Advertisement

ಟ್ರಯಲ್ ರೂಂನಲ್ಲಿ ಯುವತಿಯ ವಿಡಿಯೋ ಚಿತ್ರೀಕರಣಕ್ಕೆ ಯತ್ನ

10:17 PM Jul 25, 2022 | Team Udayavani |

ಕಾಸರಗೋಡು: ಟ್ರಯಲ್ ರೂಂನಲ್ಲಿ ಯುವತಿಯೊಬ್ಬರು ಬಟ್ಟೆ ಬದಲಾಯಿಸುತ್ತಿರುವ ದೃಶ್ಯವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದ 24 ವರ್ಷದ ಯುವಕನನ್ನು ಬಂಧಿಸಿರುವ ಘಟನೆ ಬಂದ್ಯೋಡು ಪೇಟೆಯ ಅಂಗಡಿಯಲ್ಲಿ ನಡೆದಿದೆ.

Advertisement

ಬಂಧಿತ ಆರೋಪಿಯನ್ನು ಆಸಿಫ್ ಎಂದು ಗುರುತಿಸಲಾಗಿದೆ. ಈತ ಬಂದ್ಯೋಡಿನ ಕ್ರೀಡಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಮಹಿಳೆ ತನ್ನ ಸಂಬಂಧಿಕರೊಂದಿಗೆ ಕ್ರೀಡಾ ಉಡುಪುಗಳನ್ನು ಖರೀದಿಸಲು ಅಂಗಡಿಗೆ ಭೇಟಿ ನೀಡಿದ್ದಳು ಎನ್ನಲಾಗಿದೆ. ಅವರಿಗೆ ಸಹಾಯ ಮಾಡಿದ ಆಸಿಫ್ ಯುವತಿಗೆ ಬಟ್ಟೆ ತೊಡುವಂತೆ ಒತ್ತಾಯಿಸಿದ್ದಾನೆ.

ಆಕೆ ಟ್ರಯಲ್ ರೂಮಿನೊಳಗೆ ಹೋದಾಗ ಆಸಿಫ್ ಆಕೆಯ ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದ. ಅದೃಷ್ಟವಶಾತ್ ಆಸಿಫ್ ನನ್ನು ಗಮನಿಸಿದ ಮಹಿಳೆ ತಕ್ಷಣ ಆತನನ್ನು ವಿಚಾರಿಸಿದ್ದಾರೆ.

ಈ ಕುರಿತು ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಸಿಫ್ ಈ ಹಿಂದೆ ಹಲವಾರು ಇತರ ಮಹಿಳೆಯರ ವೀಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ನಂತರ ತಿಳಿದುಬಂದಿದೆ.ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಪೊಲೀಸರು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next