Advertisement

ಕಠುವಾ ರೇಪ್‌-ಮರ್ಡರ್‌: ಮೂವರಿಗೆ ಜೀವಾವಧಿ, ಇತರ ಮೂವರಿಗೆ 5 ವರ್ಷ ಜೈಲು

02:37 PM Jun 11, 2019 | Sathish malya |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಪಠಾಣ್‌ಕೋಟ್‌ನ ಕಠುವಾದಲ್ಲಿ ನಡೆದಿದ್ದ ಎಂಟು ವರ್ಷದ ಬಾಲಕಿಯ ಅಪಹರಣ, ಅತ್ಯಮಾನುಷ ಕೊಲೆ ಮತ್ತು ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಸಂಬಂಧಿಸಿ ಮೂವರು ಮುಖ್ಯ ಆರೋಪಿಗಳಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು ಇತರ ಮೂವರಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಪಠಾಣ್‌ಕೋಟ್‌ನ ವಿಶೇಷ ನ್ಯಾಯಾಲಯ ಇಂದು ಸೋಮವಾರ ವಿಧಿಸಿದೆ.

Advertisement

ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾದವರೆಂದರೆ ದೇವಳದ ಅರ್ಚಕ ಸಾಂಝೀ ರಾಮ್‌, ಪೊಲೀಸ್‌ ಅಧಿಕಾರಿಗಳಾದ ದೀಪಕ್‌ ಖಜೂರಿಯಾ ಮತ್ತು ಪರ್ವೇಶ್‌ ಕುಮಾರ್‌.

ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಇತರ ಮೂವರು ಅಪರಾಧಿಗಳೆಂದರೆ ಸುರೇಂದರ್‌ ವರ್ಮಾ, ಆನಂದ್‌ ದತ್ತ ಮತ್ತು ತಿಲಕ್‌ ರಾಜ್‌.

ಪಠಾಣ್‌ಕೋಟ್‌ ವಿಶೇಷ ನ್ಯಾಯಾಲಯ ಇಂದು ಬೆಳಗ್ಗೆ ಈ ಪ್ರಕರಣದ ಏಳು ಆರೋಪಿಗಳ ಪೈಕಿ ಆರು ಮಂದಿ ಅಪರಾಧಿಗಳೆಂದು ಸಾರಿತ್ತು.

ದೋಷಿಗಳೆಂದು ಪರಿಗಣಿಸಲ್ಪಟ್ಟ ಆರು ಮಂದಿಯಲ್ಲಿ ಪೊಲೀಸ್‌ ಅಧಿಕಾರಿಗಳಾದ ದೀಪಕ್‌ ಖಜೂರಿಯಾ ಮತ್ತು ಪರ್ವೇಶ್‌ ಕುಮಾರ್‌ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಸಾಂಝೀ ರಾಮ್‌ ಸೇರಿದ್ದರು. ಪ್ರಕರಣದ ಏಳನೇ ಆರೋಪಿ ವಿಶಾಲ್‌ ನನ್ನು ಕೋರ್ಟ್‌ ಖುಲಾಸೆ ಗೊಳಿಸಲಾಗಿತ್ತು.

Advertisement

ಮುಚ್ಚಿದ ಬಾಗಿಲ ಹಿಂದೆ ನಡೆದಿದ್ದ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್‌ ಕಳೆದ ಜೂನ್‌ 3ರಂದು ಮುಗಿಸಿತ್ತು. ಆ ದಿನ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶರಾದ ತೇಜ್‌ವಿಂದರ್‌ ಸಿಂಗ್‌ ಅವರು ತೀರ್ಪಿನ ದಿನಾಂಕವನ್ನು ಪ್ರಕಟಿಸಿದ್ದರು.

ಇಂದು ಸೋಮವಾರ ಮೇಲ್ಕಾಣಿಸಿದ ಆರೋಪಿಗಳು ಮಾತ್ರವಲ್ಲದೆ ಆನಂದ್‌ ದತ್ತ, ತಿಲಕ್‌ ರಾಜ್‌ ಮತ್ತು ಸುರೀಂದರ್‌ ಅವರನ್ನು ನ್ಯಾಯಾಧೀಶರು ರಣಬೀರ್‌ ಪೀನಲ್‌ ಕೋಡ್‌ ಪ್ರಕಾರ ಅಪರಾಧಿಗಳೆಂದು ಘೋಷಿಸಿದರು.

ಆರು ಮಂದಿಯ ವಿರುದ್ಧ ಅಪಹರಣ, ರೇಪ್‌, ಸಾಕ್ಷ್ಯ ನಾಶ ಮತ್ತು ಇತರ ಅಪರಾಧಗಳ ದೋಷಾರೋಪ ಮಾಡಲಾಗಿತ್ತು. ತೀರ್ಪಿನ ದಿನವಾದ ಇಂದು ಕೋರ್ಟ್‌ ಹೊರಗೆ ಬಿಗಿ ಭದ್ರತೆಯನ್ನು ಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next