Advertisement

ಮತ್ತೆ ಬಾಯ್ದೆರೆದು ಗುಂಡಿ; ರಾ. ಹೆ.ಯಲ್ಲಿ ಸಂಚಾರ- ಅಪಾಯದಲ್ಲಿ ಸವಾರ

01:28 PM Aug 07, 2022 | Team Udayavani |

ಕಟಪಾಡಿ: ಕಟಪಾಡಿಯಿಂದ ಉಡುಪಿಯತ್ತ ತೆರಳುವ ಪಶ್ಚಿಮ ಪಾರ್ಶ್ವದ ಇಳಿಜಾರು ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹದಾಕಾರದ ಗುಂಡಿಯು ಮತ್ತೆ ಬಾಯ್ದೆರೆದು ನಿಂತಿದೆ.

Advertisement

ಗುಂಡಿ ಬಳಿ ಬ್ಯಾರಿಕೇಡ್‌, ಸಹಿತ ಇತರೆ ತಡೆಗಳನ್ನು ಇರಿಸಲಾಗಿದ್ದರೂ ಜೋರಾಗಿ ಮಳೆ ಬರುವ ಸಂದರ್ಭ ರಸ್ತೆಯೇ ಕಾಣುವು ದಿಲ್ಲ. ಮಳೆ ಬಂದಾಗ ನೀರು ತುಂಬಿದ ಗುಂಡಿಯು ಗಮನಕ್ಕೆ ಬಾರದೆ ವಾಹನಗಳು ಇದರ ಮೇಲೆ ಹಾದು ಜಖಂಗೊಳ್ಳುತ್ತಿದೆ. ಕತ್ತಲಾದ ಬಳಿಕ ದ್ವಿಚಕ್ರ, ಲಘು ವಾಹನ ಸವಾರರಿಗೆ ಸಂಚಾರವು ಬಲು ಅಪಾಯಕಾರಿಯಾಗಿದೆ. ವಾಹನ ಚಾಲಕರೂ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ.

ಕಳೆದ ತಿಂಗಳಲ್ಲಿ ಉದಯವಾಣಿಯು ಇದೇ ಗುಂಡಿಯ ಬಗ್ಗೆ ವರದಿ ಬಿತ್ತರಿಸಿದ್ದು, ಎಚ್ಚೆತ್ತ ಹೆದ್ದಾರಿ ಇಲಾಖೆಯು ತೇಪೆ ಕಾರ್ಯ ನಡೆಸಿತ್ತು. ಮತ್ತೆ ಇದೇ ಸ್ಥಳದಲ್ಲಿ ಅತ್ಯಂತ ಅಪಾಯಕಾರಿ ಮಟ್ಟದ ಗುಂಡಿಯು ಕಂಡು ಬರುತ್ತಿದ್ದು, ತೀವ್ರತರವಾದ ಅವಘಡ ಸಂಭವಿಸುವ ಮುನ್ನವೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸಮರೋಪಾದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ: ಹೆದ್ದಾರಿ ನಡುವೆ ಕಂಡು ಬರುವ ಕಂದಕವು ಅಪಾಯಕಾರಿ. ಕೆರೆಯಂತಾಗಿರುವ ಈ ಗುಂಡಿಯ ಭಾಗದಲ್ಲಿ ಸಂಚರಿಸುವಾಗ ಸ್ವಲ್ಪ ಏಮಾರಿದರೂ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ. ಮಳೆಯ ನೆಪವೊಡ್ಡದೆ ಹೆದ್ದಾರಿ ಸಂಚಾರಕ್ಕೆ ಸುರಕ್ಷತೆಯನ್ನು ಕಲ್ಪಿಸ ಬೇಕಿದೆ. – ಸಂತೋಷ್‌ ಪೂಜಾರಿ, ಬೈಕ್‌ ಸವಾರ, ಫಾರೆಸ್ಟ್‌ ಗೇಟ್‌, ಕಟಪಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next