Advertisement

ಕಾಸರಗೋಡು ಜಿಲ್ಲೆಯ ಇನ್ನೋರ್ವನಲ್ಲಿ ಕೋವಿಡ್-19

11:56 PM Mar 19, 2020 | mahesh |

ಕಾಸರಗೋಡು: ಕಾಸರಗೋಡು ಜಿಲ್ಲೆಯ ಇನ್ನೊಬ್ಬ ವ್ಯಕ್ತಿಯಲ್ಲಿ ಕೋವಿಡ್-19 ಸೋಂಕು ದೃಢವಾಗಿದೆ. ಇದರೊಂದಿಗೆ ಕೇರಳದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 25ಕ್ಕೇರಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

47 ವರ್ಷ ಪ್ರಾಯದ ಈ ವ್ಯಕ್ತಿ ಮಾ. 11ರಂದು ಮಧ್ಯರಾತ್ರಿ 2.30ಕ್ಕೆ ದುಬಾೖಯಿಂದ ಹೊರಟು ಬೆಳಗ್ಗೆ 8ಕ್ಕೆ ಕೋಯಿಕ್ಕೋಡ್‌ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಅಂದು ಅಲ್ಲೇ ಇದ್ದು, ಮಾ. 12ರಂದು ಮಾವೇಲಿ ಎಕ್ಸ್‌ ಪ್ರಸ್‌ ರೈಲಿನ ಎಸ್‌ 9 ಬೋಗಿಯಲ್ಲಿ ಕಾಸರಗೋಡಿಗೆ ಬಂದಿಳಿದರು. ಮಾ. 17ರ ತನಕ ಮನೆಯಲ್ಲೇ ಇದ್ದು ಶೀತ, ಜ್ವರ ಬಾಧಿಸಿದ್ದರಿಂದ ಅಂದು ಕಾಸರಗೋಡಿನ ಜನರಲ್‌ ಆಸ್ಪತ್ರೆಗೆ ಆಗಮಿಸಿದರು. ಅವರ ಗಂಟಲ ದ್ರವವನ್ನು ಆಲಪ್ಪುಳದ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಿದಾಗ ಕೊರೊನಾ ವೈರಸ್‌ ಬಾಧಿಸಿರುವುದು ದೃಢವಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ವರೆಗೆ ಮೂವರು ಕೊರೊನಾ ರೋಗದಿಂದ ಗುಣಮುಖರಾಗಿ ದ್ದಾರೆ. ರಾಜ್ಯದಲ್ಲಿ ಇದು ವರೆಗೆ ದೃಢೀಕರಿಸಿದ ಒಟ್ಟು ಕೊರೊನಾ ಬಾಧಿತರ ಸಂಖ್ಯೆ 28. ಒಟ್ಟು 31,173 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 30,936 ಮಂದಿ ಮನೆಗ ಳಲ್ಲೂ 237 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಗುರುವಾರ ರಾಜ್ಯದಲ್ಲಿ ಒಟ್ಟು 64 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೊಸದಾಗಿ 6,103 ಮಂದಿ ನಿಗಾದಲ್ಲಿದ್ದಾರೆ. 5,155 ಮಂದಿಗೆ ಸೋಂಕು ಇಲ್ಲದ್ದರಿಂದ ನಿಗಾದಿಂದ ಮುಕ್ತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next