Advertisement

ರೈಲ್‌ನಲ್ಲಿ ಕಾಸರಗೋಡಿನ ಮಹಿಳೆಯ ಬ್ಯಾಗ್‌ ಕಸಿದು ಪರಾರಿ; ದೂರು

11:45 PM Jun 26, 2022 | Team Udayavani |

ಮಂಗಳೂರು : ಕಣ್ಣೂರು-ಯಶವಂತ ಪುರ ರೈಲ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕೈಯಿಂದ ಬೆಳೆಬಾಳುವ ವಸ್ತುಗಳನ್ನು ಹೊಂದಿದ್ದ ವ್ಯಾನಿಟ್‌ ಬ್ಯಾಗ್‌ನ್ನು ಯುವಕನೋರ್ವ ಕಸಿದು ಪರಾರಿಯಾಗಿರುವ ಬಗ್ಗೆ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.

Advertisement

ಕಾಸರಗೋಡಿನ ಚಿನಗೋಲ ನಿವಾಸಿ ಗಣೇಶ್‌ ಪಿ. ಅವರು ಪತ್ನಿ ಹಾಗೂ ಮಗುವಿನೊಂದಿಗೆ ಬೆಂಗಳೂರಿನ ಉತ್ತರ ಹಳ್ಳಿಯಲ್ಲಿ ಕೌಟುಂಬಿಕ ಸಮಾರಂಭವೊಂದರಲ್ಲಿ ಭಾಗವಹಿಸಲು ಜೂ.24ರಂದು ಕಾಸರಗೋಡಿನಿಂದ ಕಣ್ಣೂರು-ಯಶವಂತ ಪುರ ರೈಲ್‌ ಮೂಲಕ ಪ್ರಯಾಣಿಸುತ್ತಿರುವಾಗ ಶ್ರವಣಬೆಳಗೊಳ ಬಳಿ ಕಳವು ಪ್ರಕರಣ ನಡೆದಿದೆ. ವ್ಯಾನಿಟಿ ಬ್ಯಾಗ್‌ನಲ್ಲಿ 2 ಸ್ಮಾರ್ಟ್‌ಫೋನ್‌,ನಗದು, 3 ಎಟಿಎಂ ಕಾರ್ಡ್‌ಗಳು, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಸೇರಿದಂತೆ ದಾಖಲೆ ಪತ್ರಗಳು, ಮಗುವಿನ ಔಷಧಿ ಮುಂತಾದ ವಸ್ತುಗಳಿದ್ದವು.

ರೈಲು ನಸುಕಿನ ವೇಳೆ ಸುಮಾರು 3.30ರ ವೇಳೆಗೆ ಶ್ರವಣಬೆಳಗೊಳ ಸಮೀಪ ನಿಧಾನಗತಿಯಲ್ಲಿ ಸಂಚರಿಸುತ್ತಿತ್ತು. ನನ್ನ ಪತ್ನಿ ಎರಡನೇ ಬರ್ತ್‌ನಲ್ಲಿ ಮಲಗಿದ್ದರು. ನಾನು ಮೇಲಿನ ಬರ್ತ್‌ನಲ್ಲಿ ಮಲಗಿದ್ದೆ. ಪತ್ನಿ ದಿಡೀರ್‌ ಆಗಿ ಬೊಬ್ಬೆ ಹಾಕಿದ್ದು ನಾನು ತತ್‌ಕ್ಷಣ ಎದ್ದು ನೋಡುತ್ತಿದ್ದಾಗ ಸುಮಾರು 35 ವರ್ಷದ ಕೆಂಪು ಟೀಶರ್ಟ್‌ ಧರಿಸಿದ್ದ ವ್ಯಕ್ತಿಯೋರ್ವ ಪತ್ನಿಯ ಕೈಯಲ್ಲಿದ್ದ ವ್ಯಾನಿಟ್‌ ಬ್ಯಾಗ್‌ನ್ನು ಕಸಿದುಕೊಂಡು ಹೋಗುತ್ತಿದ್ದ, ನಾನು ಕೂಡಲೇ ರೈಲ್‌ನ ಚೈನ್‌ ಎಳೆದೆ. ಆದರೆ ಚೈನ್‌ ಕಾರ್ಯನಿರ್ವಹಿಸುತ್ತಿರಲಿಲ್ಲ. ಕಳವು ಮಾಡಿದ್ದ ವ್ಯಕ್ತಿ ಚಲಿಸುತ್ತಿದ್ದ ರೈಲ್‌ನಿಂದ ಜಿಗಿದು ಪರಾರಿಯಾದ . ಘಟನೆ ನಡೆದ ತತ್‌ಕ್ಷಣ ನಾವು ರೈಲ್‌ನಲ್ಲಿ ಭದ್ರತಾ ಸಿಬ್ಬಂದಿ, ಟಿಸಿಗಾಗಿ ಹುಡುಕಾಡಿದೇವು.ಅದರೆ ಯಾರೂ ಸಿಗಲಿಲ್ಲ. ಎಂದು ಗಣೇಶ್‌ ತಿಳಿಸಿದ್ದಾರೆ.

ಬೆಳಗ್ಗೆ 5.30 ಕ್ಕೆ ಯಶವಂತ ಪುರ ರೈಲು ನಿಲ್ದಾಣಕ್ಕೆ ತಲುಪಿದ ಕೂಡಲೇ ರೈಲ್ವೆ ಪೊಲೀಸರಲ್ಲಿ ದೂರು ನೀಡಲು ಪ್ರಯತ್ನಿಸಿದೇವು. ಆದರೆ ಅವರಿಂದ ಪೂರಕ ಸ್ಪಂದನೆ ದೊರಕಲಿಲ್ಲ. ನಾವು ಜೂ.26 ರಂದು ಮಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದೇವೆ. ಇದೇ ರೀತಿ ಆ ರೈಲ್‌ನ ಇನ್ನೊಂದು ಬೋಗಿಯಲ್ಲೂ ಮಹಿಳೆಯ ವ್ಯಾನಿಟಿ ಬ್ಯಾಗ್‌ ಕಸಿದು ಪರಾರಿಯಾಗಿರುವ ವಿಷಯ ನಮಗೆ ತಿಳಿಯಿತು . ಇಂತಹ ಘಟನೆಗಳು ನಡೆಯದಂತೆ ರೈಲ್‌ನಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಬೇಕು, ಮತ್ತು ಈ ರೀತಿಯ ಘಟನೆ ಸಂಭವಿಸಿದಾಗ ತತ್‌ಕ್ಷಣ ಯಾವ ನಂಬರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಬೋಗಿಯ ಪ್ರತಿಯೊಂದು ಕಂಪಾರ್ಟ್‌ಮೆಂಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ನಮೂದಿಸಬೇಕು ಎಂದು ಗಣೇಶ್‌ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next