ಕಾಸರಗೋಡು : ಚೆರ್ವತ್ತೂರು ಸಮೀಪದ ತಿಮಿರಿ ಕೋಟಮಲೆಯಲ್ಲಿ ವಿಷಾಹಾರ ಸೇವನೆಯಿಂದಾಗಿ 28ರಷ್ಟು ವಿದ್ಯಾರ್ಥಿಗಳ ಸಹಿತ 120 ಮಂದಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಎಲ್ಲರೂ ಚೇತರಿಸು ತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಸೇವಿಸಿದ ಆಹಾರದ ಸ್ಯಾಂಪಲನ್ನು ರಾಸಾಯನಿಕ ಪ್ರಯೋಗಾಲಯಕ್ಕೆ ಕಳುಹಿ ಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳು ಕನ್ನಟಿಪಾರ, ಚೆಂಬ್ರ ಕಾನ, ತಿಮಿರಿ ನಿವಾಸಿಗಳಾಗಿದ್ದಾರೆ.
ತಿಮಿರಿ ಕೋಟಮಲೆಯಲ್ಲಿ ನಡೆದ ಕಳಿಯಾಟ ಮಹೋತ್ಸವದ ವೇಳೆ ಅನ್ನದಾನ ಏರ್ಪಡಿಸಲಾಗಿತ್ತು. ಅಲ್ಲದೆ ಉತ್ಸವದ ಪರಿಸರದಲ್ಲಿ ಐಸ್‌ಕ್ರೀಮ್ ಮಾರಾಟವಾಗುತ್ತಿತ್ತು. ಯಾವುದರಿಂದ ವಿಷಾಂಶ ಉಂಟಾಗಿತ್ತೆಂಬುದನ್ನು ನಿಖರವಾಗಿ ಹೇಳುವಂತಿಲ್ಲ. ಐಸ್‌ಕ್ರೀಮ್ ಸ್ಯಾಂಪಲನ್ನು ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.