ಕಟೀಲು: ನಿಸ್ವಾರ್ಥ ಭಕ್ತಿ, ತ್ಯಾಗ ಭಾವದಿಂದ ಭಗವಂತನ ಪರಿಪೂರ್ಣ ಅನುಗ್ರಹ ಸಾಧ್ಯ ಎಂದು ಕನ್ಯಾಡಿ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು. ಅವರು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲ ಶೋತ್ಸವದ ಅಂಗವಾಗಿ ಸೋಮವಾರ ನಡೆದ ಸಹಸ್ರ ಚಂಡಿಕಾ ಯಾಗದ ಪ್ರಯುಕ್ತ ಭ್ರಾಮರೀ ಸಭಾಂಗಣದಲ್ಲಿ ಸಂಪನ್ನಗೊಂಡ 13ನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತ ಮಣಿಸ್ವಾಮಿ ಆಶೀರ್ವಚನ ನೀಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ| ಕೃಷ್ಣೇ ಗೌಡ “ಭಾಷೆಯೊಳಗಿನ ಭಕ್ತಿ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಹಿರಿಯ ಪತ್ರಕರ್ತ ಶಾಂತಪ್ರಿಯ, ಉಚ್ಚ ನ್ಯಾಯಾಲಯ ಹಿರಿಯ ನ್ಯಾಯವಾದಿ ಪಿ.ಎಸ್. ರಾಜಗೋಪಾಲ್, ಚಲನಚಿತ್ರ ನಟ ರಮೇಶ್ ಭಟ್, ಬೆಂಗಳೂರು ಕೈಗಾರಿಕೋದ್ಯಮಿ ಮಂಜುನಾಥ್, ವಿವಿಧ ಕ್ಷೇತ್ರಗಳ ಗಣ್ಯರಾದ ಶಶಿಧರ್ ಶೆಟ್ಟಿ, ಕೊಡೆತ್ತೂರು ನಡೊಡಿಗುತ್ತು ಶೋಭಾ ಶೆಟ್ಟಿ, ಡಾ| ಜಯರಾಮ ಶೆಟ್ಟಿ, ತೆಳ್ಳಾರು ಮಹೇಶ್ ಶೆಟ್ಟಿ, ಬಾಲಕೃಷ್ಣ ಕೊಟ್ಟಾರಿ, ಸುರತ್ಕಲ್ ಗುಣಪಾಲ ಶೆಟ್ಟಿ, ಮುಂಬಯಿಯ ಸುಂದರ ಪೂಜಾರಿ, ನಾರಾಯಣ ಹೆಗ್ಡೆ, ಮಿಜಾರುಗುತ್ತು ಆನಂದ ಆಳ್ವ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಡಾ| ಆಶಾಜ್ಯೋತಿ ರೈ ಉಪಸ್ಥಿತರಿದ್ದರು.
ಕಟೀಲಿನ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಪ್ರಸ್ತಾವನೆಗೈದು ಸ್ವಾಗತಿಸಿದರು. ಶ್ರೀಹರಿ ನಾರಾಯಣದಾಸ ಆಸ್ರಣ್ಣ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಸಹಕರಿಸಿ ದವರಿಗೆ ಕೃತಜ್ಞತೆ ಅರ್ಪಿಸಿದರು. ಮಧುಕರ ಅಮೀನ್ ವಂದಿಸಿದರು. ದಯಾನಂದ ಕಟೀಲು ನಿರ್ವಹಿಸಿದರು.