Advertisement
ಶನಿವಾರ 19 ಮಂದಿ ಡಿಸಾcರ್ಜ್ ಆಗಿದ್ದಾರೆ. ಕಾಸರಗೋಡು – 9, ಪಾಲಾ^ಟ್-4, ತಿರುವನಂತಪುರ-3, ಇಡುಕ್ಕಿ-2, ತೃಶ್ಶೂರಲ್ಲಿ ಒಬ್ಬರು ಸೋಂಕುಮುಕ್ತರಾಗಿದ್ದಾರೆ. ಕೋವಿಡ್ 19 ರೋಗದಿಂದ ಮುಕ್ತರಾದ ಕಾಸರಗೋಡಿನ ಮಹಿಳೆಯೊಬ್ಬರು ಶನಿವಾರ ಕಣ್ಣೂರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ -ಮಗು ಆರೋಗ್ಯವಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 373 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದ್ದು, ಸದ್ಯ 228 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈತನಕ ಇಬ್ಬರು ಮೃತಪಟ್ಟಿದ್ದು, 143 ಮಂದಿ ಗುಣಮುಖರಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಕೂಡ್ಲು ನಿವಾಸಿಗಳಾದ 10 ಮತ್ತು 8 ವರ್ಷಗಳ ಬಾಲಕಿಯರಿಗೆ ಶನಿವಾರ ಕೋವಿಡ್ 19 ಸೋಂಕು ಖಚಿತಗೊಂಡಿದೆ. ಇವರ ತಾಯಿ ಸೋಂಕುಪೀಡಿತರಾಗಿ ಕಾಂಞಂಗಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಕ್ಕಳೂ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದರು.
Related Articles
ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 39 ಕೇಸುಗಳನ್ನು ದಾಖಲಿಸಲಾಗಿದೆ. 79 ಮಂದಿಯನ್ನು ಬಂಧಿಸಲಾಗಿದೆ. 19 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ಟ್ರಿಪಲ್ ಲಾಕ್ಪೊಲೀಸರು ಕಾಸರಗೋಡು ನಗರಸಭೆ ಹಾಗೂ 7 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಟ್ರಿಪಲ್ ಲಾಕ್‌ಡೌನ್ ಜಾರಿಗೊಳಿಸಿದ್ದಾರೆ. ಕ್ಲಸ್ಟರ್ ಲಾಕ್‌ಡೌನ್ ಜತೆಗೆ ತಲಾ 5 ಮನೆಗಳನ್ನು ಕೇಂದ್ರೀಕರಿಸಿ, ಪೊಲೀಸರು ಬೈಕ್‌ಗಳಲ್ಲಿ ತಪಾಸಣೆ ಮಾಡುತ್ತಿದ್ದಾರೆ. ತಳಂಗರೆ, ಕಳನಾಡು, ಚೂರಿ, ನೆಲ್ಲಿಕುಂಜೆ, ಅಲಾಮಿಪಳ್ಳಿ ಪ್ರದೇಶಗಳಲ್ಲಿ ಈ ನಿಯಂತ್ರಣ ಗಳಿವೆ. ಶನಿವಾರ ತಳಂಗರೆಯಲ್ಲಿ ಐ.ಜಿ. ವಿಜಯ್ ಸಖಾರೆ ಟ್ರಿಪಲ್ ಲಾಕ್ ಆದೇಶಕ್ಕೆ ಚಾಲನೆ ನೀಡಿದರು. ಉತ್ತರ ವಲಯ ಐ.ಜಿ. ಅಶೋಕ್ ಯಾದವ್, ಎಸ್.ಪಿ.ಗಳಾದ ಪಿ.ಎಸ್. ಸಾಬು, ಡಿ. ಶಿಲ್ಪಾ ನೇತೃತ್ವ ವಹಿಸಿದ್ದರು. ಡ್ರೋನ್ ನಿಗಾ ಪ್ರಬಲಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.