Advertisement

ಕಟೀಲು ದೇವಸ್ಥಾನ : 62 ಜೋಡಿಗಳ ಸರಳ ವಿವಾಹ

02:02 AM Apr 25, 2022 | Team Udayavani |

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ 62 ಜೋಡಿಗಳ ಸರಳ ವಿವಾಹವು ನಡೆಯಿತು. ಬೆಳಗ್ಗೆ 8ರಿಂದ ಆರಂಭವಾದ ವಿವಾಹ ಮುಹೂರ್ತಗಳು ಮಧ್ಯಾಹ್ನ ಒಂದರ ತನಕ ನಡೆದವು. 25 ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಂದಾಜು 10 ಸಾವಿರ ಮಂದಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ.

Advertisement

ನಾಲ್ಕು ಕೌಂಟರ್‌ ವ್ಯವಸ್ಥೆ
ವಿವಾಹ ಮುಹೂರ್ತಗಳನ್ನು ಸುವ್ಯಸ್ಥಿತವಾಗಿ ನೆರವೇರಿಸುವುದಕ್ಕಾಗಿ ದೇಗುಲದ ವತಿಯಿಂದ 8 ಮಂದಿ ಅರ್ಚಕ ಪುರೋಹಿತರು, 4 ಕೌಂಟರ್‌ಗಳು ಮತ್ತು ನೋಂದಣಿಗೆ ಪ್ರತ್ಯೇಕ ಸಿಬಂದಿ ನೇಮಕ ಮಾಡಲಾಗಿತ್ತು.

ರವಿವಾರವೂ ಆಗಿದ್ದು, ಮದುವೆ ಮಹೂರ್ತಗಳು ಹೆಚ್ಚು ಇದ್ದುದರಿಂದ ಯಾವುದೇ ಗೊಂದಲ ಮೂಡದಂತೆ ಯಶಸ್ವಿಯಾಗಿ ನಿಭಾಯಿಸಲು ಇದು ಸಹಕಾರಿಯಾಯಿತು.

ಉತ್ತಮ ಟ್ರಾಫಿಕ್‌ ವ್ಯವಸ್ಥೆ
ಮದುವೆಗೆ ಬಂದ ದಿಬ್ಬಣಗಳು ಮತ್ತು ರಜಾ ದಿನವಾದುದರಿಂದ ಕಟೀಲು ಪೇಟೆ ಮತ್ತು ರಥಬೀದಿ ಬಸ್‌ ನಿಲ್ದಾಣದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುವ ಸಾಧ್ಯತೆಗಳಿದ್ದವು. ಆದರೆ ಇದನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಲಾಗಿತ್ತು. ರಥ ಬೀದಿಯಲ್ಲಿ ಬಸ್‌ ನಿಲುಗಡೆ ನೀಡದೆ ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಲಾಗಿತ್ತು. ಪಕ್ಕದ ಸಿತ್ಲಬೈಲು, ಕಾಲೇಜು ಆವರಣ ಮತ್ತು ಉಲ್ಲಂಜೆಯತ್ತ ತೆರಳು ರಸ್ತೆಯ ಪಕ್ಕದ ಗದ್ದೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು ಎಂದು ದೇಗುಲದ ಆಡಳಿತ ಮೊಕ್ತೇಸರ ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರು ಗುತ್ತು ತಿಳಿಸಿದ್ದಾರೆ.
ಪ್ರಸ್ತುತ ದೇವಸ್ಥಾನದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಊಟದ ಛತ್ರದಲ್ಲಿಯೂ ಗರಿಷ್ಠ ಶುಚಿತ್ವ ಪಾಲನೆ. ಊಟದ ತಟ್ಟೆಗಳನ್ನು ಬಿಸಿನೀರಿನಿಂದ ತೊಳೆದು ಭಕ್ತರಿಗೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next