Advertisement

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಭೂಸ್ವಾಧೀನ ಚುರುಕು; ಡಿ.ಸಿ. ನಿರ್ದೇಶ

09:49 AM Feb 21, 2020 | Sriram |

ಕಾಸರಗೋಡು: ಈಗಾಗಲೇ ವಿಳಂಬವಾಗಿರುವ ರಾಷ್ಟ್ರೀಯ ಹೆದ್ದಾರಿ ಯನ್ನು ಚತುಷ್ಪಥಗೊಳಿಸುವ ಯೋಜ ನೆಗೆ ಅಗತ್ಯದ ಭೂಸ್ವಾಧೀನ ಚುರುಕು ಗೊಳಿಸಲು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ನಿರ್ದೇಶ ನೀಡಿದ್ದಾರೆ. ಭೂಸ್ವಾ ಧೀನ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ತಿಗೊಳಿ ಸುವಂತೆ ನಿರ್ದೇಶದಲ್ಲಿ ತಿಳಿಸಲಾಗಿದೆ.

Advertisement

ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಸುಮಾರು ಒಂದು ಸಾವಿರದಷ್ಟು ಮಂದಿಯ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಬಾಕಿಯಿದೆ. ಸರಕಾರ ತೀರ್ಮಾನಿಸಿದ ನಷ್ಟ ಪರಿಹಾರವನ್ನು ನಿರ್ಣ ಯಿಸುವ ಕೆಲಸ ಇನ್ನೂ ಅಂತಿಮ ಗೊಂಡಿಲ್ಲ. ಹೊಸದುರ್ಗ ತಾಲೂಕಿನಲ್ಲಿ ಭೂಸ್ವಾಧೀನಕ್ಕೆ ಇನ್ನು ಕೇವಲ ಶೇ. 5ರಷ್ಟು ಬಾಕಿಯಿದೆ. ಆದರೆ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಶೇ.40 ಕ್ಕೂ ಹೆಚ್ಚು ಭೂಸ್ವಾಧೀನ ಬಾಕಿಯಿದೆ. ಚತುಷ್ಪಥ ರಸ್ತೆ ಅಭಿವೃದ್ಧಿಗೆ ಸ್ಥಳ ಬಿಟ್ಟುಕೊಟ್ಟ ಎಲ್ಲರಿಗೂ ನಷ್ಟ ಪರಿಹಾರ ಶೀಘ್ರವೇ ನೀಡುವಂತೆ ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ಬಾಬು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ.ತಿರುವನಂತಪುರದಲ್ಲಿ ಸಚಿವ ಜಿ.ಸುಧಾಕರನ್‌ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ಅಭಿವೃದ್ಧಿ ಗೊಳಿಸುವ ಕಾಮಗಾರಿ ಆರಂಭಿಸಲು ಅಗತ್ಯದ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ತಿಗೊಳಿಸಬೇಕೆಂದು ಆಗ್ರಹಿಸಲಾಗಿದೆ.

ನೌಕರರ ಕೊರತೆ
ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಅಗತ್ಯದ ನೌಕರರ ಕೊರತೆ ಯಿಂದಾಗಿ ನಷ್ಟ ಪರಿಹಾರ ನಿರ್ಣಯಿಸುವ ಸಹಿತ ವಿವಿಧ ಪ್ರಕ್ರಿಯೆಗಳು ವಿಳಂಬವಾಗಲು ಪ್ರಮುಖ ಕಾರಣವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ. ಈ ಎರಡು ತಾಲೂಕುಗಳಲ್ಲಿ ನೇಮಕಾತಿ ಪಡೆದುಕೊಂಡ ಬಳಿಕ ಶೀಘ್ರವೇ ಇಲ್ಲಿಂದ ವರ್ಗಾವಣೆ ಪಡೆದು ತೆರಳುತ್ತಿರುವುದರಿಂದ ಅಗತ್ಯದ ನೌಕರರ ಸಮಸ್ಯೆ ಎದುರಾಗುತ್ತಿದೆ. ಈ ಕಾರಣದಿಂದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಅಭಿವೃದ್ಧಿಗೊಳಿಸಲು ಕಾಮಗಾರಿ ಆರಂಭಿಸಲು ವಿಳಂಬವಾಗುತ್ತಲೇ ಇದೆ. ದಿನಗಳ ಹಿಂದೆ ಇಬ್ಬರು ಕಂದಾಯ ಇನ್‌ಸ್ಪೆಕ್ಟರ್‌ಗಳನ್ನು ಹಾಗೂ ಮೂವರು ಕ್ಲರ್ಕ್‌ಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದರೂ ಆ ಬಳಿಕ ಈ ನಿರ್ಣಯವನ್ನು ಬದಲಾಯಿಸಿದರು. ನೌಕರರ ಭಡ್ತಿ ಮೊದಲಾದವುಗಳ ಹಿನ್ನೆಲೆಯಲ್ಲಿ ಈ ತೀರ್ಮಾನವನ್ನು ಬದಲಾಯಿಸಲು ಪ್ರಮುಖ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಟೆಂಡರ್‌ ಪ್ರಕ್ರಿಯೆ ಪೂರ್ತಿಯಾಗಲಿರುವಂತೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣವಾಗದಿರುವುದರಿಂದ ಕಾಮಗಾರಿ ಆರಂಭಿಸಲು ಇನ್ನೂ ವಿಳಂಬವಾಗಬಹುದೆಂದು ಆತಂಕ ವ್ಯಕ್ತವಾಗಿದೆ.

ಜಿಲ್ಲೆಗೆ ಹಿರಿಯ ಅಧಿಕಾರಿಗಳ ತಂಡ ಭೇಟಿ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಗೊಳಿಸುವ ಅಭಿವೃದ್ಧಿಗಾಗಿ ಅಗತ್ಯ ಭೂಸ್ವಾ ಧೀನ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ತಿ ಗೊಳಿಸುವ ಸಂಬಂಧವಾಗಿ ಅಡೀಶನಲ್‌ ಸೆಕ್ರೆಟರಿ ಕೆ. ಬಿಜು, ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಪ್ರೊಜೆಕ್ಟ್ ಡೈರೆಕ್ಟರ್‌ ನಿರ್ಮಲ್‌ ಎಂ. ಸಾಡೆ ಮೊದಲಾದ ಅಧಿಕಾರಿಗಳು ಮುಂದಿನ ವಾರ ಕಾಸರಗೋಡು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಕಾಸರಗೋಡು, ಅಡ್ಕತ್ತಬೈಲು, ಕಾಂಞಂ ಗಾಡ್‌ ವಿಲೇಜ್‌ಗಳಲ್ಲಿ ಭೂಸ್ವಾಧೀನ ಮಾಡಿಕೊಂಡಿರುವ ಸ್ಥಳಕ್ಕೆ ನಷ್ಟಪರಿಹಾರ ಮೊತ್ತವನ್ನು ಮಂಜೂರು ಮಾಡಿದ್ದರೂ ಆ ಬಳಿಕ ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಈ ಮೊತ್ತವನ್ನು ತಡೆ ಹಿಡಿದಿರುವುದರಿಂದ ನಷ್ಟಪರಿಹಾರ ನೀಡಿಕೆ ಬಗ್ಗೆ ತರ್ಕದಲ್ಲಿದೆ.

Advertisement

ಆರ್ಬಿಟ್ರೇಷನ್‌ನಲ್ಲಿ ಜಿಲ್ಲಾಧಿಕಾರಿಗಳ ತೀರ್ಪು ಬಳಿಕ ಹಣವನ್ನು ಭೂಮಾಲಕರಿಗೆ ನೀಡಿದರೆ ಸಾಕೆಂಬ ರಾಷ್ಟ್ರೀಯ ಹೆದ್ದಾರಿ ಅಥೋರಿಟಿ ಪ್ರೊಜೆಕ್ಟ್ ಡೈರೆಕ್ಟರ್‌ಗಳ ನಿಲುವು ಸರಿಯಲ್ಲ ಎಂಬುದು ಕಂದಾಯ ಅಧಿಕಾರಿಗಳ ಅಂಬೋಣ. ಈ ಬಗೆಗಿನ ತರ್ಕವನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿ ಅಂತಿಮ ಪರಿಹಾರ ಕಂಡುಕೊಳ್ಳಬಹುದೆಂಬುದು ನಿರೀಕ್ಷೆಯಾಗಿದೆ.

ಸೊತ್ತಿನ ದಾಖಲೆಪತ್ರಗಳಲ್ಲಿನ ದರಕ್ಕಿಂತ ಶೇ.200 ತನಕ ಹೆಚ್ಚು ದರ ನಿಗದಿಪಡಿಸಿ ಭೂಸ್ವಾಧೀನ ವಿಭಾಗ ತೀರ್ಮಾನಿಸಿದೆ ಎಂದು ಆರೋಪಿಸಿ ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಅಧಿಕಾರಿಗಳು ಮಂಜೂರು ಮಾಡಿದ ಹಣವನ್ನು ಆ ಬಳಿಕ ತಡೆಹಿಡಿದಿಡಲು ಪ್ರಮುಖ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next