ಕಟೀಲು: ಧಾರ್ಮಿಕ ಕೇಂದ್ರಗಳು ನಮ್ಮ ಸನಾತನ ಸಂಸ್ಕೃತಿಯ ಪ್ರತೀಕವಾಗಿದ್ದು, ದೈವಿಕ ಚಿಂತನೆಯಿಂದ ನಾವು ಸಾಗಿದರೆ ಬದುಕು ಪಾವನವಾಗಲು ಸಾಧ್ಯ ಎಂದು ಹೊಸನಗರ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀತೀರ್ಥ ಸ್ವಾಮೀಜಿ ಹೇಳಿದರು.
ಕಟೀಲು ಶ್ರೀ ದುಗಾರಪರಮೇಶ್ವರೀ ದೇವಿಯ ಬ್ರಹ್ಮಕಲಶೋತ್ಸವದ ಅಂಗವಾಗಿ ಭ್ರಾಮರಿ ಸಭಾಂಗಣದಲ್ಲಿ ಶುಕ್ರವಾರ ಸಂಪನ್ನಗೊಂಡ ಹತ್ತನೇ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಬಾರಕೂರು ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದರು. ಮಾಣಿಲದ ಶ್ರೀ ಮೋಹನ್‌ದಾಸ ಸ್ವಾಮೀಜಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ ಭಟ್, ಬೆಳ್ತಂಗಡಿ, ಕಾಶಿಪಟ್ನ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಳ ಅನಂತ ಆಸ್ರಣ್ಣ, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರೋಹಿತ್ ಚಕ್ರತೀರ್ಥ, ಸಂಗೀತ ನಿರ್ದೇಶಕ ಗುರುಕಿರಣ್, ಗಣ್ಯರಾದ ಐಕಳ ಹರೀಶ್ ಶೆಟ್ಟಿ, ಇನ್ನ ಸಂತೋಷ್ ಶೆಟ್ಟಿ, ವಿಶ್ವನಾಥ ಪೂಜಾರಿ ಕಡ್ತಲ, ಮೀಯಾರು ಆನಂದ ಶೆಟ್ಟಿ, ಉದ್ಯಮಿಗಳಾದ ಎರ್ಮಾಳು ಎನ್.ಕೆ. ಶೆಟ್ಟಿ, ವಾಲ್ಪಾಡಿ ನಾರಾಯಣ ಶೆಟ್ಟಿ, ನಗ್ರಿಗುತ್ತು ರೋಹಿತ್ ಡಿ. ಶೆಟ್ಟಿ, ಪದ್ಮನಾಭ ಶೆಟ್ಟಿ ಮುಂಬಯಿ, ಕಟೀಲು ಚಂದ್ರಶೇಖರ ಬಿ., ಏಳಿಂಜೆ ಕೋಂಜಾಲು ಗುತ್ತು ಪ್ರಭಾಕರ ಶೆಟ್ಟಿ, ಎಲ್.ವಿ. ಅಮೀನ್, ಐಕಳ ವಿಶ್ವನಾಥ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಸುಂದರ ಪೂಜಾರಿ, ಪ್ರಶಾಂತ ರಾಮ ಶೆಟ್ಟಿ, ಜಗನ್ನಾಥ ಶೆಟ್ಟಿ, ಅತ್ತೂರು ಸಂಜೀವ ಶೆಟ್ಟಿ, ಕಟೀಲು ಬಾಲಕೃಷ್ಣ ಆಚಾರ್ಯ, ವೆಂಕಟೇಶ್, ಸುಧಾಕರ ಶೆಟ್ಟಿ, ದಯಾನಂದ ಶೆಟ್ಟಿ, ಮುಂಡ್ಕೂರು ದೊಡ್ಡಮನೆ ರೂಪರಾಜ ಶೆಟ್ಟಿ, ಕಾರ್ಕಳ ಭಾಸ್ಕರ ಶೆಟ್ಟಿಉಪಸ್ಥಿತರಿದ್ದರು.
ಗುರುರಾಜ ಮಲ್ಲಿಗೆಯಂಗಡಿ ಸ್ವಾಗತಿಸಿದರು. ಜನಾರ್ದನ ಕಿಲೆಂಜೂರು ವಂದಿಸಿದರು. ಶೈಲಜಾ ಆಚಾರ್ಯ ನಿರೂಪಿಸಿದರು.