Advertisement

ರಾಜ್ಯ ಚಲನಚಿತ್ರ ಅಕಾಡೆಮಿಗೆ ಕಶ್ಯಪ್‌,ಕಿಯೋನಿಕ್ಸ್‌ಗೆ ಹರಿಕೃಷ್ಣ ಅಧ್ಯಕ್ಷರಾಗಿ ನೇಮಕ

12:38 AM Nov 06, 2022 | Team Udayavani |

ಬೆಂಗಳೂರು/ಬಂಟ್ವಾಳ: ರಾಜ್ಯ ಸರಕಾರವು ಅಕಾಡೆಮಿ ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ.

Advertisement

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಶೋಕ್‌ ಕಶ್ಯಪ್‌ ಮತ್ತು ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯ ಮಿತ (ಕಿಯೋನಿಕ್ಸ್‌) ಅಧ್ಯಕ್ಷರಾಗಿ ಹರಿ ಕೃಷ್ಣ ಬಂಟ್ವಾಳ ಅವರನ್ನು ನೇಮಿಸಿದೆ.

ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಅವಧಿಯು ಮೂರು ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಅನ್ವಯವಾಗಲಿದೆ ಎಂದು ತಿಳಿಸ ಲಾಗಿದೆ. ಪುನರ್‌ ನೇಮಕವಾಗಿರುವ ಕಿಯೋನಿಕ್ಸ್‌ ಅಧ್ಯಕ್ಷರ ಅವಧಿ ತತ್‌ಕ್ಷಣದಿಂದ ಮುಂದಿನ ಆದೇಶದವರೆಗೆ ಎಂದು ತಿಳಿಸಲಾಗಿದೆ.

ಇತ್ತೀಚೆಗೆ ಅವಧಿ ಪೂರ್ಣಗೊಂಡಿದ್ದ ಅಕಾಡೆಮಿ, ನಿಗಮ -ಮಂಡಳಿ ಅಧ್ಯಕ್ಷರು ರಾಜೀನಾಮೆ ನೀಡಿದ್ದರು. ತೆರವಾಗಿರುವ ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರವೇ ಇತರ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕವಾಗ ಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next