Advertisement

ಕಟಪಾಡಿ ಮಟ್ಟು ರಿಕ್ಷಾದಲ್ಲೂ ನಗದು ರಹಿತ ವ್ಯವಹಾರ

06:00 AM Jul 05, 2018 | Team Udayavani |

ಕಟಪಾಡಿ: ನಗದು ರಹಿತ ವ್ಯವಹಾರಕ್ಕೆ ಕೇಂದ್ರ ಸರಕಾರ ನೋಟು ಅಪಮೌಲ್ಯ ಬಳಿಕ ಹೆಚ್ಚು ಬೆಂಬಲ ನೀಡುತ್ತಿದೆ. ಇದೇ ಪ್ರೇರಣೆಯಿಂದ ಕಟಪಾಡಿ ಮಟ್ಟುವಿನ ರಿಕ್ಷಾ ಚಾಲಕ ಶರತ್‌ ಅಮೀನ್‌ ಅವರೂ ನಗದು ರಹಿತ ವ್ಯವಹಾರಕ್ಕೆ ಮುಂದಾಗಿದ್ದಾರೆ. 

Advertisement

ಇದಕ್ಕಾಗಿ ಅವರು ತನ್ನ ರಿಕ್ಷಾದಲ್ಲಿ ಪೇಟಿಎಂ ಕ್ಯೂಆರ್‌ ಕೋಡ್‌ ಅಳವಡಿಸಿಕೊಂಡಿದ್ದಾರೆ. ಬಾಡಿಗೆದಾರರು ಇದನ್ನು ಪೇಟಿಎಂ ಆ್ಯಪ್‌ನಲ್ಲಿ ಸ್ಕ್ಯಾನ್‌ ಮಾಡಿ ಪಾವತಿ ಮಾಡಿದರೆ ಸಾಕು. ನಗದು ಕೊಡಬೇಕಾದ ಆವಶ್ಯಕತೆಯೇ ಇಲ್ಲ.
  
7 ವರ್ಷದಿಂದ ಕಟಪಾಡಿಯಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿರುವ ಶರತ್‌ ಮೊದಲು ಎಲೆಕ್ಟ್ರೀಶನ್‌ ಆಗಿದ್ದರು. ಮೊಬೈಲ್‌, ಆ್ಯಪ್‌ಗ್ಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ. 

ಮುಂಬಯಿಗೆ ತೆರಳಿದ್ದಾಗ ಅಲ್ಲಿನ ರಿಕ್ಷಾದಲ್ಲಿ ಪೇಟಿಯಂ ಆ್ಯಪ್‌ ಮೂಲಕ ಪಾವತಿ ಬಗ್ಗೆ ನೋಡಿದ್ದು, ಅದನ್ನೇ ತಮ್ಮ ರಿಕ್ಷಾದಲ್ಲೂ ಅಳವಡಿಸಿಕೊಂಡಿದ್ದಾರೆ. ಮಟ್ಟು ಅಣೆಕಟ್ಟು ಮತ್ತು ಬೀಚ್‌ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ನಗದು ರಹಿತ ಪಾವತಿ ವ್ಯವಸ್ಥೆಯಿಂದ ಪ್ರವಾಸಿಗರಿಗೂ ಅನುಕೂಲವಾಗಿದೆ. ಈ ಮೂಲಕ ನಗರದಲ್ಲಿದ್ದ ವ್ಯವಸ್ಥೆ ಗ್ರಾಮೀಣ ಭಾಗಕ್ಕೂ ಬಂದಂತಾಗಿದೆ.  

ಡಿಜಿಟಲ್‌ ಇಂಡಿಯಾ ಪ್ರೇರಣೆ‌
ಡಿಜಿಟಲ್‌ ಇಂಡಿಯಾ ಪ್ರೇರಣೆಯಿಂದ ನಗರದ ರಿಕ್ಷಾಗಳಲ್ಲಿರುವಂತೆ ಈ ವ್ಯವಸ್ಥೆ ಒದಗಿಸಲಾಗಿದೆ. ಕೆ.ವೈ.ಸಿ. ನೋಂದಣಿ ಆದ ಕೂಡಲೇ ನಗದು ರಹಿತ ವ್ಯವಹಾರ ಆರಂಭಿಸಲಿದ್ದೇನೆ.   
– ಶರತ್‌ ಅಮೀನ್‌ ಮಟ್ಟು,,  
ರಿಕ್ಷಾ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next