ಕಟಪಾಡಿ: ಶಂಕರಪುರ ದ್ವಾರಕಾಮಾಯಿ ಮಠ ಶ್ರೀಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಧರ್ಮದರ್ಶಿಗಳಾದ ಶ್ರೀ ಸಾಯಿ ಈಶ್ವರ್ ಗುರೂಜಿ ನೇತೃತ್ವದಲ್ಲಿ ಗುರುವರ್ಯರಾದ ಶ್ರೀ ಪ್ರವೀಣ್‌ರಾಜ್ ಮಚ್ಚೇಂದ್ರನಾಥ ಬಾಬಾರ ಉಪಸ್ಥಿತಿಯಲ್ಲಿ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ, ನಾನಾ ರಾಜ್ಯಗಳ ಸಾಧು ಸಂತರು, ಗುರುವರೇಣ್ಯರಿಗೆ ಗುರುವಂದನೆಯು ಸೋಮವಾರ ಜರಗಿತು.
ಗುರು ಸಂದೇಶ ನೀಡಿದ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮೂಡುಬಿದಿರೆ ಶ್ರೀ ದಿಗಂಬರ ಮಠದ ಜಗದ್ಗುರು ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀಜಿ, ಬೆಂಗಳೂರು ಶ್ರೀ ಸಿದ್ಧಿವಿನಾಯಕ ಶರಭೇಶ್ವರ ಪೀಠದ ಮಹರ್ಷಿ ಜಯ ಶ್ರೀನಿವಾಸನ್ ಗುರೂಜಿ, ಮಂಗಳೂರು ಓಂ ಶ್ರೀ ಮಠದ ಮಹಾ ಮಂಡಲೇಶ್ವರ ಸ್ವಾಮಿ ಓಂ ಶ್ರೀವಿದ್ಯಾನಂದ ಸರಸ್ವತಿ ಮಹಾರಾಜ್ ಅವರು ಶಂಕರನ ನೆಲೆಬೀಡಾದ ಶಂಕರಪುರದಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆಯ ಮೂಲಕ ಧಾರ್ಮಿಕ ಜಾಗೃತಿಯ ಭದ್ರತಳಹದಿ ಕಲ್ಪಿಸಿದಂತಾಗಿದೆ. ಪರಂಪರೆ, ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿಯ ಉಳಿವಿಗಾಗಿ ಸನಾತನ ಧರ್ಮ ಸಂರಕ್ಷಣೆಯಾಗಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಕಾರ್ಯಗಳು ಶ್ರೀ ಕ್ಷೇತ್ರದಿಂದಾಗಲಿ ಎಂದರು.
ಶ್ರೀ ಸಾಯಿ ಈಶ್ವರ್ ಗುರೂಜಿ ಮಾತನಾಡಿ, ಇಲ್ಲಿ ಸ್ಥಾಪನೆಗೊಂಡಿರುವ ಕಾಲಭೈರವ ಸ್ವಾಮಿಯು ಭಕ್ತರ ಅಭೀಷ್ಟೆಗಳನ್ನು ಪೂರೈಸಲಿ ಎಂದು ಹಾರೈಸಿದರು.
“ಶ್ರೀ ಕ್ಷೇತ್ರ’ ಘೋಷಣೆ
ನಾನಾ ರಾಜ್ಯಗಳ ಸಾಧು-ಸಂತರು ಸಹಿ ಹಾಕಿ ಶಂಕರಪುರ ದ್ವಾರಕಾಮಾಯಿ ಮಠ ಶ್ರೀಸಾಯಿ ಮುಖ್ಯಪ್ರಾಣ ದೇವಸ್ಥಾನವನ್ನು “ಶ್ರೀ ಕ್ಷೇತ್ರ’ ಎಂದು ಘೋಷಿಸಿದರು.
ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ವಿವಿಧ ಕ್ಷೇತ್ರಗಳ ಪ್ರಮುಖರಾದ ಶ್ರೀ ಮಾತಾಶ್ರೀ ಓಂ ಶ್ರೀ ಶಿವಜ್ಞಾನಮಣಿ ಸರಸ್ವತಿ, ಶ್ರೀ ಪರಮಾತ್ಮಜಿ ಮಹಾರಾಜ್, ಶ್ರೀ ಭದ್ರರಾಜ ಸ್ವಾಮೀಜಿ, ಶ್ರೀ ಸ್ವಾಮಿಪ್ರಭಾಕರಾನಂದ ಸರಸ್ವತಿ, ಶ್ರೀ ಯುಗಧರ್ಮಗುರು ಗರುಡಾನಂದಜೀ ಮಹಾರಾಜ್, ಡಾ| ಅಣ್ಣಾಮಲೈ ಸಿದ್ಧರ್‌ಜೀ ಮಹಾರಾಜ್ ತಮಿಳುನಾಡು, ಧರ್ಮದರ್ಶಿಗಳಾದ ಗಣೇಶ್ ಪಾತ್ರಿ ಉಳ್ಳೂರು, ಸುಕುಮಾರ್ ಮೋಹನ್ ಮುದ್ರಾಡಿ, ಸಚಿನ್ ಶೆಟ್ಟಿ ಕಟಪಾಡಿ, ಪ್ರಶಾಂತ್ ಕರ್ಕೇರ ಪಾತ್ರಿ ಬುಡ್ನಾರು, ಸಾಯಿ ರೂಪೇಶ್ ಕೋಲಾರ, ಸಾಯಿರಾಮ್ ಬೆಂಗಳೂರು, ಸಾಯಿ ಸೂರಜ್ ಶಂಭೂರು ಬಂಟ್ವಾಳ, ದೈವ ನರ್ತಕ ನಾಗೇಶ್ ಪಾಣಾರ ಗುಡ್ಡೆಯಂಗಡಿ, ಶಿಲ್ಪಿ ಆನಂದ ಆಚಾರ್ಯ ಸುರತ್ಕಲ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಜಿಲ್ಲೆ ವಿಹಿಂಪ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಜೋಗಿ ಮಂಗಳೂರು, ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಂಗಳೂರು, ಕಾಪು ಬಿಲ್ಲವ ಸಂಘದ ಅಧ್ಯಕ್ಷ ವಿಕ್ರಮ್ ಕಾಪು, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ ಮುಂಬಯಿ, ಆನಂದ ಸಿ. ಕುಂದರ್ ಕೋಟ, ಪ್ರಶೀಲ್ ಶೆಟ್ಟಿ ಪುಣೆ, ಪ್ರಭಾಕರ ಪೂಜಾರಿ ಶಿವಸಾಗರ್, ಪ್ರೇಮಾನಂದ ಶೆಟ್ಟಿ ದುಬಾೖ, ವಸಂತ್ ಶೆಟ್ಟಿ ಮಂಗಳೂರು, ಎಸ್.ಕೆ. ಸಾಲಿಯಾನ್ ಬೆಳ್ಮಣ್, ಉಮೇಶ್ ಎನ್. ಪುತ್ರನ್ ಎರ್ಮಾಳು, ಶಶಿಧರ್ ಕುಂದರ್ ಮಲ್ಪೆ, ಧರ್ಮ ಸಂಘಟಕ ಸತೀಶ್ ವೇಣೂರು, ನ್ಯಾಯವಾದಿ ಗಣೇಶ್ ಕುಮಾರ್ ಮಟ್ಟು, ಕಾವೂರು ವ್ಯ.ಸೇ.ಸ. ಸಂಘದ ನಿರ್ದೇಶಕ ಸುಮಂತ್ ರಾವ್ ಕಾವೂರು, ಟ್ರಸ್ಟಿ ವಿಶ್ವನಾಥ ಸುವರ್ಣ, ಅಧ್ಯಕ್ಷರಾದ ಸುಧಾಕರ ಶೆಟ್ಟಿ, ಮಾರ್ಗದರ್ಶಕರಾದ ಗೀತಾಂಜಲಿ ಎಂ. ಸುವರ್ಣ, ವೀಣಾ ಎಸ್. ಶೆಟ್ಟಿ, ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ ಉಪಸ್ಥಿತರಿದ್ದರು.