Advertisement
ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಮೂವರು ಪ್ರಮುಖ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದ್ದು, ತಲಾ ಒಂದು ಲಕ್ಷ ರೂ. ದಂಡವನ್ನೂ ನೀಡುವಂತೆ ಸೂಚಿಸ ಲಾಗಿದೆ. ಉಳಿದ ಮೂವರು ಆರೋಪಿಗಳಿಗೆ ತಲಾ 5 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
Related Articles
Advertisement
ತೀರ್ಪಿಗೆ ಸ್ವಾಗತಕಥುವಾ ಪ್ರಕರಣದ ತೀರ್ಪನ್ನು ಜಮ್ಮು- ಕಾಶ್ಮೀರದ ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರು ಸ್ವಾಗತಿಸಿದ್ದಾರೆ. ತಪ್ಪಿತಸ್ಥರಿಗೆ ಕಠಿನ ಶಿಕ್ಷೆಯಾಗ ಬೇಕು ಮತ್ತು ಆರೋಪಿಗಳನ್ನು ಸಮರ್ಥಿಸಿ ಕೊಂಡ ರಾಜಕೀಯ ನಾಯಕರು, ಸಂತ್ರಸ್ತೆ ಯನ್ನು ಅವಮಾನಿಸಿದ ಹಾಗೂ ಕಾನೂನು ವ್ಯವಸ್ಥೆಯನ್ನು ಹೀಗಳೆದವರಿಗೆ ಎಷ್ಟು ಖಂಡನೆ ವ್ಯಕ್ತಪಡಿಸಿದರೂ ಸಾಲದು ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಅನೇಕರು ತೀರ್ಪನ್ನು ಸ್ವಾಗತಿಸಿದ್ದಾರೆ. ಜತೆಗೆ, ಅಲಿಗಢ ದಲ್ಲಿ ಇತ್ತೀಚೆಗೆ ನಡೆದ 3 ವರ್ಷದ ಬಾಲಕಿಯ ಕೊಲೆ ಪ್ರಕರಣದ ತಪ್ಪಿತಸ್ಥರಿಗೂ ಕಠಿನ ಶಿಕ್ಷೆ ಯಾಗಲಿ ಎಂದು ಆಗ್ರಹಿಸಿದ್ದಾರೆ. 4 ದಿನ ನಿರಂತರ ಅತ್ಯಾಚಾರ
ಕಳೆದ ವರ್ಷದ ಜ.10ರಂದು ಕುದುರೆಗಳನ್ನು ಮೇಯಿಸಲು ಹೋಗಿದ್ದ 8 ವರ್ಷದ ಆಸಿಫಾಳನ್ನು ದುಷ್ಕರ್ಮಿಗಳು ಅಪಹರಣ ಮಾಡಿ, ದೇಗುಲವೊಂದಕ್ಕೆ ಒಯ್ದಿದ್ದರು. ಅಲ್ಲಿ ಆಕೆಗೆ ಅಮಲು ಬರುವ ಔಷಧಗಳನ್ನು ನೀಡಿ, 4 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಲಾಗಿತ್ತು. 4 ದಿನಗಳ ಬಳಿಕ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಅನಂತರ, ಕಲ್ಲೊಂದನ್ನು ತಲೆ ಮೇಲೆ ಎತ್ತಿ ಹಾಕಿ, ಸತ್ತಿರುವುದನ್ನು ದೃಢಪಡಿಸಲಾಗಿತ್ತು ಎಂದು ಕಳೆದ ವರ್ಷದ ಏಪ್ರಿಲ್‌ನಲ್ಲಿ ಸಲ್ಲಿಸಲಾದ 15 ಪುಟಗಳ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ರಸಾನಾ ಗ್ರಾಮದಲ್ಲಿ ನೆಲೆಯೂರಿರುವ ಅಲ್ಪ ಸಂಖ್ಯಾತ ಬಕರ್‌ವಾಲಾ ಸಮುದಾಯ ವನ್ನು ಆ ಪ್ರದೇಶದಿಂದ ಓಡಿಸುವ ಸಲುವಾಗಿ ಈ ಸಂಚು ರೂಪಿಸಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು. 2018ರ ಮೇ 7ರಂದು ಸುಪ್ರೀಂ ಈ ಪ್ರಕರಣದ ವಿಚಾರಣೆ ಯನ್ನು ಜಮ್ಮು- ಕಾಶ್ಮೀರದಿಂದ ಹೊರಗೆ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಅದರಂತೆ, ಪಂಜಾಬ್‌ನ ಪಠಾಣ್‌ಕೋರ್ಟ್ ನ್ಯಾಯಾಲಯದಲ್ಲಿ ದಿನಂಪ್ರತಿ ವಿಚಾರಣೆ ಶುರುವಾಗಿತ್ತು.