ಬ್ರಹ್ಮಾವರ ಮೂವೀಸ್ ಸಂಸ್ಥೆ ನಿರ್ಮಾಣದ ತುಳು ಚಿತ್ರ ‘ಕಟಪಾಡಿ ಕಟ್ಟಪ್ಪ’ ಕೋಸ್ಟಲ್ವುಡ್‌ನಲ್ಲಿ ಈ ಬಾರಿ ಹೊಸ ದಾಖಲೆ ಮಾಡಿದೆ. ಮಾ.29 ರಂದು ದೇಶದಾದ್ಯಂತ 200 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯ ಕನಸಿನೊಂದಿಗೆ ಮೂಡಿಬಂದ ಈ ಸಿನೆಮಾ ಮೊನ್ನೆ ಶನಿವಾರ ಮಂಗಳೂರಿನಲ್ಲಿ ಶತದಿನದ ದಾಖಲೆ ಬರೆದಿದೆ. ವಿಶೇಷವೆಂದರೆ, ಕನ್ನಡದ ಬೆಲ್ಬಾಟಮ್ ಹಾಗೂ ಯಜಮಾನ ಸಿನೆಮಾ ಶತದಿನ ಆಚರಿಸಿದ ಬಳಿಕ ಕರ್ನಾಟಕದ ಮೂರನೇ ಸಿನೆಮಾವಾಗಿ ಕಟಪಾಡಿ ಕಟ್ಟಪ್ಪ ಶತದಿನದ ದಾಖಲೆ ಪ್ರದರ್ಶಿಸಿದೆ.
ರಾಜೇಶ್ ಬ್ರಹ್ಮಾವರ ನಿರ್ಮಾಣದ, ಖ್ಯಾತ ರಂಗಭೂಮಿ ನಟ ಜೆ.ಪಿ.ತೂಮಿನಾಡ್ ನಿರ್ದೇಶನದ ‘ಕಟಪಾಡಿ ಕಟ್ಟಪ್ಪ’ದಲ್ಲಿ ವಿಜಯ ಕುಮಾರ್ ಕೊಡಿಯಾಲ್ಬೈಲ್, ಉದಯ ಪೂಜಾರಿ, ಯಜ್ಞೇಶ್ವರ್ ಬರ್ಕೆ, ಪಮ್ಮಿ ಕೊಡಿಯಾಲ್ಬೈಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಸೂರಜ್ ಪಾಂಡೇಶ್ವರ್, ಧೀರಜ್ ನೀರುಮಾರ್ಗ, ರಂಜಿತಾ ಶೇಟ್, ದೀಪ್ತಿ ರಾವ್, ಪ್ರೇಮ್ ಶೆಟ್ಟಿ ಮುಂಬಯಿ, ನಿವೇದಿತಾ, ಸತೀಶ್ ಬಲ್ಮಠ ಹಾಗೂ ನಾಯಕಿ ನಟಿಯಾಗಿ ಚರಿಷ್ಮಾ ಸಾಲಿಯಾನ್ ನಟಿಸಿದ್ದಾರೆ.
ಚಿತ್ರದ ಛಾಯಾಗ್ರಹಣ ರುದ್ರಮುನಿ ಬೆಳಗೆರೆ ನಡೆಸಿದ್ದು, ಪ್ರಕಾಶ ಹಾಗೂ ಲೋಯ್ ಅವರು ಸಂಗೀತ ನೀಡಿದ್ದಾರೆ. ಸಂಕಲನವನ್ನು ಗಣೇಶ್ ನೀರ್ಚಾಲ್ ನಿರ್ವಹಿಸಿದ್ದಾರೆ. ವಸ್ತ್ರಾಲಂಕಾರವನ್ನು ಶರತ್ ಪೂಜಾರಿ ಬರ್ಕೆ ಒದಗಿಸಿದ್ದಾರೆ.
ಕೋಸ್ಟಲ್ವುಡ್‌ನಲ್ಲಿ ಹೊಸ ನಿರೀಕ್ಷೆ ಹಾಗೂ ಆಶಯದೊಂದಿಗೆ ತೆರೆ ಕಂಡ ಕಟಪಾಡಿ ಕಟ್ಟಪ್ಪ ಸಿನೆಮಾವನ್ನು ಸ್ಯಾಂಡಲ್ವುಡ್ ಕೂಡ ಮೆಚ್ಚಿತ್ತು.
ವಿಶೇಷವೆಂದರೆ ಕರಾವಳಿಯಲ್ಲದೆ, ಹೊರ ಜಿಲ್ಲೆ, ರಾಜ್ಯ ಹಾಗೂ ಹೊರದೇಶದಲ್ಲಿಯೂ ಕಟ್ಟಪ್ಪ ಸಿನೆಮಾ ಸದ್ದುಮಾಡಿತ್ತು. ವಿಭಿನ್ನ ಬಗೆಯ ಕಥೆ ಹಾಗೂ ವಿಭಿನ್ನ ಕಾಮಿಡಿ ಗೆಟಪ್‌ನಲ್ಲಿ ಮೂಡಿಬಂದ ಈ ಸಿನೆಮಾ ಕೋಸ್ಟಲ್ವುಡ್‌ನಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿತ್ತು.