Advertisement
ನ. 15ರಂದು ರಾತ್ರಿ 8.30ಕ್ಕೆ ರಾಜನ್ ಡೀಸೆಲ್ ಕುಡಿದಿದ್ದರೆನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು: ಅರಣ್ಯ ಇಲಾಖೆಯ ಫ್ಲೈಯಿಂಗ್ ಸ್ಕ್ವಾಡ್ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 130 ಕಿಲೋ ಶ್ರೀಗಂಧದ ಕೊರಡುಗಳನ್ನು ಪತ್ತೆಹಚ್ಚಿ ಹೊಸದುರ್ಗ ಮೂನಾಂಮೈಲ್‌ನ ಕಳತ್ತಿಂಗಾಲ್ ನಿವಾಸಿ ಪ್ರಸಾದ್ (34) ಮತ್ತು ಆತನ ಸಹಚರ ಮೂನಾಂಮೈಲ್‌ನ ಶಿಬುರಾಜ್(43)ನನ್ನು ಬಂಧಿಸಲಾಗಿದೆ. ಎರಡು ಕಾರಗಳನ್ನು ವಶಪಡಿಸಿಕೊಳ್ಳಲಾಗಿದೆ. ರಹಸ್ಯ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿತ್ತು. ಶ್ರೀಗಂಧದ ಕೊರಡುಗಳಿಗೆ ಸುಮಾರು 6.5 ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ. ಪ್ರಸಾದ್‌ನ ಮನೆಯಲ್ಲಿ ಐದು ಗೋಣಿ ಚೀಲದಲ್ಲಿ ತುಂಬಿ ಶ್ರೀಗಂಧದ ಕೊರಡುಗಳನ್ನು ಬಚ್ಚಿಡಲಾಗಿತ್ತು.
Related Articles
ಕಾಸರಗೋಡು: ಚೆನ್ನೈ-ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ನಿವಾಸಿ ಜೆರಿನ್ ಥೋಮಸ್ (27) ಅವರ ಬ್ಯಾಗ್ ಅನ್ನು ಹೊಸದುರ್ಗ ಸಮೀಪ ಕಳವು ಮಾಡಲಾಗಿದೆ. ಬ್ಯಾಗ್‌ನಲ್ಲಿ 20 ಸಾವಿರ ರೂ. ಮೌಲ್ಯದ ಕ್ರಿಸ್ಟಲ್ ಬ್ರಾಸ್‌ಲೆಟ್, 12 ಸಾವಿರ ರೂ. ಮೌಲ್ಯದ ಕನ್ನಡಕ, 3 ಸಾವಿರ ರೂ. ಮೌಲ್ಯದ ವಯರ್‌ಲೆಸ್ ಚಾರ್ಜರ್, 33,315 ರೂ. ಮೌಲ್ಯದ ವಾಲೆಟ್, 16,445 ರೂ. ಮೌಲ್ಯದ ಇಯರ್‌ಫೋನ್ ಇತ್ಯಾದಿಗಳಿದ್ದವು. ಒಟ್ಟು 83,760 ರೂ. ಮೌಲ್ಯದ ಸಾಮಗ್ರಿಗಳು ಕಳವಾಗಿದೆ. ಈ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಲಾಗಿದೆ.
Advertisement