Advertisement

ಕೋಲಾರದಲ್ಲಿ ಕಾಶ್ಮೀರ ಮೇಕೆ ಸಾಕಾಣಿಕೆ

04:35 PM Feb 08, 2023 | Team Udayavani |

ಕೋಲಾರ: ಜಿಲ್ಲೆಯಲ್ಲಿ ಉದ್ದನೆ ಕಿವಿಗಳ ಕಾಶ್ಮೀರ ಮೇಕೆಗಳ ಸಾಕಾಣಿಯೇ ಅಪರೂಪವೆನಿಸಿರುವಾಗಕಾಶ್ಮೀರ ಮೇಕೆಗಳನ್ನು ಹದಿನೈದು ವರ್ಷಗಳಿಂದ ಸಾಕಾಣಿಕೆ ಮಾಡಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿರುವ ಸಾಧನೆಯನ್ನು ಕೋಲಾರದ ಮುರಳಿ ಕುಟುಂಬ ಮಾಡಿದೆ.

Advertisement

ಕಾಶ್ಮೀರಿ ಮೇಕೆ ಸಾಕಾಣಿಕೆ ಉದ್ದಿಮೆ: ಕೇವಲಬಹುಮಾನ ಗೆದ್ದಿರುವ ಸಾಧನೆ ಮಾತ್ರವಲ್ಲದೆ ದೇಶದವಿವಿಧ ಭಾಗಗಳಿಗೆ ಅತ್ಯುತ್ತಮ ಕಾಶ್ಮೀರಿ ತಳಿಯಮೇಕೆಗಳ ಮಾರಾಟ ಮಾಡುವುದನ್ನು ಮರಳಿಕುಟುಂಬ ಉದ್ಯಮವಾಗಿಸಿಕೊಂಡು ಲಕ್ಷಾಂತರ ರೂ. ವಹಿವಾಟು ನಡೆಸುತ್ತಿದೆ.

ಕೋಲಾರ ಹೊರವಲಯದಲ್ಲಿರುವ ತಮ್ಮ ತೋಟವನ್ನು ಸಾವಯವ ಪದ್ಧತಿಯಲ್ಲಿ ಸರ್ವಋತು ಹಣ್ಣುಗಳ ತೋಟವಾಗಿ ಪರಿವರ್ತಿಸಿಗಮನ ಸೆಳೆದಿರುವ ಕಠಾರಿಪಾಳ್ಯದ ಮುರಳಿ ಮತ್ತವರ ಕುಟುಂಬವು ಹದಿನೈದು ವರ್ಷಗಳಿಂದಲೂ ಇದೇ ತೋಟದಲ್ಲಿ ಕಾಶ್ಮೀರಮೇಕೆಗಳನ್ನು ಸಾಕಾಣಿಕೆ ಮಾಡುವಉದ್ದಿಮೆಯನ್ನು ನಡೆಸುತ್ತಿದ್ದೇವೆ ಎನ್ನುತ್ತಾರೆ.

60 ಮೇಕೆಗಳಿಗೆ ಆಶ್ರಯ: ಆರಂಭದಲ್ಲಿ ಒಂದೆರೆಡುಮೇಕೆ ತಂದು ಸಾಕಲು ಆರಂಭಿಸಿದ್ದು, ಇದೀಗ 60 ಮೇಕೆಗಳ ಹಿಂಡಾಗಿ ಪರಿವರ್ತನೆಯಾಗಿದೆ. ಕಾಶ್ಮೀರ ಮೇಕೆಗಳನ್ನು ಸಾಕುವುದು, ಮಾರಾಟ ಮಾಡುವುದು,ತಳಿ ಅಭಿವೃದ್ಧಿಪಡಿಸುವುದು, ಮೇಕೆಗಳ ಮಾಹಿತಿಗಾಗಿಯೇ ಯೂಟ್ಯೂಬ್‌ ಚಾನೆಲ್‌ ಆರಂಭಿಸಿರುವುದು ಸೇರಿದಂತೆ ಇವರ ಕಾಶ್ಮೀರಿ ಮೇಕೆಗಳ ಸಾಕಾಣಿಕೆ ಉದ್ದಿಮೆಗೆ ದೇಶವ್ಯಾಪಿ ಪ್ರಚಾರ ಸಿಗುವಂತಾಗಿದೆ.

ದಕ್ಷಿಣ ಭಾರತದ ವಿವಿಧ ರಾಜ್ಯಗಳ ಹೈದರಾಬಾದ್‌ಮತ್ತಿತರರ ಭಾಗಗಳಿಂದ ಕಾಶ್ಮೀರ ಮೇಕೆಗಳನ್ನುಖರೀದಿಸಲು ಜನ ಕೋಲಾರಕ್ಕೆ ಆಗಮಿಸಲು ಮುರಳಿಮೇಕೆ ಸಾಕಾಣಿಕೆ ಕಾರಣವಾಗಿದೆ. ಕೋಲಾರಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಿಂದ ಮೇಕೆ ಸಾಕಾಣಿಕೆಗೆ 10 ಲಕ್ಷ ಸಾಲ ಪಡೆದು ಉದ್ದಿಮೆಯನ್ನು ವಿಸ್ತರಿಸಲಾಗಿದೆ.

Advertisement

ಲಕ್ಷಾಂತರ ರೂ. ಆದಾಯ: ಪ್ರತಿ ಗಂಡು ಮೇಕೆಯೂ 200 ಕೆ.ಜಿ.ವರೆವಿಗೂ ತೂಗುವಷ್ಟು ಬೆಳೆದರೆ, ಹೆಣ್ಣು ಮೇಕೆ 150 ಕೆ.ಜಿ. ತೂಕಕ್ಕೇರಲಿದೆ. ಈ ಮೇಕೆಗಳುಸುಮಾರು 20 ವರ್ಷಗಳ ಆಯಸ್ಸನ್ನು ಹೊಂದಿವೆ. ತಳಿ ಅಭಿವೃದ್ಧಿಯಲ್ಲಿ ಕಾಶ್ಮೀರ ತಂಪು ಪ್ರದೇಶದಿಂದಕೋಲಾರದ ಬಿಸಿ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗಿದೆ. ಮರಿಮೇಕೆ ಕನಿಷ್ಠ 1 ಲಕ್ಷದಿಂದ ಹಿಡಿದು ಸದೃಢವಾಗಿ ಬೆಳೆದು ನಿಂತ ಮೇಕೆ 15 ಲಕ್ಷ ರೂವರೆವಿಗೂ ಮಾರಾಟವಾಗುತ್ತಿದೆ. ತಳಿ ಅಭಿವೃದ್ಧಿಗೆ 30 ಸಾವಿರ ಆದಾಯ ಸಿಗುತ್ತಿದೆ. ಕೇವಲ ಸಾಕಾಣೆ, ಮಾರಾಟ, ತಳಿ ಅಭಿವೃದ್ಧಿ ಮಾತ್ರವಲ್ಲದೆ ಕಾಶ್ಮೀರಿ ಮೇಕೆಗಳ ಸ್ಪರ್ಧೆಯಲ್ಲೂ ಮುರಳಿಯವರ ಮೇಕೆಗಳು ಪಾಲ್ಗೊಂಡು ಬಹುಮಾನಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಮೇಕೆಗಳ ಸ್ಪರ್ಧೆ:” ಬೆಂಗಳೂರು ಉದ್ದ ಕಿವಿ ಮೇಕೆಗಳ ಸಂಸ್ಥೆಯು ಪ್ರತಿ ವರ್ಷ ಕಾಶ್ಮೀರಿ ತಳಿಮೇಕೆಗಳ ಸ್ಪರ್ಧೆಯನ್ನು ಏರ್ಪಡಿಸುತ್ತದೆ. ಈವರ್ಷ ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಹೆಬ್ಬಾಳದಲ್ಲಿ ಆಯೋಜಿಸಲಾಗಿದ್ದ ಕಾಶ್ಮೀರಿ ಮೇಕೆಗಳ ಸ್ಪರ್ಧೆಯಲ್ಲಿ ಕೋಲಾರದ ಮುರಳಿಯವರ ಕಾಶ್ಮೀರಿ ಹೆಣ್ಣು ಮೇಕೆ ರಾಷ್ಟ್ರೀಯ ಹೆಣ್ಣು ಮೇಕೆ ವಿಭಾಗದಲ್ಲಿ ಎರಡನೇ ಬಹುಮಾನ ಪಡೆಯಿತು. ಈ ಸ್ಪರ್ಧೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಮೇಕೆಗಳು ಭಾಗವಹಿಸಿದ್ದವು. ಕೆಲ ದಿನಗಳ ಹಿಂದೆ ತಮಿಳುನಾಡಿನ ಮಧುರೈನಲ್ಲಿ ನಡೆದ ರಾಜ್ಯಮಟ್ಟದ ಕಾಶ್ಮೀರಿ ಮೇಕೆ ಸ್ಪರ್ಧೆಯಲ್ಲಿಯೂ ಮುರಳಿಯವರ ಮೇಕೆ ದ್ವಿತೀಯ ಬಹುಮಾನ ಪಡೆಯಿತು. ಕಳೆದ ವರ್ಷ ಬೆಂಗಳೂರಿನ ಶಿವಾಜಿನಗರದಲ್ಲಿ ಜರುಗಿದ ಮೇಕೆಗಳ ಸ್ಪರ್ಧೆಯಲ್ಲೂ ಮುರಳಿಯವರ ಮೇಕೆ ಮೊದಲ ಬಹುಮಾನ ಗೆದ್ದುಕೊಂಡಿತ್ತು.

ಇತರರಿಗೆ ಪ್ರೇರಣೆ: ಕೋಲಾರ ಜಿಲ್ಲೆಯ ರೈತಾಪಿ ವರ್ಗ ಸದಾ ಹೊಸತನ್ನು ಹುಡುಕುತ್ತಲೇ ಇರುತ್ತಾರೆ. ಡ್ರ್ಯಾಗನ್‌ ಫ್ರೂಟ್‌, ಬಟರ್‌ ಫ್ರೂಟ್‌ಬೇಸಾಯವೂ ಇಲ್ಲಿ ನಡೆದಿದೆ. ಯುವ ಪೀಳಿಗೆಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುರಿ,ಕೋಳಿಮತ್ತು ಹಂದಿ ಸಾಕಾಣಿಕೆ ಉದ್ದಿಮೆಯಲ್ಲಿಸಫ‌ಲರಾಗಿದ್ದಾರೆ. ಇದೇ ಹಾದಿಯಲ್ಲಿ ಮುರಳಿ ಮತ್ತವರ ಪರಿವಾರ ಕಾಶ್ಮೀರಿ ಮೇಕೆಗಳ ಸಾಕಾಣಿಕೆಮಾಡಿ ಇಡೀ ದೇಶವೇ ತಿರುಗಿ ನೋಡುವಂತೆಮಾಡಿದ್ದು, ಆರ್ಥಿಕ ಗಳಿಕೆಯನ್ನೂ ಮಾಡಿದ್ದಾರೆ.

15 ವರ್ಷಗಳಿಂದಲೂ ಕಾಶ್ಮೀರಿ ಮೇಕೆಗಳನ್ನು ಪ್ರಾಯೋಗಿಕವಾಗಿ ಸಾಕಾಣಿಕೆ ಆರಂಭಿಸಿ ಈಗ ಉದ್ದಿಮೆ ಮಾದರಿ ಅಭಿವೃದ್ಧಿಪಡಿಸಿರುವುದು. ಹಾಗೂ ತಾವು ಸಾಕಿದ ಮೇಕೆಗಳಿಗೆ ಸ್ಪರ್ಧೆಗಳಲ್ಲಿ ಬಹುಮಾನ ಸಿಗುತ್ತಿರುವುದಕ್ಕೆ ಸಂತಸದಾಯಕವಾಗಿದೆ. ಹೊಸಪ್ರಯೋಗಗಳಿಗೆ ತೆರೆದುಕೊಳ್ಳಲು ಸಹಾಯಕವಾಗಿದೆ. -ಮುರಳಿ, ಕಾಶ್ಮೀರಿ ತಳಿ ಮೇಕೆ ಸಾಕಾಣಿಕೆದಾರ, ಕಠಾರಿಪಾಳ್ಯ, ಕೋಲಾರ.

-ಕೆ.ಎಸ್‌.ಗಣೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next