Advertisement

ಸೆಪ್ಟೆಂಬರ್‌ 22ರಿಂದ “ಕವಲು ದಾರಿ’

12:07 PM Sep 19, 2017 | Team Udayavani |

ಪುನೀತ್‌ ರಾಜಕುಮಾರ್‌ ಪಿ.ಆರ್‌.ಕೆ ಪ್ರೊಡಕ್ಷನ್ಸ್‌ ಎಂಬ ಬ್ಯಾನರ್‌ ಹುಟ್ಟುಹಾಕಿ, ಅದರಡಿ ಚಿತ್ರ ನಿರ್ಮಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈಗ ಆ ಸಂಸ್ಥೆಯ ಮೊದಲ ಚಿತ್ರವಾದ “ಕವಲು ದಾರಿ’ ಇದೇ ಶುಕ್ರವಾರ ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಪ್ರಾರಂಭವಾಗಲಿದೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಡಾ ರಾಜಕುಮಾರ್‌ ಕುಟುಂಬದವರು ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಲಿದ್ದಾರೆ.

Advertisement

“ಕವಲು ದಾರಿ’ ಚಿತ್ರವನ್ನು ಪುನೀತ್‌ ಅವರ ಪತ್ನಿ ಅಶ್ವಿ‌ನಿ ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಅನಂತ್‌ ನಾಗ್‌, ಅಚ್ಯುತ್‌ ಕುಮಾರ್‌, ರಿಷಿ, ಸುಮನ್‌ ರಂಗನಾಥ್‌, ರೋಶಿನಿ ಪ್ರಕಾಶ್‌ ಮುಂತಾದ ಹಲವರು ನಟಿಸುತ್ತಿದ್ದಾರೆ. ಚಿತ್ರದ ಕಥೆಯು ಕೊಲೆ ಪ್ರಕರಣವೊಂದರ ತನಿಖೆಯ ಕುರಿತಾಗಿದ್ದು, ಇದರಲ್ಲಿ ಅನಂತ್‌ನಾಗ್‌ ಅವರು ನಿವೃತ್ತ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ರಿಷಿ ಟ್ರಾಫಿಕ್‌ ಎಸ್‌.ಐ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರಕ್ಕೆ ಚರಣ್‌ರಾಜ್‌ ಸಂಗೀತವಿದೆ. ಅದ್ವೆ„ತ ಗುರುಮೂರ್ತಿ ಕ್ಯಾಮೆರಾ ಛಾಯಾಗ್ರಹಣ ಮಾಡುತ್ತಿದ್ದಾರೆ. ವರದರಾಜ್‌ ಕಾಮತ್‌ ಕಲಾ ನಿರ್ದೇಶಕರಾಗಿದ್ದು, ಎಂ.ಆರ್‌. ರಾಜಾಕೃಷ್ಣನ್‌ ಶಬ್ಧ ವಿನ್ಯಾಸ ಮಾಡಲಿದ್ದಾರೆ. ಚಿತ್ರದ ಚಿತ್ರೀಕರಣವು ಅಕ್ಟೋಬರ್‌ ತಿಂಗಳಿನಲ್ಲಿ ಶುರುವಾಗಿ ಡಿಸೆಂಬರ್‌ನಲ್ಲಿ ಮುಗಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next