Advertisement
ಮೃತನ ಪ್ರಥಮ ವರದಿ ಪಾಸಿಟಿವ್ಜ್ವರದ ಕಾರಣ ಕರ್ನಾಟಕದ ಹುಬ್ಬಳ್ಳಿಯಿಂದ ಸೋಮವಾರ ಊರಿಗೆ ಬಂದು ಆಸ್ಪತ್ರೆಯಲ್ಲಿ ಸಾವಿಗೀಡಾದ ವ್ಯಾಪಾರಿಯ ಗಂಟಲ ದ್ರವ ಪರೀಕ್ಷೆಯ ಪ್ರಥಮ ವರದಿ ಪಾಸಿಟಿವ್ ಬಂದಿದೆ. ಪರಿಯಾರಂ ಮೆಡಿಕಲ್ ಕಾಲೇಜಿಗೆ ಕಳುಹಿಸಿದ ಮಾದರಿಯ ವರದಿ ಬಂದ ಬಳಿಕ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದಲ್ಲಿ ಬುಧವಾರ 301 ಮಂದಿಗೆಕೊರೊನಾ ಸೋಂಕು ದೃಢವಾಗಿದೆ. ಬಾಧಿತರಲ್ಲಿ 99 ಮಂದಿ ವಿದೇಶದಿಂದಲೂ 95 ಮಂದಿ ಇತರ ರಾಜ್ಯಗಳಿಂದಲೂ ಬಂದವರು. 90 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ಮೂವರು ಆರೋಗ್ಯ ಕಾರ್ಯಕರ್ತರನ್ನೂ ಕೊರೊನಾ ಬಾಧಿಸಿದೆ. 196 ಪ್ರಕರಣ ದಾಖಲು
ಮಾಸ್ಕ್ ಧರಿಸದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ 180 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಲಾಕ್‌ಡೌನ್ ಉಲ್ಲಂಘಿಸಿದ ಆರೋಪದಲ್ಲಿ 16 ಪ್ರಕರಣಗಳನ್ನು ದಾಖಲಿಸಿ 41 ಮಂದಿಯನ್ನು ಬಂಧಿಸಲಾಗಿದೆ. 16 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.