Advertisement

ಕಾಪು: ರಸ್ತೆ ಬಿಟ್ಟು ಗೂಡಂಗಡಿಯೊಳಗೆ ನುಗ್ಗಿದ ಲಾರಿ; ಓರ್ವ ಗಾಯ

02:18 PM Jan 16, 2023 | Team Udayavani |

ಕಾಪು‌‌: ಮಂಗಳೂರಿನಿಂದ ಉಡುಪಿ‌ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಚಾಲಕನ‌ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಗೂಡಂಗಡಿಯೊಳಗೆ ನುಗ್ಗಿದ ಘಟನೆ ಸೋಮವಾರ(ಜ.16) ಮಧ್ಯಾಹ್ನ ಕಾಪುವಿನಲ್ಲಿ ನಡೆದಿದೆ.

Advertisement

ರಾ.ಹೆ. 66 ರ ಕಾಪು ಪೆಟ್ರೋಲ್ ಪಂಪ್ ಬಳಿಯ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಈ ಘಟನೆ ಸಂಭವಿಸಿದೆ.

ಹೆದ್ದಾರಿ ಕಾಮಗಾರಿಯ ಪರಿಣಾಮ ಫ್ಲೈ ಓವರ್ ನ ಬದಲಾಗಿ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಗೂಡಂಗಡಿಗೆ ನುಗ್ಗಿದೆ.

ಘಟನೆಯಿಂದಾಗಿ ಗೂಡಂಗಡಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಗೂಡಂಗಡಿಯಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ‌ ನಡೆಸಿದ್ದಾರೆ.

Advertisement

ಕಾಪು ಶಾಸಕ ಲಾಲಾಜಿ‌ ಆರ್. ಮೆಂಡನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದು, ಅಂಗಡಿ‌ ಮಾಲಕರಿಗೆ ಸಾಂತ್ವನ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next