Advertisement

ಕಾವೇರಿ ನದಿ ಉತ್ಸವ: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ

09:29 AM Oct 23, 2022 | Team Udayavani |

ಕುಶಾಲನಗರ : ಕಾವೇರಿ ನದಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಭಾಗಮಂಡಲ, ಕುಶಾಲನಗರ, ಕಣಿವೆ ಕಾವೇರಿ ನದಿ ತಟದಲ್ಲಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಿತು.

Advertisement

ಜಲಸಂಪನ್ಮೂಲ ಇಲಾಖೆ ಆಶ್ರಯದಲ್ಲಿ ಕಾವೇರಿ ನೀರಾವರಿ ನಿಗಮ ಆಯೋಜಿಸಿದ ಕಾರ್ಯಕ್ರಮದಲ್ಲಿ ವೇದಬ್ರಹ್ಮ ಭಾನುಪ್ರಕಾಶ್‌ ಶರ್ಮ ಅವರ ನೇತೃತ್ವದಲ್ಲಿ ನಂಜನಗೂಡಿನ ಕೃಷ್ಣ ಅವರ ತಂಡದ ಮೂಲಕ ವಿಶೇಷ ಆರತಿ ಬೆಳಗಲಾಯಿತು.

5 ಜನರ ಅರ್ಚಕರ ತಂಡ ಕಾವೇರಿ ಹಾಡಿನೊಂದಿಗೆ 7.25 ನಿಮಿಷ ಕಾಲ ನೆರವೇರಿಸಿ ಕಾವೇರಿ ಆರತಿ ಕಾರ್ಯಕ್ರಮ ಸಂದರ್ಭ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್‌ ಮತ್ತು ಕೆ.ಜಿ. ಬೋಪಯ್ಯ, ಹಾರಂಗಿ ಯೋಜನಾ ವೃತ್ತದ ಮುಖ್ಯ ಎಂಜಿನಿಯರ್‌ ವೆಂಕಟೇಶ್‌, ಅಧೀಕ್ಷಕ ಎಂಜಿನಿಯರ್‌ ಮೋಹನ್‌ ಕುಮಾರ್‌, ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಈರಣ್ಣ, ಕಾವೇರಿ ನದಿ ಸ್ವತ್ಛತಾ ಅಭಿಯಾನದ ಪ್ರಮುಖರಾದ ಎಂ.ಎನ್‌. ಚಂದ್ರಮೋಹನ್‌, ಕಾವೇರಿ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರ
ಮೋಹನ್‌, ಜಿಲ್ಲಾ ಸಂಚಾಲಕಿ ರೀನಾ ಪ್ರಕಾಶ್‌, ವಿವಿಧ ಸಂಘಟನೆಗಳ ಪ್ರಮುಖರು, ಕಾವೇರಿ ನದಿ ಉತ್ಸವ ಉಪ ಸಮಿತಿಯ ಪ್ರಮುಖರು, ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next