Advertisement

ಕಾಪು ಪಿಲಿಕೋಲಕ್ಕೆ ಮುಹೂರ್ತ ನಿಗದಿ : ಮೇ14ರಂದು ಪಿಲಿಕೋಲ ಕಟ್ಟುವ ನರ್ತಕನಿಗೆ ಮಾರಿಯಮ್ಮ ಅಭಯ

10:32 PM May 10, 2022 | Team Udayavani |

ಕಾಪು : ಮುಂದಿನ ಶನಿವಾರ (ಮೇ 14) ಕಾಪುವಿನಲ್ಲಿ ನಡೆಯಲಿರುವ ದ್ವೈವಾರ್ಷಿಕ ಕಾಪುದ ಪಿಲಿಕೋಲಕ್ಕೆ ಪೂರ್ವಭಾವಿಯಾಗಿ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಂಗಳವಾರ ಪ್ರಾರ್ಥನೆಯೊಂದಿಗೆ ಅಭಯ ಪ್ರಸಾದ ಪಡೆಯಲಾಯಿತು.

Advertisement

ಇತಿಹಾಸ ಪ್ರಸಿದ್ಧವಾಗಿರುವ ಕಾಪುವಿನ ಪಿಲಿಕೋಲದಲ್ಲಿ ಭೂತ ನರ್ತಕ (ಪಿಲಿ ವೇಷಧಾರಿ) ಯಾರು ಎನ್ನುವುದು ಹಳೇ ಮಾರಿಯಮ್ಮ ದೇವಿಯ ಸನ್ನಿಽಯಲ್ಲಿ ನಿರ್ಧಾರವಾಗುತ್ತದೆ. ಪಿಲಿಕೋಲ ನಡೆಯುವ ಮುಂಚಿನ ಮಂಗಳವಾರ ಮೂರೂ ಮಾರಿಗುಡಿಗಳಿಗೆ ತೆರಳಿ ಮಾರಿಯಮ್ಮನ ಅಭಯ ಪಡೆಯುವ ಸಂಪ್ರಧಾಯವಿದೆ.

ಪಿಲಿಕೋಲದ ಸಿದ್ಧತೆಯಲ್ಲಿರುವ ಕಾಪುವಿನ ಶ್ರೀ ಬ್ರಹ್ಮಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದ ಆಡಳಿತ ಮಂಡಳಿ, ಕಾಣಿಕೆ ಮನೆತನದವರು, ಗುರಿಕಾರರು ಮತ್ತು ಹತ್ತು ಸಮಸರು ಜೊತೆಗೂಡಿ ಮಂಗಳವಾರ ಕಾಪು ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ತೆರಳಿ ಮಾರಿಯಮ್ಮ ದೇವಿಯ ಬಳಿ ಪ್ರಾರ್ಥನೆ ಸಲ್ಲಿಸಿದರು.

ಮೂರೂ ಮಾರಿಗುಡಿಗಳಲ್ಲೂ ಪ್ರಾರ್ಥನೆ ಸಲ್ಲಿಸಿದ ಬಳಿಕ, ಪಿಲಿ ಭೂತದ ನರ್ತಕನಿಗೆ ಮಾರಿಯಮ್ಮ ದೇವಿಯ ದರ್ಶನ ಪಾತ್ರಿಯು ಪಿಲಿ ಕೋಲ ಸುಸೂತ್ರವಾಗಿ ನಡೆಯಲಿ ಎಂಬ ಅಭಯ ಪ್ರಸಾದವನ್ನು ನೀಡಿ, ಸಂಪ್ರಧಾಯ ಬದ್ಧವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಲಾಗುತ್ತದೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರ : ಜೀವಂತ ಉಡಗಳ ಮಾರಾಟ ಯತ್ನ, ಮೂರು ಆರೋಪಿಗಳ ಬಂಧನ

Advertisement

ಕಾಪುವಿನಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿಕೋಲವು ಧಾರ್ಮಿಕ ಮತ್ತು ಜನಪದ ಆಚರಣೆಗಳ ಜೀವಂತ ಉದಾಹರಣೆಯಾಗಿದ್ದು, ಪಿಲಿ ಕೋಲದ ಮೂಲಕವಾಗಿ ತುಳುನಾಡಿನ ಸಂಸ್ಕೃತಿ, ಸಂಪ್ರಧಾಯ, ನಂಬಿಕೆ, ನಡವಳಿಕೆ ಸಹಿತವಾಗಿ ಸತ್ಯದ ಅನಾವರಣಗೊಳ್ಳುತ್ತದೆ. ಅದಕ್ಕೆ ಪೂರ್ವದಲ್ಲಿ ಮೂರೂ ಮಾರಿಗುಡಿಗೂ ತೆರಳಿ ಪಿಲಿ ಕೋಲ ಸುಸೂತ್ರವಾಗಿ ನಡೆಯುವಂತಾಗಲು ಉತ್ತಮ ಪ್ರಸಾದ ನೀಡುವಂತೆ ಪ್ರಾರ್ಥಿಸುವುದಕ್ಕಾಗಿ ಮಾರಿಯಮ್ಮನ ಸನ್ನಿಧಿಗೆ ಆಗಮಿಸಿದ್ದೇವೆ. ಇಲ್ಲಿ ಒಳ್ಳೆಯ ಪ್ರಸಾದ ಸಿಕ್ಕಿದೆ. ಐದು ದಿನಗಳ ಜಾತ್ರೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಡುವುದಾಗಿ ಮಾರಿಯಮ್ಮ ದೇವಿಯ ಅಭಯ ದೊರಕಿದೆ ಎಂದು ದೊರೆಕಳಗುತ್ತು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next