Advertisement
ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟರು 2005ರಲ್ಲಿ ಕಟೀಲು ಮೇಳ ವಹಿಸಿಕೊಳ್ಳುವ ಸಂದರ್ಭದಲ್ಲಿ ನಾಲ್ಕು ಮೇಳಗಳು ಇದ್ದು ಈಗ ಆರು ಮೇಳಗಳು ಆಗಿವೆ. 350 ಜನ ಕಲಾವಿದರು ಜೀವನ ಸಾಗಿಸುತ್ತಿದ್ದಾರೆ. ಮೇಳದಿಂದ ಕೈ ಬಿಟ್ಟ ಕಲಾವಿದರು ಮೇಳದಿಂದ ಹೊರ ಹಾಕಿದ್ದಾರೆ ಎಂದು ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮೇಳಕ್ಕೆ 6 ತಿಂಗಳ ಅವಧಿಗೆ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ಸೆಕ್ಷನ್ 38 ರಿಜಿಸ್ಟರ್ ನಲ್ಲಿ ಉಲ್ಲೇಖವಿದೆ. ಆದ್ದರಿಂದ ಕಲಾವಿದರನ್ನು ಹೊರ ಹಾಕುವ ಪ್ರಶ್ನೆಯೇ ಇಲ್ಲ ಎಂದರು.
ಏಲಂ ವಿಷಯದಲ್ಲಿ ಎಷ್ಟು ಜನ ಕಲಾವಿದರು ದೂರು ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಸ್ರಣ್ಣ, ಈ ಬಗ್ಗೆ ಅಧಿಕೃತವಾಗಿ ನೋಟಿಸ್ ಬಂದಿಲ್ಲ. ಜಿಲ್ಲಾಧಿಕಾರಿಯವರು ರವಿಶೆಟ್ಟಿ ಕಿದೂರು ಮತ್ತು ಅನಂತರಾಜ ರಾವ್ ಕಟೀಲು ಅವರ ದೂರಿನ ಬಗ್ಗೆ ದೇಗುಲ ಆಡಳಿತ ಮಂಡಳಿಯಿಂದ ಅಭಿಪ್ರಾಯ ಕೇಳಿದ್ದು ಉತ್ತರ ನೀಡಿದ್ದೇವೆ, ಬಿರುವೆರ್ ಕುಡ್ಲ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯವರ ದೂರಿನ ಬಗ್ಗೆ ಅಭಿಪ್ರಾಯ ಕೇಳಿದ್ದು ಮೇಳದ ಯಜಮಾನರಿಗೆ ನೋಟಿಸ್ ನೀಡಿದ್ದೇವೆ. ಉತ್ತರ ಬಂದ ಕೂಡಲೇ ಕಳುಹಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಅನಂತಪದ್ಮನಾಭ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು ಮತ್ತಿತರರು ಇದ್ದರು.
Related Articles
ಇತ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತರ ಯಕ್ಷಗಾನ ಮಂಡಳಿಯ ಆರು ಮೇಳಗಳ ಕಲಾವಿದರ ಸಭೆಯು ಕಟೀಲು ದೇವಸ್ಥಾನದ ಸಭಾಭವನದಲ್ಲಿ ಬುಧವಾರ ನಡೆದಿದೆ. ಮೇಳದ ಯಜಮಾನದರಾದ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಈ ಸಭೆ ಕರೆದಿದ್ದರು. ಸಾಮಾಜಿಕ ಜಾಲಾತಾಣ ಹಾಗೂ ಮಾಧ್ಯಮಗಳಲ್ಲಿ ಯಕ್ಷಗಾನ ಮೇಳಗಳ ಬಗ್ಗೆ ಹರಿದಾಡುತ್ತಿದ್ದ ವಿವಾದಿತ ಸುದ್ದಿಯ ಬಗ್ಗೆ ಚರ್ಚೆ ನಡೆಸಿ ಗೊಂದಲ ನಿವಾರಿಸಲು ಯತ್ನಿಸಲಾಗಿದೆ.
Advertisement