ಬದಿಯಡ್ಕ : ಕಾರಣಿಕ ಪ್ರಸಿದ್ದವಾದ ಬೆಳ್ಳಿಪ್ಪಾಡಿ ಉಳ್ಳಾಕುಳು-ದೂಮಾವತಿ ದೈವಗಳ ಹಾಗೂ ಉಪ ದೈವಗಳ ನೇಮೋತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನದ ಉತ್ಸವವು ಶ್ರೀ ವೆಂಕಟ್ರಮಣ ದೇವರ ಬಂಟ ಕೆಂಚಿರಾಯ ಸ್ವಾಮಿಯ ಪೂಜೆಯೊಂದಿಗೆ ಸಂಪನ್ನಗೊಂಡಿತು.
ಬೆಳ್ಳಿಪ್ಪಾಡಿ ನಡುಬೆಟ್ಟು ಸ್ಥಾನದಿಂದ ಭಂಡಾರವನ್ನು ತೆಗೆದು ಮಂಜಪಿಳ ರಾಜಮಾಡದಲ್ಲಿ ಭಂಡಾರವನ್ನು ಏರಿಸಿ ಎರಡು ದಿನದ ನೇಮೋತ್ಸವವು ನಡೆದು ಬಂತು. ಬಂಟ ದೆ„ವ-ಮಾಯಸ್ವರೂಪ ಕುದುರೆ ಕೋಲವನ್ನು ಬಯಲು ಸವಾರಿಯೊಂದಿಗೆ ಕಾಣಿಯೂರು ಸ್ಥಾನದಲ್ಲಿ ದರ್ಶನ ಮಾಡಿಸಿ ಒಂದು ಕುಂದ ನಲ್ವತ್ತು ದೆ„ವಗಳನ್ನು ಆರಾಧಿಲಾಯಿತು.
ಆಡಳಿತದಾರರಾದ ನಾಲ್ಕು ವರ್ಗ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಪವಿತ್ರ ಪಾಣಿ ಬೆಳ್ಳಿಪ್ಪಾಡಿ ರಾಮಕೃಷ್ಣ ಶಗ್ರಿತ್ತಾಯ, ಬೆಳ್ಳಿಪ್ಪಾಡಿ ಸದಾಶಿವ ರೈ, ಬೆಳ್ಳಿಪ್ಪಾಡಿ ಹಳೆ ಮನೆ ನಾಗಪ್ಪ ಗೌಡ, ಬಾಳೆಕೋಡಿ ತೇಜಕುಮಾರ್, ಬೆಳ್ಳಿಪ್ಪಾಡಿ ಸದಾನಂದ ರೈ, ಬೆಳ್ಳಿಪ್ಪಾಡಿ ಹಳೆಮನೆ ಜತ್ತಪ್ಪ ಗೌಡ, ಬೆಳ್ಳಿಪ್ಪಾಡಿ ಸತೀಶ ರೈ, ಬಿ.ಚಂದ್ರಶೇಖರ ಗೌಡ ತೋಟ, ಬಿ.ಬಾಲಕೃಷ್ಣ ಗೌಡ ದೇಲಂಪಾಡಿ, ಬಿ.ಯಚ್.ಕೇಶವ ಗೌಡ ಹೊಸಮನೆ, ಬಿ.ಯಚ್.ಹುಕ್ರಪ್ಪ ಮಾಸ್ತರ್ ಹಳೆ ಮನೆ, ಕೊಳಂಬೆ ಬಾಬು ಗೌಡ, ಬಿ.ಹೆಚ್.ಬಾಲಚಂದ್ರ ಗೌಡ, ಧನಂಜಯ ಗೌಡ ಪಂಜಿಕಲ್ಲು, ಪದ್ಮನಾಭ ಗೌಡ ಬೆಳ್ಳಿಪ್ಪಾಡಿ, ಬಿ.ಜಯರಾಮ ಪಾಟಾಳಿ ದೆ„ವಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ನಿರ್ವಹಿಸಿದರು. ಬೆಳ್ಳಿಪ್ಪಾಡಿ ಸದಾಶಿವ ರೈ ದೆ„ವಿಕ ಕಾರ್ಯಕ್ರಮಗಳನ್ನು ನಿರೂಪಿಸಿದರು.
ಬೆಳ್ಳಿಪ್ಪಾಡಿ ಹೊಸಮನೆ ರುಕ್ಮಯ್ಯ ಗೌಡ, ಬೆಳ್ಳಿಪ್ಪಾಡಿ ಹೊಸಮನೆ ವಿದ್ಯಾಧರ, ಹೊಸಮನೆ ಜಯರಾಮ ಗೌಡ, ಬಾಳೆಕೋಡಿ ಪ್ರಕಾಶ, ಬಾಳೆಕೋಡಿ ಶ್ರೀನಿವಾಸ ಗೌಡ, ನಡುಬೆ„ಲು ವೀರಪ್ಪ ಸುವರ್ಣ, ಕೊಳಂಬೆ ಗೋಪಣ್ಣ ಗೌಡ, ಧನಂಜಯ ಕುಮಾರ್ ಹಳೆಮನೆ ಅನ್ನಸಂತರ್ಪಣೆಯ ಉಸ್ತುವಾರಿಯಲ್ಲಿ ಸಹಕರಿಸಿದರು. ಬೆಳ್ಳಿಪ್ಪಾಡಿ ರಾಮಕೃಷ್ಣ ಶಗ್ರಿತ್ತಾಯ ನೇತƒತ್ವ ವಹಿಸಿದ್ದರು.