Advertisement
ಎ. 14ರಂದು ಕಾಪು ಬೀಚ್ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮರ್ ಫೆಸ್ಟ್ – 2017ಗೆ ಕಾಪು ಬೀಚ್‌ನಲ್ಲಿ ಚಾಲನೆ ನೀಡಿ ಮಾತನಾಡಿದರು.ಕಾಪು ಕ್ಷೇತ್ರದ ಕಾಪು ಮತ್ತು ಪಡುಬಿದ್ರಿ ಬೀಚ್‌ಗಳು ಸಾಕಷ್ಟು ಅಭಿವೃದ್ಧಿ ಕಂಡಿದೆ. ಕಾಪು ತಾಲೂಕಾಗಿ ಈಗಾಗಲೇ ಘೋಷಣೆಯಾಗಿರುವುದರಿಂದ ಈ ಎರಡು ಬೀಚ್‌ಗಳಲ್ಲಿ ಇನ್ನಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಮೂಲಕ ಕಾಪು ತಾಲೂಕನ್ನು ಪ್ರಮುಖ ಪ್ರವಾಸಿ ಕೇಂದ್ರವಾಗಿ ರೂಪಿಸಲಾಗುವುದು ಎಂದರು.
ಕಾಪು ಬೀಚ್ ಸಾಕಷ್ಟು ಪ್ರವಾಸಿಗಳ ಆಕರ್ಷಣೆಯ ಕೇಂದ್ರವಾಗಿದೆ. ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕಾಪು ಬೀಚ್‌ನಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೀಚ್ ಉತ್ಸವವನ್ನು ಆಯೋಜಿಸಲಾಗುವುದು. ಕರಾವಳಿಯ ಪ್ರಮುಖ ಕ್ರೀಡೆಗಳು, ತಿಂಡಿ ತಿನಿಸುಗಳ ಮೂಲಕ ಆಹಾರೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುವುದು ಎಂದು ಸೊರಕೆ ಹೇಳಿದರು. ಉದ್ಯಮಿ ಮನೋಹರ್ ಶೆಟ್ಟಿ ಮಾತನಾಡಿ, ಪಡುಬಿದ್ರಿ ಹಾಗೂ ಕಾಪು ಬೀಚ್‌ಗಳಿಗೆ ರಾಷ್ಟ್ರೀಯ ಹೆದ್ದಾರಿಯಿಂದ ನೇರ ಸಂಪರ್ಕ ರಸ್ತೆಗಳ ಅಗತ್ಯವಿದ್ದು, ಈ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ. ಪಡುಬಿದ್ರಿ-ಪಡುಕರೆ ನೇರ ಸಂಪರ್ಕ ರಸ್ತೆಯೂ ಆಗಬೇಕಿದ್ದು ಶಾಸಕರು ಈ ಬೇಡಿಕೆಗೆ ಸ್ಪಂದಿಸಿದ್ದು, ಶೀಘ್ರದಲ್ಲೇ ಈ ಎರಡು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದರು.
Related Articles
Advertisement
ಮೂರು ದಿನಗಳ ಕಾಲ ನಡೆದ ಬೀಚ್ ಕ್ರಿಕೆಟ್‌ನಲ್ಲಿ ದ.ಕ., ಉಡುಪಿ ಜಿಲ್ಲೆಯ 26 ತಂಡಗಳು ಭಾಗವಹಿಸಿದ್ದು, ರವಿವಾರ ಸಂಜೆ ಸಮಾರೋಪ ಸಮಾರಂಭ ಜರಗಲಿದೆ.