ಕಾಸರಗೋಡು: ಪ್ರಸಾಧನ ಕಲಾವಿದೆಯನ್ನು ಪ್ರಿಯತಮ ವಸತಿಗೃಹದಲ್ಲಿ ಇರಿದು ಕೊಲೆಗೈದ ಘಟನೆ ನಡೆದಿದೆ.
ಉದುಮ ಮಾಂಗಾಡ್ ಮುಕ್ಕುನ್ನೋತ್ ದೇವಿಕಾ(34) ಅವರನ್ನು ಕೊಲೆಗೈಯ್ಯಲಾಗಿದೆ. ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಕಾಂಞಂಗಾಡ್‌ನ ಪುದಿಯಕೋಟ್ಟ ಪರಿಸರದ ವಸತಿ ಗೃಹದಲ್ಲಿ ಕೊಲೆ ನಡೆದಿರಬೇಕೆಂದು ಶಂಕಿಸಲಾಗಿದೆ.
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಿಯಕರ ಸತೀಶ್ (36) ಕೊಲೆಗೈದ ಬಳಿಕ ಹೊಸದುರ್ಗ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕಾಂಞಂಗಾಡ್ ಡಿವೈಎಸ್‌ಪಿ ಪಿ. ಬಾಲಕೃಷ್ಣನ್, ಸಿ.ಐ.ಕೆ.ಪಿ. ಶೈನ್, ಎಸ್.ಐ.ಕೆ.ವಿ. ಗಣೇಶ್ ವಿಚಾರಣೆ ನಡೆಸುತ್ತಿದ್ದಾರೆ.
ಜತೆಯಾಗಿ ಜೀವಿಸಲು ಮಹಿಳೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆಗೈಯ್ಯಲಾಗಿದೆ ಎಂದು ಸಂಶಯಿಸಲಾಗಿದೆ. ಮಹಿಳೆ ವಿವಾಹಿತಳಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಯುವಕನೂ ವಿವಾಹಿತನಾಗಿದ್ದು ಆತನಿಗೆ ಒಂದು ಮಗು ಇದೆ.