Advertisement
ಮಾರಿಪೂಜೆಗೆ ಪೂರ್ವಭಾವಿಯಾಗಿ ಮಂಗಳವಾರ ರಾತ್ರಿ ಕಾಪು ಹಳೇ ಮಾರಿ ಗುಡಿಗೆ ಶ್ರೀ ವೆಂಕಟರಮಣ ದೇವಸ್ಥಾನ, ಕಾಪು ಹೊಸ ಮಾರಿಗುಡಿ ಮತ್ತು ಕಾಪು ಮೂರನೇ (ಕಲ್ಯ) ಮಾರಿಗುಡಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಸಾಂಕೇತಿಕ ಮೂರ್ತಿ ಮತ್ತು ಆಭರಣ ಸಹಿತವಾದ ಬಿಂಬವನ್ನು ಮೆರವಣಿಗೆಯ ಮೂಲಕ ತರಲಾಯಿತು. ಆಬಳಿಕ ಮಾರಿಯಮ್ಮ ದೇವಿಯ ಸಾಂಕೇತಿಕ ಮೂರ್ತಿ ಮತ್ತು ಹೊಂಗಾರಕನ ಮರದಲ್ಲಿ ಕೆತ್ತಿದ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ, ಮಾರಿಪೂಜೆಯ ವಿವಿಧಪೂಜಾ ವಿಧಿ ವಿಧಾನಗಳನ್ನು ನೆರವೇ ರಿಸಿ ಸುಗ್ಗಿ ಮಾರಿಪೂಜೆಗೆ ಚಾಲನೆ ನೀಡಲಾಯಿತು.
ಬುಧವಾರ ಮಧ್ಯಾಹ್ನದವರೆಗೂ ದೇವಿಯ ವೀಕ್ಷಣೆಗೆ ಅವಕಾಶವಿದೆ. ಮಧ್ಯಾಹ್ನ ಪೂಜೆ ಬಳಿಕ ಮತ್ತೆ ನಡೆ ಯುವ ದರ್ಶನ ಸೇವೆಯಲ್ಲಿ ಭಕ್ತರ ಸಂಕಷ್ಟಕ್ಕೆ ಪರಿಹಾರ, ಅಭಯ ಪ್ರಸಾದ ನೀಡಲಾಗುತ್ತದೆ. ನಂತರ ದೇವಿಯ ಮೂರ್ತಿಯನ್ನು ಮೆರವಣಿಗೆ ಯಲ್ಲಿ ಕರೆದೊಯ್ದು, ಮಲ್ಲಾರಿನಲ್ಲಿರುವ ನಿರ್ದಿಷ್ಟ ಸ್ಥಳದಲ್ಲಿ ವಿಸರ್ಜಿಸುವುದ ರೊಂದಿಗೆ ಮಾರಿಪೂಜಾ ಪೂಜಾ ವಿಧಿಗಳಿಗೆ ತೆರೆ ಎಳೆಯಲಾಗುತ್ತದೆ. ಗದ್ದಿಗೆ ಪೂಜೆ ವಿಶೇಷ
ಗದ್ದುಗೆಯೇ ಪ್ರಧಾನವಾಗಿರುವ ಕಾಪುವಿನ ಮಾರಿಯಮ್ಮನ ಸನ್ನಿಧಿಯಲ್ಲಿ ಗದ್ದಿಗೆಪೂಜೆ ವಿಶೇಷ ಸೇವೆಯಾಗಿದೆ. ಕಾಲಾವಧಿ ಸುಗ್ಗಿ ಮಾರಿಪೂಜೆ ಸಂದರ್ಭ ಭಕ್ತಾಧಿಗಳಿಂದ 50 ಸಾವಿರಕ್ಕೂ ಅಧಿಕ ಗದ್ದಿಗೆಪೂಜೆ ಹಾಗೂ ಹೂವಿನ ಪೂಜೆ, ಕುಂಕುಮಾರ್ಚನೆ ಸೇವೆ ಹಾಗೂ ರಕ್ತಾಹಾರ ರೂಪದಲ್ಲಿ ನೂರಾರು ಕುರಿ, ಆಡು, ಲಕ್ಷಾಂತರ ಸಂಖ್ಯೆಯ ಕೋಳಿಗಳನ್ನು ಸಮರ್ಪಿಸಲ್ಪಡುತ್ತದೆ.
Related Articles
ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾ ಲಂಕಾರದೊಂದಿಗೆ ಅಲಂಕಾರ ಗೊಳಿಸಲಾಗಿದೆ. ಕಾಪು ಮಾರಿಯಮ್ಮ ದೇವಿಯ ಸನ್ನಿಧಾನದಲ್ಲಿ ಸುಗ್ಗಿ ಮಾರಿಪೂಜೆ ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತಿದ್ದು ಲಕ್ಷಾಂತರ ಮಂದಿ ದೇವಿಯ ದರ್ಶನ ಪಡೆದರು.
Advertisement
ಬಿಗು ಪೊಲೀಸ್ ಬಂದೋಬಸ್ತ್ಮೂರು ಮಾರಿಗುಡಿಗಳ ಪರಿಸರ ದಲ್ಲೂ ಕಾಪು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳ ಸಹಿತವಾಗಿ ಸುಮಾರು 100ಕ್ಕೂ ಅಧಿಕ ಮಂದಿ ಪೊಲೀಸರನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದ್ದು, ಆಯ್ದ ಕಡೆ 18 ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿದೆ. ಗಮನ ಸೆಳೆದ ರಜತ ರಥ
ಕಾಪು ಪೇಟೆ ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟಿರುವ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ದೇವಿಯ ಭಕ್ತವೃಂದದ ತನು, ಮನ, ಧನದ ಸಹಕಾರದಿಂದ 1 ಕೋ. ರೂ. ರೂ. ವೆಚ್ಚದ ರಜತ ರಥ ನಿರ್ಮಾಣಗೊಂಡಿದ್ದು, ವೆಂಕಟರಮಣ ದೇವಸ್ಥಾನದಿಂದ ಮಾರಿಗುಡಿಗೆ ದೇವಿಯ ಬಿಂಬವನ್ನು ಕುಳ್ಳಿರಿಸಿಕೊಂಡು ಬಂದು ರಥವನ್ನು ಸಮರ್ಪಿಸಿದ್ದು ಈ ಬಾರಿಯ ವಿಶೇಷತೆಯಾಗಿತ್ತು.