Advertisement

ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

07:57 PM Dec 01, 2021 | Team Udayavani |

ಪ್ರಯಾಗ್‌ರಾಜ್‌:  ಕಾಶಿ ವಿಶ್ವನಾಥನ “ಸುಗಮ ದರ್ಶನ’ ವ್ಯವಸ್ಥೆಯನ್ನು ವಿರೋಧಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಈ ಅರ್ಜಿ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ.

Advertisement

ಕಾಶಿ ವಿಶ್ವನಾಥ ದೇವಸ್ಥಾನ ಮಂಡಳಿ, ಜನರು ಸರತಿ ಸಾಲಲ್ಲಿ ನಿಲ್ಲುವುದನ್ನು ತಪ್ಪಿಸಲು, ಆರಾಮಾಗಿ ದರ್ಶನ ಮಾಡಲು ಸುಗಮ ದರ್ಶನ ಎಂಬ ವ್ಯವಸ್ಥೆಯನ್ನು ರೂಪಿಸಿತ್ತು. ಈ ವ್ಯವಸ್ಥೆ ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ ಎಂದು ಗಜೇಂದ್ರ ಯಾದವ್‌ ಎಂಬ ವಕೀಲರು ಆರೋಪಿಸಿ, ನ್ಯಾಯಾಲಯದ ಮೊರೆ ಹೋಗಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, “”ದಿವ್ಯಾಂಗರಿಗೆ, ಇನ್ನಿತರ ದೈಹಿಕ ಸಮಸ್ಯೆಗಳನ್ನು ಹೊಂದಿರುವವರಿಗೆ ಈ ಸುಗಮ ದರ್ಶನ ಹೆಚ್ಚು ಪ್ರಯೋಜನಕಾರಿ. ಅಂಥವರಿಗೆ ಪೂರಕವಾಗಿ ಈ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಈ ವಿಶೇಷ ವ್ಯವಸ್ಥೆಯಿಂದ ಇತರೆ ಜನರು ಎಂದಿನಂತೆ ಸರತಿಯಲ್ಲಿ ಬಂದು ತಮ್ಮ ಪೂಜೆ ಸಲ್ಲಿಸಲು ಮಂಡಳಿ ಅಡ್ಡಿ ಮಾಡಿಲ್ಲ” ಎಂದು ಹೇಳುವ ಮೂಲಕ ವಕೀಲರ ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ : ಕೊಲೆಗೆ ಸಂಚು; ಗೂಂಡಾಗಿರಿ ಮಾಡುವವರನ್ನ ಸರ್ಕಾರ ಬಿಡುವುದಿಲ್ಲ: ಆರ್. ಅಶೋಕ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next