ಕಾಸರಗೋಡು: ಕೇರಳ ಸ್ಟೇಟ್ ಟೆ„ಲರ್ ಅಸೋಸಿಯೇಶನ್ (ಕೆ.ಎಸ್.ಟಿ.ಎ) ಕಾಸರಗೋಡು ಜಿಲ್ಲಾ ಸಮಾವೇಶ ಕಾಂಞಂಗಾಡು ಕುನ್ನುಮ್ಮಲ್ ಎನ್.ಎಸ್.ಎಸ್. ಕರಯೋಗಂ ಯೂನಿಯನ್ ಮೀಟಿಂಗ್ ಹಾಲ್ನಲ್ಲಿ ಜರಗಿತು.
ಕಾಂಞಂಗಾಡು ನಗರಸಭಾ ಚೇರ್ಮನ್ ವಿ.ವಿ. ರಮೇಶನ್ ಸಮಾರಂಭವನ್ನು ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಮೋಹನ್ದಾಸ್ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲೆಯ 4 ತಾಲೂಕುಗಳಿಂದ ಅತೀ ಹೆಚ್ಚು ಸದಸ್ಯರನ್ನು ಸೇರಿಸಿದ ತಾಲೂಕಿಗಿರುವ ಟ್ರೋಫಿ ವಿತರಣೆ, ಧನಸಹಾಯ ವಿತರಣೆ, 4 ತಾಲೂಕುಗಳಿಂದ ಪೆನ್ಶನ್ ಪಡೆಯುವ ಹಿರಿಯ ಸದಸ್ಯರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎನ್. ದೇವರಾಜನ್, ರಾಜ್ಯಸಮಿತಿ ಉಪಾಧ್ಯಕ್ಷರುಗಳಾದ ಕೆ.ಪಿ.ದಿನೇಶನ್, ರಾಮನ್ ಚೆನ್ನಿಕ್ಕರ, ರಾಜ್ಯಸಮಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್, ಪಿ.ಪದ್ಮನಾಭನ್, ಕಾಸರಗೋಡು ನಗರಸಭಾ ಸದಸ್ಯ ಶಂಕರ ಅಣಂಗೂರು, ಹಿರಿಯ ಸದಸ್ಯರಾದ ಪಿ.ನಾರಾಯಣ, ರಾಮನ್ ಪೊಯೆÂಕಂಡ ಮೊದಲಾದವರು ಮಾತನಾಡಿದರು. ಗಂಗಾಧರನ್, ಕೆ.ವಿ. ದಾಮೋದರನ್, ತಾರಾನಾಥ ಶಿವಶಕ್ತಿ, ಕೆ.ಯಶೋದಾ, ರುಕ್ಮಿಣಿ, ಕೆ.ವಿ. ಬಿಂದು ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಿ. ಭಾಸ್ಕರ ನಾಯರ್ ವರದಿ ಮಂಡಿಸಿದರು. ಕೋಶಾಧಿಕಾರಿ ಸಿ.ಸುರೇಶ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ರಾಧಾಕೃಷ್ಣ ಸರಳಿ ವಂದಿಸಿದರು.