Advertisement
ಮಾರ್ಷಲ್‌ಗಳು ಶಾಸಕರನ್ನು ಹೊರಕ್ಕೆ ಹೊತ್ತೂಯ್ಯುತ್ತಿದ್ದಂತೆ, ಅದನ್ನು ಖಂಡಿಸಿ ಇತರ 11 ಶಾಸಕರು ಸಭಾತ್ಯಾಗ ಮಾಡಿದರು. ಶುಕ್ರವಾರ ಸದನ ಸಮಾವೇಶ ಗೊಳ್ಳುತ್ತಿದ್ದಂತೆಯೇ ವಿಪಕ್ಷ ಶಾಸಕರು ಸದನದ ಮುಂಗ ಟ್ಟೆಗೆ ಬಂದು “ಪಾಕಿಸ್ಥಾನ ಅಜೆಂಡಾಗೆ ಅವಕಾಶವಿಲ್ಲ’ ಎಂದು ಘೋಷಣೆ ಕೂಗಿದರು. ಸದನದಲ್ಲಿ ಪಿಡಿಪಿ ಶಾಸಕರು 370ನೇ ವಿಧಿ ಬೆಂಬಲಿಸಿ ಬ್ಯಾನರ್ ಪ್ರದರ್ಶಿ ಸಿದರು. ಇದರಿಂದ ಸಿಟ್ಟಾದ ಬಿಜೆಪಿ ಶಾಸಕರು ಪಿಡಿಪಿ ಶಾಸಕರ ಜತೆಗೆ ಗುದ್ದಾಟ ನಡೆಸಿದರು. ಈ ವೇಳೆ ವಿಪಕ್ಷ ಶಾಸಕರು “ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಿದರು. ಪರಸ್ಪರ ಜಗಳವಾಡುತ್ತಾ, ಟೇಬಲ್ ಮೇಲೆ ನೆಗೆದಾಡುತ್ತಾ ಜನಪ್ರತಿನಿಧಿಗಳು ಕೋಲಾಹಲ ಎಬ್ಬಿಸಿ ದರು. ಸ್ಪೀಕರ್ ಮಾರ್ಷಲ್‌ಗಳನ್ನು ಕರೆಸಿ ಬಿಜೆಪಿ ಶಾಸಕರನ್ನು ಎತ್ತಿ ಹೊರಹಾಕಲು ಆದೇಶ ನೀಡಿದರು.
ರದ್ದಾಗಿರುವ 370ನೇ ವಿಧಿಯನ್ನು ಜಮ್ಮು ಕಾಶ್ಮೀರದಲ್ಲಿ ಮತ್ತೆ ಜಾರಿಗೊಳಿಸಲು ಪ್ರಪಂಚದ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಮಾತ ನಾಡಿದ ಮೋದಿ ಕಾಂಗ್ರೆಸ್, ಎನ್‌ಸಿ ಕಾಶ್ಮೀರದ ವಿರುದ್ಧ ಸಂಚು ಆರಂಭಿಸಿವೆ. ಸಂವಿಧಾನವನ್ನು ಕಿತ್ತುಹಾಕಲು ಬಯಸುತ್ತಿವೆ ಎಂದಿದ್ದಾರೆ.