Advertisement

ಕಟಪಾಡಿ: ಟಿಕ್ಕಾ ಅಂಗಡಿಯೊಳಗೆ ನುಗ್ಗಿದ ಕಾರು; ಇಬ್ಬರಿಗೆ ಗಾಯ

10:26 PM Aug 18, 2022 | Team Udayavani |

ಕಟಪಾಡಿ : ರಾಷ್ಟೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ಕಾರೊಂದಕ್ಕೆ ಮತ್ತೊಂದು ಕಾರು ಢಿಕ್ಕಿ ಹೊಡೆದು ಟಿಕ್ಕಾ ಅಂಗಡಿಯೊಳಗೆ ನುಗ್ಗಿದ ಘಟನೆ ಗುರುವಾರ ರಾತ್ರಿಯ ನಡೆದಿದೆ

Advertisement

ಘಟನೆಯಿಂದ ಟಿಕ್ಕಾ ಅಂಗಡಿ ನಡೆಸುತ್ತಿದ್ದಾತ ಮತ್ತು ಓರ್ವ ಗ್ರಾಹಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಪು ಪೊಲೀಸ್ ಠಾಣೆಯ ಕಟಪಾಡಿ ಹೊರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುತ್ತಾರೆ.

ಗ್ರಾಹಕ ಕಟಪಾಡಿ ಪೇಟೆಬಿಟ್ಟುವಿನ ಭುವನೇಶ್ ಗಂಭೀರವಾಗಿ ಗಾಯಗೊಂಡಿದ್ದು, ರಾಯಲ್ ಟಿಕ್ಕಾ ನಡೆಸುತ್ತಿದ್ದ ಉತ್ತರಪ್ರದೇಶ ಮೂಲದ ಮೊಹಮ್ಮದ್ ಸಾಹಿಲ್ ಉಡುಪಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲುಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾರುಗಳು ಜಖಂ ಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next