Advertisement

ಕಟ್ಟದ ಕೋರಿ ಇದು, ಕೋಳಿ ಅಂಕದ ಕಥೆಯಲ್ಲ

01:01 PM Dec 06, 2018 | |

ಕೋಳಿ ಅಂಕ ಕರಾವಳಿಯಲ್ಲಿ ಫೇಮಸ್‌. ಅದರಲ್ಲೂ ಗ್ರಾಮೀಣ ಭಾಗದಲ್ಲಂತೂ ನೇಮ-
ಉತ್ಸವ-ಕಾರ್ಯಕಲಾಪಗಳಲ್ಲಿ ಕೋಳಿ ಅಂಕಕ್ಕೆ ಜನ ಜಾಸ್ತಿ ಸೇರುತ್ತಾರೆ. ಅದರ ಮೂಲಕ ಸಂಭ್ರಮ ಪಡುವವರು ತುಂಬಾ ಜನ ಇದ್ದಾರೆ. ಜತೆಗೆ ಕಟ್ಟದ ಕೋರಿಯ ಪದಾರ್ಥ ಅಂದರೆ ಊರಲ್ಲಿ ಸ್ವಲ್ಪ ಜನ ಜಾಸ್ತಿ ಬರುತ್ತಾರೆ. ಯಾಕೆಂದರೆ ಆ ಪದಾರ್ಥ ತುಂಬಾನೇ ಟೇಸ್ಟ್‌ ಅನ್ನುವ ಮಾತಿದೆ. ಹೀಗೆ ಕೋಳಿ ಅಂಕ-ಕಟ್ಟದ ಕೋರಿ ಇದೆಲ್ಲ ತುಳುನಾಡಿನ ಮನಸುಗಳ ಜತೆಗೆ ಬೆಸೆದುಕೊಂಡ ಸಂಗತಿಗಳು. ಇದೆಲ್ಲ ವಿಚಾರ ಇಲ್ಲಿ ಯಾಕೆ ಅನ್ನುತ್ತೀರಾ? ವಿಷಯ ಇರುವುದೇ ಇಲ್ಲಿ. ಇದೇ ಸಂಗತಿಯ ಹೆಸರನ್ನು ಇಟ್ಟುಕೊಂಡು ಕೋಸ್ಟಲ್‌ ವುಡ್‌ನ‌ಲ್ಲೊಂದು ಸಿನೆಮಾ ಮಾಡಲು ಸಿದ್ಧತೆ ನಡೆಯುತ್ತಿದೆ. ಹೆಸರು ‘ಕಟ್ಟದ ಕೋರಿ’!

Advertisement

ಆದರೆ, ಈ ಹೆಸರು ಕೇಳಿ ಕೋಳಿ ಅಂಕದ ಕಥೆ ಅಂದುಕೊಂಡರೆ ನಿಮ್ಮ ಭಾವನೆ ತಪ್ಪಾಗಬಹುದು. ಯಾಕೆಂದರೆ ಪಾತಕಿಗಳ ಲೋಕದಲ್ಲಿ ಕೂಡ ‘ಕಟ್ಟದ ಕೋರಿ’ ಎಂಬ ಪದ ಜಾರಿಯಲ್ಲಿರುವುದರಿಂದ ಈ ಟೈಟಲ್‌ ಅಲ್ಲಿಗೆ ಮಾತ್ರ ಅನ್ವಯವಾಗುತ್ತದೆ! ಅಂದರೆ ಇದು ಪಾತಕ ಲೋಕದ ಕಥೆ. ಪತ್ರಿಕೆಯೊಂದರಲ್ಲಿ ‘ಫಲ್ಗುಣಿ ನದಿ ತೀರದಲ್ಲಿ’ ಎಂಬ ಅಂಕಣವೊಂದು ಪ್ರಕಟವಾಗುತ್ತಿತ್ತು. ಕರಾವಳಿಯ ಭೂಗತ ಲೋಕದ ಕತೆಗಳೆಲ್ಲ ಇದರಲ್ಲಿ ಬರುತ್ತಿದ್ದವು. ಈ ಬರೆಹಗಳನ್ನೇ ಇಟ್ಟುಕೊಂಡು ನಿರ್ದೇಶಕ ಇಸ್ಮಾಯಿಲ್‌ ಮೂಡುಶೆಡ್ಡೆ ಇದೀಗ ಕಥೆಯ ರೂಪ ನೀಡುತ್ತಿದ್ದಾರೆ. ಹೆಚ್ಚಾ ಕಡಿಮೆ ಫೆಬ್ರವರಿ ವೇಳೆಗೆ ಕಟ್ಟದ ಕೋರಿಯ ಶೂಟಿಂಗ್‌ ಆರಂಭವಾಗುವ ನಿರೀಕ್ಷೆಯಿದೆ. ಪ್ರಸ್ತುತ ‘ಭೋಜರಾಜ್‌ ಎಂಬಿಬಿಎಸ್‌’ ಚಿತ್ರದ ಶೂಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಇಸ್ಮಾಯಿಲ್‌ ಅವರು ಡಿಸೆಂಬರ್‌ ನಲ್ಲಿ ಈ ಚಿತ್ರದ ಶೂಟಿಂಗ್‌ ಪೂರ್ಣಗೊಳಿಸಲಿದ್ದಾರೆ. 

ದಿನೇಶ್‌ ಇರಾ 

Advertisement

Udayavani is now on Telegram. Click here to join our channel and stay updated with the latest news.

Next