ಮುಳಬಾಗಿಲು: ಊರ ಹೊರವಲಯಕ್ಕೆ ಹೋದರೆ ಸಾಕು ಕತ್ತಾಳೆ ಗಮನಕ್ಕೆ ಬರುತ್ತದೆ. ಆ ಕತ್ತಾಳೆ ದೂರದ ತಮಿಳುನಾಡಿನಿಂದ ಬಂದ ವಲಸಿಗರ ಕೈ ಹಿಡಿದಿದೆ. ಕತ್ತಾಳೆ ನಾರು ಬೇರ್ಪಡಿಸಿ ಮಾರಾಟ ಮಾಡುವ ಕೆಲಸ ಇಲ್ಲಿ ಅವ್ಯಾಹತವಾಗಿ ನಡೆದಿದೆ. ಗುಳೆ ಬಂದ ಕುಟುಂಬಗಳಿಗೆ ತಿಂಗಳು ಕಾಲ ಇದೇ ಕಾಯಕವಾಗಿದ್ದು, ಈ ಉದ್ಯೋಗ ಇವರ ಬದುಕಿನ ಆಧಾರವಾಗಿದೆ.
ರೈತನ ಕಬ್ಬಿಣದ ಕೋಟೆ ಎಂದೇ ಹೆಸರಾದ ಕತ್ತಾಳೆ ವಿದೇಶದಿಂದ ಬಂದಿದ್ದರೂ ರೈತನಿಗೆ ಸಹಕಾರಿಯಾಗಿ ಹಗ್ಗ, ಕಣ್ಣಿ ಮುಂತಾದ ಉತ್ಪನ್ನ ಗಳನ್ನು ತಯಾರಿಸಲಾಗುತ್ತದೆ. ಪ್ರಮುಖವಾಗಿ ರೈತರ ಜಮೀ ನಿಗೆ ಬೇಲಿ ಯಾಗಿ, ಮಳೆ ನೀರಿನಿಂದ ಕೊಚ್ಚಿ ಹೋಗುವ ಮಣ್ಣನ್ನು ತನ್ನ ಬೇರು ಗಳಿಂದ ಭದ್ರವಾಗಿ ಹಿಡಿದು ತಡೆಗಟ್ಟಿ ಜಮೀನಿ ನಲ್ಲಿ ಕೈಗೊಳ್ಳುವ ಕೃಷಿ ಚಟುವಟಿಕೆಗಳಿಗೆ ರಕ್ಷಣೆಯಾಗಿ ನಿಂತಿದೆ.
ಆಧುನಿಕತೆಯ ಅಬ್ಬರ: ಔಷಧೀಯ ಗುಣಗಳನ್ನು ಹೊಂದಿ ರುವ ಕತ್ತಾಳೆಯಿಂದ ಅನೇಕ ರೀತಿಯ ಗೃಹ ಬಳಕೆ ಉತ್ಪನ್ನಗಳನ್ನು ತಯಾರಿಸಿಕೊಳ್ಳಬಹುದಾಗಿದೆ. ಪ್ರಮುಖವಾಗಿದನ- ಕರುಗಳಿಗೆ ಬೇ ಕಾದ ಹಗ್ಗ ವನ್ನು ತಯಾರಿಸಲು ಹಿಂದೆ ಹಲವು ಗುಡಿ ಕೈಗಾರಿಕೆಗಳು ತಲೆ ಎತ್ತಿದ್ದವು. ಕ್ರಮೇಣ ಆಧುನಿಕತೆಯ ಅಬ್ಬರದಲ್ಲಿ ನಶಿಸಿ ಹೋಗಿವೆ ಎನ್ನಲಾಗುತ್ತಿದೆ.
ಕುಟುಂಬ ನಿರ್ವಹಣೆ: ಆರ್ಥಿಕವಾಗಿ ಹಿಂದುಳಿದಿದ್ದ ಐದಾರು ಕುಟುಂ ಬದ ನಿರ್ವಹಣೆಗಾಗಿ ಕತ್ತಾಳೆ ನಾರು ತೆಗೆಯುವ ಕೆಲಸ ತಮಿಳುನಾಡಿನ ಹೊಸೂರ್ ಪೆರುಮಾಳ್ ಮಾಡುತ್ತಿದ್ದಾರೆ. ತಾಲೂಕಿನ ಆಂಧ್ರಗಡಿ ಭಾಗದಲ್ಲಿ 6 ತಿಂಗಳಿನಿಂದ ತಾನು ಕಲಿತ ಕಸುಬಿನಿಂದ ಕತ್ತಾಳೆ ಪಟ್ಟೆಗಳಿಂದ ಹಗ್ಗ ತಯಾರಿಸುತ್ತಾ ಕುಟುಂಬಗಳ ನಿರ್ವಹಣೆ ಮಾಡುತ್ತಿ ದ್ದಾರೆ. ಕುಟುಂಬದ ಸದಸ್ಯರು ರೈತರ ಜಮೀನಿನ ಸುತ್ತಲೂ ಬೆಳೆದಿರುವ ಕತ್ತಾಳೆ ಪಟ್ಟೆ (ಎಲೆ) ಗಳನ್ನು ತಂದು ಹಗ್ಗ ತಯಾರಿಸಲು ಸಹಕಾರ ನೀಡು ತ್ತಾರೆ. ಇದರಿಂದ ರೈತರ ಜಮೀನಿನ ಬೇಲಿಯೂ ಸ್ವಚ್ಛವಾದಂತೆ ಆಗು ತ್ತದೆ, ಇತ್ತ ಕಸುಬಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ ಪೆರುಮಾಳ್.
ಬಹುಉಪಯೋಗಿ: ನಾರಿನಿಂದ ವ್ಯವಸಾಯಕ್ಕೆ ಬಳಸುವ ಹಗ್ಗ, ಕಣ್ಣಿ, ಕಲ್ಲಿ ಅಲ್ಲದೆ ಕೆಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೇರು ಎಳೆಯಲು ನಾರಿನಿಂದ ತಯಾರಿಸಿದ ಹಗ್ಗ ಉಪಯೋಗಿಸುತ್ತಾರೆ. ಕತ್ತಾಳೆ ನಾರಿ ನಿಂದ ವ್ಯಾನಿಟಿ ಬ್ಯಾಗ್, ಕೈ ಚೀಲ ತಯಾರಿಸುತ್ತಾರೆ. ನಾರು ತೆಗೆದ ನಂತರ ಉಳಿಯುವ ಸಿಪ್ಪೆ ಉತ್ತಮ ಗೊಬ್ಬರ. ನಾರು ತೆಗೆಯುವಾಗ ಹೊರ ಹೊಮ್ಮುವ ರಸ ಬೆಳೆಗಳಿಗೆ ತಗಲುವ ರೋಗಕ್ಕೆ ಔಷಧ. ಹೀಗಾಗಿ ಈ ಕತ್ತಾಳೆಗೆ ಹೆಚ್ಚಿನ ಬೇಡಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಜನಸಾಮಾ ನ್ಯರು ಅತಿಯಾಗಿ ಪ್ಲಾಸ್ಟಿಕ್‌ಗೆ ಮಾರುಹೋಗುತ್ತಿರುವುದರಿಂದ ಸಾವಯವ ಕತ್ತಾಳೆ ಹಗ್ಗವನ್ನೂ ಕೇಳುವವರೇ ಇಲ್ಲದಂತಾಗಿದೆ. ಜೀವನೋ ಪಾಯಕ್ಕಾಗಿ ಕತ್ತಾಳೆಯಿಂದ ತಯಾರಿಸಿದ ನಾರನ್ನು ಹೊರ ರಾಜ್ಯಗಳಿಗೆ ತೆಗೆದುಕೊಂಡು ಹೋಗಿ ಚೌಕಾಸಿ ಮಾಡಿ ಮಾರಬೇಕಾದ ಪರಿಸ್ಥಿತಿ ತಲೆ ದೋರಿದೆ. ಗ್ರಾಮೀಣ ಭಾಗದಲ್ಲಿರುವಂತಹ ಗುಡಿ ಕೈಗಾರಿಕೆಗಳನ್ನು ಉಳಿಸಬೇಕಿದೆ.
● ಎಂ.ನಾಗರಾಜಯ್ಯ