Advertisement
ಕೇರಳದಲ್ಲಿ 339 ಮಂದಿಗೆ ಸೋಂಕುಕೇರಳದಲ್ಲಿ ಗುರುವಾರ 339 ಮಂದಿಗೆ ಸೋಂಕು ದೃಢವಾಗಿದೆ. ಇದೇ ವೇಳೆ 149 ಮಂದಿ ಗುಣಮುಖರಾಗಿದ್ದಾರೆ. ವಿದೇಶದಿಂದ ಬಂದ 117 ಮಂದಿಗೆ, ಇತರ ರಾಜ್ಯಗಳಿಂದ ಬಂದ 74 ಮಂದಿಗೆ ಹಾಗೂ ಸಂಪರ್ಕದಿಂದ 133 ಮಂದಿಗೆ ಸೋಂಕು ಬಾಧಿಸಿದೆ. 7 ಮಂದಿಯ ಸೋಂಕಿನ ಮೂಲಕ ತಿಳಿದಿಲ್ಲ.
ಲಾಕ್‌ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲೆಯಲ್ಲಿ 9 ಪ್ರಕರಣಗಳನ್ನು ದಾಖಲಿಸಲಾಗಿದೆ. 12 ಮಂದಿಯನ್ನು ಬಂಧಿಸಿ ಒಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಮಾಸ್ಕ್ ಧರಿಸದ ಆರೋಪದಲ್ಲಿ 208 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೃತ ವ್ಯಕ್ತಿಗೆ ಪಾಸಿಟಿವ್
ಹುಬ್ಬಳ್ಳಿಯಲ್ಲಿ ವ್ಯಾಪಾರಿಯಾಗಿದ್ದ ಮೊಗ್ರಾಲ್‌ಪುತ್ತೂರು ಕೋಟ್ಟಕುನ್ನು ನಿವಾಸಿ ಬಿ.ಎಂ. ಅಬ್ದುಲ್ ರಹಿಮಾನ್ (55) ಅವರ ಸಾವು ಕೋವಿಡ್ ದಿಂದ ಸಂಭವಿಸಿರುವುದು ದೃಢವಾಗಿದೆ. ಅವರು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು. ಜ್ವರದ ಹಿನ್ನೆಲೆಯಲ್ಲಿ ಜು. 6ರಂದು ಹುಬ್ಬಳ್ಳಿಯಿಂದ ಕಾರಿನಲ್ಲಿ ಕರೆತರಲಾಗಿತ್ತು. ಜು. 7ರ ಮುಂಜಾನೆ 3.30ಕ್ಕೆ ತಲಪಾಡಿ ಚೆಕ್‌ಪೋಸ್ಟ್ ತಲುಪಿ ಇನ್ನೊಂದು ಕಾರಿನಲ್ಲಿ ಊರಿಗೆ ಬರುತ್ತಿದ್ದಾಗ ರಸ್ತೆ ಮಧ್ಯೆ ಜ್ವರ ಉಲ್ಬಣಿಸಿತ್ತು. ನೇರವಾಗಿ ಜನರಲ್ ಆಸ್ಪತ್ರೆಗೆ ಕೊಂಡೊಯ್ದರೂ ಅವರ ಸಾವು ಸಂಭವಿಸಿತ್ತು. ಅವರು ಕಾಸರಗೋಡಿನಲ್ಲಿ ಚಿಕಿತ್ಸೆ ಪಡೆ ಯದೇ ಇರುವುದರಿಂದ ಅವರನ್ನು ಜಿಲ್ಲೆಯ ಯಾದಿಯಲ್ಲಿ ಸೇರ್ಪಡೆಗೊಳಿಸಿಲ್ಲ.