ಕಾಪು : ಮಜೂರು ಗ್ರಾಮದ ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿಜ್ರಂಭಣೆಯಿಂದ ನಡೆಸಲಾಯಿತು.
ರಜೆ ಮುಗಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ವಾದ್ಯ, ಬ್ಯಾಂಡ್, ಚೆಂಡೆ, ಕೊಂಬು ಸಹಿತ ವಾದ್ಯ ಘೋಷಗಳೊಂದಿಗೆ ಆರತಿ ಬೆಳಗಿ ಶಾಲೆಗೆ ಬರಮಾಡಿಕೊಳ್ಳಲಾಯಿತು.
ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೀಲಾಧರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಪದ್ಮನಾಭ ಶ್ಯಾನುಭೋಗ್, ಮಜೂರು ಗ್ರಾ.ಪಂ ಅಧ್ಯಕ್ಷೆ ಶರ್ಮಿಳಾ ಆಚಾರ್ಯ, ಸದಸ್ಯ ಭಾಸ್ಕರ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯ ಆರ್.ಎಸ್. ಕಲ್ಲೂರ, ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ, ಪ್ರಮುಖವರಾದ ಶಶಿಶೇಖರ ಭಟ್, ಕರೀಂ, ನಾಗಭೂಷಣ ರಾವ್ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಂಡರು.
Related Articles
ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಂದ ಸುಣ್ಣ ಬಣ್ಣದ ಅಲಂಕಾರ ಮತ್ತು ಚಿತ್ರಗಳೊಂದಿಗೆ ಶೃಂಗಾರಗೊಂಡಿರುವ ಶಾಲಾವರಣ ಮತ್ತು ತರಗತಿ ಕೋಣೆ ಕೊಠಡಿಗಳನ್ನು ಕಂಡು ವಿದ್ಯಾರ್ಥಿಗಳು ಸಂಭ್ರಮಿಸಿದರು.
ಬಂಟ್ವಾಳ: ಶಾಲಾರಂಭ; ಪ್ರಾರಂಭೋತ್ಸವದ ಮೂಲಕ ಸ್ವಾಗತ :
ಬಂಟ್ವಾಳ: ರಾಜ್ಯಾದ್ಯಂತ ಸೋಮವಾರ ಶಾಲಾರಂಭಗೊಂಡಿದ್ದು, ಪ್ರತಿ ಶಾಲೆಗಳಲ್ಲಿ ಮೊದಲ ದಿನ ಪ್ರಾರಂಭೋತ್ಸವದ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಾಯಿತು.
ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ. ಈ ವೇಳೆ ಶಾಲೆಯ ದತ್ತು ಸಂಸ್ಥೆ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್, ಪ್ರೌಢಶಾಲಾ ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್, ಮುಖಶಿಕ್ಷಕ ರಮಾನಂದ ಮೊದಲಾದವರಿದ್ದರು.