Advertisement
ಯೋಜನೆಗೆ ಪಶ್ಚಿಮ ಘಟ್ಟ ಪ್ರದೇಶಗಳ ತಪ್ಪಲು ಪ್ರದೇಶಗಳ ಗ್ರಾಮದ ಜನತೆಯ ತೀವ್ರ ವಿರೋಧಗಳಿವೆ. ಈವರೆಗೂ ಹೋರಾಟ, ಒತ್ತಡಗಳಿಂದ ಬೀಸುವ ದೊಣ್ಣೆಯಿಂದ ತಪ್ಪಿಸಿ ಕೊಳ್ಳುತ್ತಲೇ ಬರಲಾಗಿತ್ತು. ಆದರೀಗ ಸಚಿವರ ಹೇಳಿಕೆಗೆ ಮಲೆನಾಡು, ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸರಕಾರ ವರದಿ ಜಾರಿಗೆ ತರಾತುರಿ ಮಾಡುತ್ತಿದೆಯೋ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
Related Articles
ಅಧ್ಯಯನ ವೇಳೆ ನೈಸರ್ಗಿಕ ಭೂ ಪ್ರದೇಶ, ಈ ಭಾಗದಲ್ಲಿ ಬೆಳೆಯುವ ಬೆಳೆಯ ಬಗ್ಗೆ ಸ್ಥಳಿಯರೊಂದಿಗೆ ಮಾಹಿತಿ ಪಡೆಯುವುದು. ಸಾಧಕ-ಬಾಧಕಗಳ ಬಗ್ಗೆ ಪಾರ ದರ್ಶಕ ವರದಿ ಸಿದ್ಧಪಡಿಸಬೇಕಿದೆ. ಸ್ಥಳೀಯ ಸಮಸ್ಯೆಗಳ ಕುರಿತಂತೆ ಅವರಿಗೆ ವಿವರಿಸುವುದು. ಅರಣ್ಯ ದೊಳಗೆ ಜೀವನ ಕಟ್ಟಿಕೊಂಡಿದ್ದಲ್ಲಿ ವರದಿ ಜಾರಿಯಾದರೆ ಮುಂದೇನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳನ್ನು ಅಧ್ಯಯನ ತಂಡದ ಮುಂದಿರಿಸಬೇಕಿದೆ. ಅದಾಗದೆ ಸ್ಯಾಟಲೈಟ್ ಆಧಾರಿತ ವರದಿಯನ್ನೇ ಆಧಾರವಾಗಿರಿಸಿ ಡಿಸೆಂಬರ್ ವೇಳೆಗೆ ಜಾರಿಯ ಆಸಕ್ತಿಯಲ್ಲಿ ರಾಜ್ಯ ಸರಕಾರವಿದೆ ಎನ್ನುವ ಆತಂಕ ಈ ಭಾಗದ ಜನರಲ್ಲಿ ಮನೆ ಮಾಡಿದೆ.
Advertisement
ಏಟಿನ ಮೇಲೆ ಕಾಯ್ದೆ ಗಾಯ !ಒಂದೆಡೆ ಹವಾಮಾನ ವೈಪರಿತ್ಯ, ಇನ್ನೊಂದೆಡೆ ಅಡಿಕೆ, ತೆಂಗು, ಕಾಫಿ, ಕಾಳುಮೆಣಸು, ಏಲಕ್ಕಿ ಸೇರಿದಂತೆ ವಾಣಿಜ್ಯ ಬೆಳೆಗಳಿಗೆ ರೋಗರುಜಿನಗಳು ತಗಲಿ ತತ್ತರಿಸಿ ಹೋಗಿ ಜನಜೀವನ ದುಸ್ತರವಾಗಿದೆ. ಈ ನಡುವೆ ಕಾಯ್ದೆಗಳ ಜಾರಿ ಸದ್ದು ಮಾಡುತ್ತಿವೆ. ಇದು ಈ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿರುವ ಕುಟುಂಬಗಳ ನಿದ್ದೆಗೆಡಿಸಿದೆ. ಹೊಯ್ದಾಟಕ್ಕೆ ಕೊನೆಯಿಲ್ಲವೇ?
ಪ್ರತೀ ಬಾರಿ ಆಡಳಿತದಲ್ಲಿದ್ದ ರಾಜ್ಯ ಸರಕಾರಗಳು ಅಧಿಸೂಚನೆಯನ್ನು ವಿರೋಧಿಸುತ್ತಲೇ ಬಂದಿದೆ. ರಾಷ್ಟ್ರೀಯ ನ್ಯಾಯಧೀಕರಣ ಕೂಡ ಆಗಿಂದಾಗ್ಗೆ ಒತ್ತಡಗಳನ್ನು ತರುತ್ತಲೇ ಇದೆ. ಕರಾವಳಿ, ಮಲೆನಾಡಿನ ಪ್ರತಿನಿಧಿಗಳ ಒತ್ತಡದ ನಡುವೆಯೂ ರಾಜ್ಯದ ಸಂಸದರು ಕೇಂದ್ರಕ್ಕೆ ಸರಿಯಾಗಿ ಮನದಟ್ಟು ಮಾಡಿ ಯೋಜನೆ ಸ್ಥಗಿತಕ್ಕೆ ತಾರ್ಕಿಕ ಅಂತ್ಯ ಕಾಣುವುದಕ್ಕೆ ಸಾಧ್ಯವಾಗಿಲ್ಲ. ಕಾಡಿನಂಚಿನ ಜನರ ಹೊಯ್ದಾಟಕ್ಕೆ ಕೊನೆಯೇ ಇಲ್ಲದಂತಾಗಿದೆ. ರಾಜ್ಯದ 1,576 ಗ್ರಾಮಗಳಲ್ಲಿ ಆತಂಕ
ರಾಜ್ಯದ 1,576 ಗ್ರಾಮಗಳು ಹಾಗೂ ಪಶ್ಚಿಮ ಘಟ್ಟ ಪ್ರದೇಶಕ್ಕೆ ಹಬ್ಬಿಕೊಂಡಿರುವ ಆರು ರಾಜ್ಯಗಳ 4,156 ಗ್ರಾಮಗಳು ಸೂಕ್ಷ್ಮ ಪ್ರದೇಶ ಪಟ್ಟಿಯಲ್ಲಿವೆ. ಉಡುಪಿ ಜಿಲ್ಲೆಯ 37 ಗ್ರಾಮಗಳು ದ.ಕ. ಜಿಲ್ಲೆಯ 46 ಗ್ರಾಮಗಳು ಶಿವಮೊಗ್ಗ ಜಿಲ್ಲೆಯ 570 ಗ್ರಾಮಗಳು, ಚಿಕ್ಕಮಗಳೂರು ಜಿಲ್ಲೆಯ 147 ಗ್ರಾಮಗಳು, ಬೆಳಗಾವಿಯ 63, ಮೈಸೂರಿನ 62 ಚಾಮರಾಜನಗರ 21, ಹಾಸನ ಜಿಲ್ಲೆಯ 35 ಗ್ರಾಮಗಳು ಪಟ್ಟಿಯಲ್ಲಿ ಸೇರಿವೆ. ಗಡಿ ಗುರುತೇ ನಡೆದಿಲ್ಲ
ಪ. ಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ವಲ ಯದ ಗಡಿ ಗುರುತು ಇನ್ನೂ ನಡೆದಿಲ್ಲ. ತಪ್ಪಲು ಪ್ರದೇಶಗಳ ಸ್ಥಳೀಯಾಡಳಿತ, ಜನಪ್ರತಿನಿಧಿ, ನಾಗರಿಕ ರಲ್ಲಿ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಪರಿಸರ ಸೂಕ್ಷ್ಮ ಪ್ರದೇಶದಿಂದ ಜನವಸತಿ ಪ್ರದೇ ಶಕ್ಕೆ 10 ಕಿ. ಮೀ. ವ್ಯಾಪ್ತಿಯಲ್ಲಿ ಮನೆ, ಕೃಷಿ ತೋಟ, ಜಮೀನು ಬಯಲು ಎಂದೆಲ್ಲವಿದ್ದರೂ ಗಡಿಗುರುತು ಇನ್ನೂ ಸ್ಪಷ್ಟವಾಗದೆ ಕಗ್ಗಂಟಾಗಿಯೇ ಉಳಿದಿದೆ. ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡಲಾಗುವುದು ಎಂಬ ಅರಣ್ಯ ಸಚಿವರ ಹೇಳಿಕೆ ತೀವ್ರ ಕಳವಳಕಾರಿ ಸಂಗತಿ. ಇದಕ್ಕೆ ಅವಕಾಶ ನೀಡುವುದಿಲ್ಲ. ಯೋಜನೆಯಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ಜನಜೀವನಕ್ಕೆ ಸಮಸ್ಯೆಯಾಗಿ ಬದುಕು ಹೈರಣಾಗುತ್ತದೆ ಎಂಬುದನ್ನು ಸ್ಪಷ್ಟ ಪಡಿಸುತ್ತಲೇ ಬಂದ ಮೇಲೂ ಈ ಹೇಳಿಕೆ ಆತಂಕ ಸೃಷ್ಟಿಸುವಂತಿದೆ.
-ವಿ. ಸುನಿಲ್‌ಕುಮಾರ್
ಮಾಜಿ ಸಚಿವರು, ಶಾಸಕರು ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ
-ಒಟ್ಟು ವಿಸ್ತೀರ್ಣ-44, 448 ಚ.ಕಿ.ಮೀ
-ಪರಿಸರ ಸೂಕ್ಷ್ಮ- 20, 668 ಚ.ಕಿ.ಮೀ
-ಒಟ್ಟು ಜನವಸತಿ ಪ್ರದೇಶಗಳು
-1,576 ಗ್ರಾಮಗಳು
-ಜಿಲ್ಲೆಗಳು -ಉತ್ತರ ಕನ್ನಡ, ದ.ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ – ಬಾಲಕೃಷ್ಣ ಭೀಮಗುಳಿ