ಕಾಪು : ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, 2 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಕಾಪು ಪೊಲೀಸರು ಮುಂಬಯಿ ಏರ್‌ಪೋರ್ಟ್ ನಲ್ಲಿ ಬಂಧಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಪ್ರಕರಣದ ಪ್ರಥಮ ಆರೋಪಿ ಶಿವಮೊಗ್ಗ ಜಿಲ್ಲೆಯ ನಿವಾಸಿ ನಿಸಾರ್ ಅಹಮದ್ (33)ನನ್ನು ಕಾಪು ಪೊಲೀಸ್ ಠಾಣೆಯ ಸಿಬಂದಿ ವಶಕ್ಕೆ ತೆಗೆದುಕೊಂಡು ಉಡುಪಿಗೆ ಕರೆತಂದಿದ್ದಾರೆ.
ಪ್ರಕರಣದ ವಿವರ : ಉದ್ಯಾವರ ನಿವಾಸಿ ಹೀನಾ ಅವರೊಂದಿಗೆ 2019ರಲ್ಲಿ ವಿವಾಹವಾಗಿದ್ದ ನಿಸಾರ್ ಅಹಮದ್ ತನ್ನ ಮನೆಯವರೊಂದಿಗೆ ಸೇರಿ ಕಿರುಕುಳ ನೀಡಲಾರಂಭಿಸಿದ್ದ.
2020ರಲ್ಲಿ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ನಡುವೆ ನಿಸಾರ್ ಅಹಮದ್ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ. ಆರೋಪಿಯ ಬಂಧನದ ಬಗ್ಗೆ ಎಲ್‌ಒಸಿ ನೋಟಿಸು ಜಾರಿ ಮಾಡಲಾಗಿತ್ತು. ಮೇ 23ರಂದು ದುಬಾೖ ವಿಮಾನದ ಮೂಲಕ ಮುಂಬಯಿ ಏರ್‌ಪೋರ್ಟ್‌ಗೆ ಬಂದಿಳಿದ ನಿಸಾರ್‌ನನ್ನು ಎಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದು ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
Related Articles
ಇದನ್ನೂ ಓದಿ : ಕುಂದಾಪುರ : ಯುವತಿ ಆತ್ಮಹತ್ಯೆ ಪ್ರಕರಣ : ಅನ್ಯಧರ್ಮೀಯನ ವಿರುದ್ಧ ದೂರು