಹೀಗಾಗಿ ಕಾವೇರಿ ಹೆಸರಿ ಗಷ್ಟೇ ಪುಣ್ಯನದಿಯಾಗಿದ್ದು, ಮೈತುಂಬಾ ಕೊಳಕನ್ನು ತುಂಬಿಕೊಂಡು ಹರಿಯುತ್ತಿದ್ದಾಳೆ.

ಕಾವೇರಿ ಉಗಮ ಸ್ಥಾನದಲ್ಲಷ್ಟೇ ಸ್ವತ್ಛತೆ ಕಾಪಾಡಿಕೊಂಡಿದ್ದಾಳೆ. ಬೆಟ್ಟದಿಂದ ಇಳಿದು ಹರಿದುಬರುವಾಗ ತವರಿನಿಂದಲೇ ಕೊಳಕು ತುಂಬಿ ಕೊಂಡು ಬರುತ್ತಾಳೆ. ಮೈಸೂರು, ಮಂಡ್ಯಕ್ಕೆ ಬರುತ್ತಿದ್ದಂತೆ ಇನ್ನಷ್ಟು ಮಲಿನವಾಗುತ್ತಿದ್ದಾಳೆ.

ಶ್ರೀರಂಗಪಟ್ಟಣ ಬಳಿಯ ಪಶ್ಚಿಮವಾಹಿನಿ, ಸಂಗಮ, ಗೋಸಾಯ್‌ಘಾಟ್‌ ಮತ್ತು ಶ್ರೀರಂಗ ನಾಥ ದೇವಾಲಯದ ಸ್ನಾನಘಟ್ಟದ ಬಳಿ ನಿತ್ಯ ನೂರಾರು ಜನರು ಅಸ್ಥಿ ವಿಸರ್ಜನೆ, ಪಿಂಡ ಪ್ರದಾನದ ಹೆಸರಿನಲ್ಲಿ ಎಸೆಯುವ ಬಟ್ಟೆ, ಪ್ಲಾಸ್ಟಿಕ್‌ ಕವರ್‌, ಅಸ್ಥಿ ತುಂಬಿದ ಮಡಕೆ, ಪೂಜಾ ಸಾಮಗ್ರಿ ನದಿಯ ಒಡಲನ್ನು ಸೇರುತ್ತಿದೆ.

ಭಕ್ತರಿಂದಲೇ ಅಪವಿತ್ರ
ದೇಶದ ವಿವಿಧ ಮೂಲೆಗಳಿಂದ ಇಲ್ಲಿಗೆ ಬರುವ ಜನರು ತಮ್ಮ ಪಾಪಕರ್ಮ ತೊಳೆದು ಕೊಳ್ಳುವ ಜತೆಗೆ ನದಿಗೆ ಕೊಳಕಿನ ಕೂಪ ವನ್ನೇ ಸೃಷ್ಟಿಸುತ್ತಿದ್ದಾರೆ. ಆದರೆ ನದಿಯ ಪಾಪದ ಕೊಳೆಯನ್ನು ತೊಳೆಯುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ.

Advertisement

ಶುದ್ಧೀಕರಿಸುವ ಚಿಂತನೆ
ಗುಜರಾತ್‌ನ ಸಾಬರಮತಿ ನದಿಯ ಮಾದರಿ ಯಲ್ಲೇ ಕಾವೇರಿಯನ್ನು ಶುದ್ಧೀಕರಿಸುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಶ್ರೀರಂಗಪಟ್ಟಣ ಪುರಸಭೆ ಅಧಿಕಾರಿಗಳು ಈ ಬಗ್ಗೆ ಗುಜರಾತ್‌ಗೆ ಅಧ್ಯಯನ ಪ್ರವಾಸವನ್ನೂ ಕೈಗೊಂಡಿದ್ದರು. ಆದರೆ ಕೊನೆಗೆ ಅದನ್ನು ಕೈಬಿಡಲಾಯಿತು.

ಮುಂದಾಗದ ಜಿಲ್ಲಾಡಳಿತ
ಹಲವು ಆಚರಣೆಗಳು, ಕಾವೇರಿ ಪುಷ್ಕರ ವೇಳೆಯೂ ರಾಶಿಗಟ್ಟಲೆ ತ್ಯಾಜ್ಯ ನದಿಗೆ ಸೇರಿತ್ತು. ಈ ಆಚರಣೆ ನಿಷೇಧಿಸುವ ನಿಟ್ಟಿನಲ್ಲಿ ಆಚರಣೆಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಸೃಷ್ಟಿಸುವ ಗೋಜಿಗೆ ಜಿಲ್ಲಾಡಳಿತ ಇದುವರೆಗೂ ಮುಂದಾಗಿಲ್ಲ.

ಕುಡಿಯಲು ಯೋಗ್ಯವಲ್ಲ
ಸಮೀಕ್ಷೆಯೊಂದರ ಪ್ರಕಾರ ಕಾವೇರಿ ನೀರು ಕುಡಿಯುವುದಕ್ಕೆ ಯೋಗ್ಯ ವಾಗಿರದೆ ಸಿ ಮತ್ತು ಡಿ ದರ್ಜೆಯ ಗುಂಪಿಗೆ ಸೇರಿಸಲಾಗಿದೆ. ಕಾವೇರಿ ಇನ್ನಷ್ಟು ಕಲುಷಿತಗೊಳ್ಳುವುದನ್ನು ತಪ್ಪಿಸ ಬೇಕಾ ದರೆ ರಾಜ್ಯ ಸರಕಾರ ಉತ್ತರದ ಗಂಗೆಯನ್ನು ಶುದ್ಧೀಕರಣ ಕಾರ್ಯ ಕೈಗೊಂಡಿರುವ ಮಾದರಿಯಲ್ಲೇ ದಕ್ಷಿಣದ ಗಂಗೆ ಕಾವೇರಿ ನದಿಯ ಶುದ್ಧೀಕರಣ ಕಾರ್ಯ ಕೈಗೊಳ್ಳುವುದು ಅಗತ್ಯ ಮತ್ತು ಅನಿವಾರ್ಯ.

ಕಾವೇರಿ ಪುಣ್ಯ ನದಿ. ಅದರ ಪಾವಿತ್ರ್ಯ ವನ್ನು ಕಾಪಾಡುವುದು ಎಲ್ಲರ ಹೊಣೆ. ಧಾರ್ಮಿಕ ಆಚರಣೆಗಳು ನದಿಯ ಪಾವಿತ್ರ್ಯಕ್ಕೆ ಭಂಗ ತರುವ ರೀತಿಯಲ್ಲಿ ಇರಬಾರದು. ಕಾವೇರಿ ನದಿ ಶುದ್ಧೀ ಕರಣಗೊಳಿಸುವುದಕ್ಕೆ ಸಮಗ್ರ ಯೋಜನೆ ತಯಾರಾಗಬೇಕು.
– ಡಾ| ಎಂ.ವಿ. ವೆಂಕಟೇಶ್‌, ಮಂಡ್ಯ ಜಿಲ್ಲಾಧಿಕಾರಿ

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next