Advertisement
ಮಲ್ಲಾರು ಗ್ರಾಮದ ಕೊಪ್ಪಲಂಗಡಿ ಕಕ್ಕು ಕೋಚ ಶೆಟ್ಟಿ ಮನೆಯ ಕೃಷಿಕ ಉಮೇಶ ಎಂ. ಶೆಟ್ಟಿ ಅವರ ಸುಮಾರು 70 ಸೆಂಟ್ಸ್ ವಿಸ್ತೀರ್ಣದ 38 ಮುಡಿ ಭತ್ತ ಬೆಳೆಯುವ ಗದ್ದೆಯಲ್ಲಿ ರೈತ ಮಹಿಳೆಯರ ಜೊತೆಗೂಡಿ ವಿದ್ಯಾರ್ಥಿಗಳು ನಾಟಿ ಮಾಡಿದರು. ಮತ್ತು ನಾಟಿ ವೇಳೆ ಹೇಳುವ ಪಾಡªನದ ಬಗ್ಗೆ ಮಾಹಿತಿ ಪಡೆದುಕೊಂಡರು.
ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಅರಿವು ಮೂಡಿಸಲು ಈ ಪ್ರಯತ್ನ ಮಾಡಲಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತರಾಗಿರದೇ ಎಲ್ಲ ರೀತಿಯಲ್ಲೂ ಮಾಹಿತಿಗಳನ್ನು ಪಡೆದುಕೊಳ್ಳುವಂತಾಗಬೇಕು.
ವಿದ್ಯಾ ಡಿ., ಎನ್ನೆಸ್ಸೆಸ್ ಅಧಿಕಾರಿ
Related Articles
ಗ್ರಾಮೀಣ ವಿದ್ಯಾರ್ಥಿಗಳಾದರೂ ಕೃಷಿಯ ಸಂಪೂರ್ಣ ಮಾಹಿತಿ ಕೊರತೆ ನಮಗಿತ್ತು. ನಮ್ಮ ಎನ್‌ಎಸ್‌ಎಸ್ ಘಟಕದ ಮೂಲಕ ಅಪಾರ ಅನುಭವ ಪಡೆಯಲು ನಮಗೆ ಅವಕಾಶ ಸಿಕ್ಕಿದೆ.
ಯತೀಶ್, ಎನ್ನೆಸ್ಸೆಸ್ ನಾಯಕ
Advertisement